ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಕ್ಕೆ ಟಾಂಗ್ ಕೊಟ್ಟ ಮೇಯರ್ 'ಮರಾಠಿ' ಮಂದಾ

By Mahesh
|
Google Oneindia Kannada News

Mayor Manda Balekundri
ಬೆಳಗಾವಿ, ನ.8: ಕರ್ನಾಟಕ ಸರ್ಕಾರ ಇಬ್ಬಗೆ ನೀತಿ ಅನುಸರಿಸುತ್ತಿದೆ. ಈ ಹಿಂದಿನ ಮೇಯರ್ ಕೂಡಾ ಎಂಇಎಸ್ ಕರಾಳ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ಆಗ ಏಕೆ ಪ್ರಶ್ನಿಸಲಿಲ್ಲ. ನಾನು ಪಾಲ್ಗೊಂಡಿದ್ದರಲ್ಲಿ ತಪ್ಪೇನಿದೆ.

ಸರ್ಕಾರ ನೀಡಿರುವ ನೋಟೀಸ್ ಗೆ ಉತ್ತರಿಸುವ ಅವಶ್ಯಕತೆಯಿಲ್ಲ. ಬೇಕಾದರೂ ನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಲಿ ಎಂದು ಮೇಯರ್ ಮಂದಾ ಬಾಳೇಕುಂದ್ರಿ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ..

ಕನ್ನಡ ವಿರೋಧಿ ಹಣೆಪಟ್ಟಿ ಕಟ್ಟಿಕೊಂಡಿರುವ ಮೇಯರ್ ಮಂದಾ ಬಾಳೇಕುಂದ್ರಿ ಹಾಗೂ ಉಪ ಮೇಯರ್ ರೇಣು ಕಿಲ್ಲೇಕರ್ ಅವರ ಮೇಲೆ ಶೋಕಾಸ್ ನೋಟಿಸ್ ಹೊರಡಿಸಿದ್ದ ಸದಾನಂದ ಗೌಡರ ಸರ್ಕಾರಕ್ಕೆ ಮುಖಭಂಗವಾಗಿದೆ.

16 ಜನ ಪಾಲಿಕೆ ಸದಸ್ಯರನ್ನು ಕರೆದುಕೊಂಡು ಮಾಜಿ ಮೇಯರ್ ಎನ್ ಬಿ ನಿರ್ವಾಣಿ ನೇರವಾಗಿ ಸದಾನಂದ ಗೌಡರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ಸಲ್ಲಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆಯ ಎರಡು ಬಣಗಳು ಕೂಡಾ ಮೇಯರ್ ಮಂದಾ ಹಾಗೂ ಎಂಇಎಸ್ ಬೆಂಬಲಿತ ಪಾಲಿಕೆ ಸದಸ್ಯರ ಸದಸ್ಯತ್ವವನ್ನು ವಜಾಗೊಳಿಸುವಂತೆ ಸದಾನಂದ ಗೌಡರನ್ನು ಆಗ್ರಹಿಸಿದ್ದಾರೆ.

English summary
Mayor Manda Balekundri and Deputy Mayor Renu Killekar snubs DV Sadananda Gowda by not replying to show cause notices. Mandra said government can supercede the city corporation. Karnataka Rakshana Vedike also urged government to dismiss the membership of the mayor, deputy mayor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X