ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಇಂದು ಕರವೇ ವಿಧಾನಸೌಧ ಮುತ್ತಿಗೆ

|
Google Oneindia Kannada News

Narayana Gowda
ಬೆಂಗಳೂರು, ನ. 8 : ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರ ನಿಲ್ಲದ ಆಟಾಟೋಪಗಳನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣ ಮಂಗಳವಾರ (ನ 8) ಬೆಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ. ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಗುರಿಯಿದೆ. ಸುಮಾರು 25 ಸಾವಿರ ಕರವೇ ಕಾರ್ಯಕರ್ತರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು ವಿಧಾನಸೌಧ ಸುತ್ತ ಮುತ್ತ ಸಂಚಾರ ವ್ಯವಸ್ಥೆಯಲ್ಲಿ ಅಸ್ತವ್ಯಸ್ಥ ಸಾಧ್ಯತೆಯೇ ಹೆಚ್ಚು.

ಮೆಜಿಸ್ಟಿಕ್ ಪ್ರದೇಶದ ಬನಪ್ಪ ಪಾರ್ಕಿನಿಂದ ( ತುಳಸಿತೋಟ) ಬೆಳಗ್ಗೆ 11 ಕ್ಕೆ ಆರಂಭವಾಗುವ ಮೆರವಣಿಗೆ ವಿಧಾನಸೌಧದವರೆಗೆ ಸಾಗಲಿದೆ. ಕನ್ನಡ ರಾಜ್ಯೋತ್ಸವದಿನದಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ಬೆಳಗಾವಿಯಲ್ಲಿ ಗಲಾಟೆ ಎಬ್ಬಿಸಿದ್ದಿಲ್ಲದೆ ಮೇಯರ್ ಮುಂದಾ ಬಾಳೆಕುಂದ್ರಿ ಕನ್ನಡಿಗರನ್ನು ಗೂಂಡಾಗಳು ಎಂದು ಬಣ್ಣಿಸಿದ್ದ ವಿರುದ್ಧ ಕರವೇ ಕಿಡಿಕಾರುತ್ತಿದೆ.

ಕರವೇ ಮೆರವಣಿಗೆ ಅಥವಾ ಚಳುವಳಿ ಎಂದರೆ ಸರಕಾರ ಮತ್ತು ಪೋಲೀಸ್ ಇಲಾಖೆಗೆ ಬಿಸಿ ಮುಟ್ಟುವುದು ಸಹಜ. ಹೀಗಾಗಿ ಪೋಲೀಸ್ ಈಗಾಗಲೇ ವಿಧಾನಸೌಧದ ಸುತ್ತಮುತ್ತ ಭಾರೀ ಬಂದೋಬಸ್ತ್ ನಡೆಸಿದೆ. ಈ ನಡುವೆ ನಗರದಲ್ಲಿ ಇಂದು (ನ 8) ಕರ್ನಾಟಕ ಕ್ಷತ್ರಿಯ ಮರಾಠ ಮಹಾಒಕ್ಕೂಟದ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ರಾಜ್ಯ ಕ್ಷತ್ರಿಯ ಮರಾಠ ಮುಖಂಡರ ಸಮಾವೇಶ ನಡೆಯಲಿದ್ದು, ಎಂಇಎಸ್ ಸಂಘಟನೆಯನ್ನು ಕರ್ನಾಟಕ ನಿಷೇಧಿಸಬೇಕು ಎನ್ನುವುದು ಮರಾಠಿ ಸಂಘದ ಸದಸ್ಯರು ಒಕ್ಕೂರಲಿನ ಒತ್ತಾಯ.

English summary
Pro Kannada org KARAVE (Narayana Gowda group) has organized a march ಇನ್ Bangalore against atrocities of MES activists in KarnatakaMaharashtra border area, Belgaum. The procession will begin (at 11 AM on Tuesday) from Banappa Park in Majestic area and will go up to Vidhana Soudha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X