ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಾಣಿ ಬಲಿ ಬಯಸುವ ಅಲ್ಲಾಹು ಹೇಗೆ ಮಹಾನ್: ತಸ್ಲೀಮಾ ಪ್ರಶ್ನೆ

By Srinath
|
Google Oneindia Kannada News

killing-animals-for-food-allah-is-not-great-taslima
ನವದೆಹಲಿ, ನ. 8: ವಿವಾದಾತ್ಮಕ ಲೇಖಕಿ ತಸ್ಲೀಮಾ ನಸ್ರೀನ್ ಮತ್ತೊಂದು ವಿವಾದ ಹುಟ್ಟುಹಾಕಿದ್ದಾಳೆ. ಇಡೀ ದೇಶ ಬಕ್ರಾ ಈದ್ ಸಂಭ್ರಮದಲ್ಲಿ ಬಲಿದಾನದ ಸಂಕೇತವಾಗಿ ಖುರ್ಬಾನಿ ನೀಡುತ್ತಿದ್ದರೆ ಇತ್ತ ತಸ್ಲೀಮಾ ಸಾವಿರಾರು ಮೂಕ ಪ್ರಾಣಿಗಳ ಬಲಿ ಬಯಸುವ ಅಲ್ಲಾಹು ಹೇಗೆ ಮಹಾನ್ ಆಗಲು ಸಾಧ್ಯ ಎಂಬ ಹೇಳಿಕೆ ನೀಡಿ ಮತ್ತೆ ಮುಸ್ಲಿಮರ ಧಾರ್ಮಿಕ ಭಾವನೆ ಕೆದಕಿದ್ದಾರೆ.

ಸದಾ ವಿವಾದಾತ್ಮಕ ಹೇಳಿಕೆ ನೀಡುತ್ತಾ ಬಂದ ಈಕೆ ಬಾರಿ ಸಾವಿರಾರು ಮೂಕ ಪ್ರಾಣಿಗಳ ಬಲಿ ಪಡೆಯುವ ಅಲ್ಲಾ ಹೇಗೆ ಮಹಾನ್ ಆಗಲು ಸಾಧ್ಯ. ಈ ಬಲಿಗಾಗಿ ಅಲ್ಲಾ ಈ ಪ್ರಾಣಿಗಳ ಕ್ಷಮೆ ಕೇಳಬೇಕು ಎಂದು ಟ್ವಿಟ್ಟರ್ ಮೂಲಕ ಹೇಳಿದ್ದಾಳೆ.

ಈಕೆ 1994ರಲ್ಲಿ ವಿವಾದಾತ್ಮಕ ಮುಸ್ಲಿಂ ವಿರೋಧಿ 'ಲಜ್ಜಾ' ಕಾದಂಬರಿ ಬರೆಯುವ ಮೂಲಕ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಬಾಂಗ್ಲಾದೇಶದಿಂದ ಗಡಿಪಾರುಗೊಂಡಿದ್ದಳು. ತದನಂತರ ಭಾರತದಲ್ಲಿ ಆಶ್ರಯ ಪಡೆದಿರುವ ತಸ್ಲೀಮಾ ತನ್ನ ಮುಸ್ಲಿಂ ವಿರೋಧಿ ಬರವಣಿಗೆ ಮುಂದುವರೆಸುತ್ತಾ ಬಂದಿದ್ದಾಳೆ.

ಈ ಹಿಂದೆ ಹೈದರಾಬಾದಿನಲ್ಲಿ ಈಕೆ ಭಾಗವಹಿಸಿದ್ದ ಸಮಾರಂಭವೊಂದರಲ್ಲಿ ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಕಾರ್ಯಕರ್ತರು ಈಕೆಯ ಮೇಲೆ ಹಲ್ಲೆ ನಡೆಸಿ ಈಕೆಯನ್ನು ಭಾರತದಿಂದ ಗಡಿಪಾರು ಮಾಡುವಂತೆ ಸಹ ಒತ್ತಾಯಿಸಿದ್ದರು.

ಮುಸ್ಲಿಂ ಪುರುಷರು ನಾಲ್ಕು ವಿವಾಹವಾಗಲು ಸಾಧ್ಯವಾಗುವುದಾದರೆ ಮಹಿಳೆ ನಾಲ್ಕು ಪುರುಷರನ್ನು ಮದುವೆ ಏಕಾಗಬಾರದು ಎಂದೂ ಈ ಹಿಂದೆ ಈಕೆ ಹೇಳಿದ್ದಳು. ಸನ್ಮಾರ್ಗದಲ್ಲಿ ನಡೆದ ಪುರುಷರಿಗೆ ಸ್ವರ್ಗದಲ್ಲಿ ಎಪ್ಪತ್ತೆರಡು ಸ್ವರ್ಗವಾಸಿ ಕನ್ಯೆಯರು ಸಿಗುತ್ತಾರೆ ಎಂಬ ವಚನವೊಂದನ್ನು ಹಿಯಾಳಿಸಿದ್ದ ಈಕೆ ಈ ಭಾಗ್ಯ ಮಹಿಳೆಯರಿಗೆ ಇಲ್ಲ. ಆದ ಕಾರಣ ಮಹಿಳೆಯರು ಭೂಲೋಕದಲ್ಲೇ ಎಪ್ಪತ್ತೆರಡು ಪುರುಷರ ಜೊತೆ ಸೆಕ್ಸ್ ಮಾಡಬಹುದು ಎಂದಿದ್ದಳು.

English summary
When Muslims the world over are busy in Bakra-Eid celebrations, the controversial Bangladeshi origin author Taslima Nasrin, who has often received death threats over her works, on Sunday sparked a fresh controversy with her tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X