ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೇಪರ್ ವೈಟ್ನರ್ ಎಂಬ ಸಾವಿನ ಕೂಪದಲ್ಲಿ ಇಸಿಟಿ!

By * ಮಾಲತೇಶ್ ಮಂಜುನಾಥ್, ಎಲೆಕ್ಟ್ರಾನಿಕ್ ಸಿಟಿ
|
Google Oneindia Kannada News

Whitner is more harmful alcohol
ಪೇಪರ್ ವೈಟ್ನರ್ ಅನ್ನು ನಾವು ಯಾತಕ್ಕಾಗಿ ಉಪಯೋಗಿಸುತ್ತೇವೆ? ಬರವಣಿಗೆಯಲ್ಲಿ ಆಗುವ ತಪ್ಪುಗಳನ್ನು ಸರಿಪಡಿಸಲು. ಆದರೆ ಇದು ಸಹಜ ಉತ್ತರ ಇಂದು ಈ ಸಹಜ ಉತ್ತರ ಅಸಹಜವಾಗಿದೆ!!

ಹೌದು ಇಂದು ಎಷ್ಟೊ ಮಕ್ಕಳು ಈ ವೈಟ್ನರ್(ರಾಸಾಯನಿಕ ದ್ರಾವಕ) ಅನ್ನು ಮಾದಕ ವಸ್ತುವಿನರೀತಿಯಲ್ಲಿ ಬಳಸುತ್ತಿದ್ದಾರೆ. ಅದನ್ನು ಕಂಡು ಕೂಡ ಕಾಣದಂತೆ ನಮ್ಮ 'ಕುರುಡು'ಸರ್ಕಾರ, ಪೊಲೀಸ್ ಇಲಾಖೆ ವರ್ತಿಸುತ್ತಿದೆ.

ವಿಶ್ವದ ಪ್ರಮುಖ ಐಟಿ ನಗರ ಎಂದೆನಿಸಿಕೊಂಡಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೊಂತು ಈ ವೈಟ್ನರ್ ಹಾವಳಿ ಜಾಸ್ತಿಯಾಗಿದೆ. ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಸಾವಿನ ವರದಿಗಳು ಬರುತ್ತಿದ್ದರು ಅದು ಹೊರಗೆ ಬರದೆ ಹಾಗೆ'ಮುಚ್ಚಿ' ಹೊಗುತ್ತಿದೆ.

ಇಷ್ಟಾದರು ಸರ್ಕಾರವಾಗಲಿ ಅಥವಾ ಬುದ್ಧಿಜೀವಿಗಳಾಗಲಿ ಇದರ ಬಗ್ಗೆ ಕ್ರಮವಿರಲಿ ಚಿಂತನೆಯನ್ನೂ ನಡೆಸುತ್ತಿಲ್ಲ.ಈ ಮೃತ್ಯುಕೂಪಕ್ಕೆ ಬಿದ್ದವರಲ್ಲಿ ಚಿಂದಿ ಆಯುವ ಬಡಮಕ್ಕಳದ್ದೆ ಸಿಂಹಪಾಲು. ಉಳಿದಂತೆ ಸುತ್ತಮುತ್ತಲಿನ ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳು ಕೂಡಾ ಈ ವ್ಯಸನಕ್ಕೆ ಸಿಲುಕಿದ್ದಾರೆ.

ಹಾಗಂತ ವಿದ್ಯಾರ್ಥಿಗಳಾಗಲಿ ಅಥವಾ ಇನ್ನಿತರ ಮಕ್ಕಳಾಗಲಿ ಏನೂ ಕಡಿಮೆ ಇಲ್ಲ ಅವರೂ ತಿಳಿದೊ ಅಥವಾ ತಿಳಿಯದೆಯೋ ಈ ಮೃತ್ಯುವನ್ನು ತಮ್ಮ ಮುಗ್ಧಮನಸ್ಸಿನಿಂದ ತಮ್ಮ ಎಳೆಯ ಕೈಗಳಲ್ಲಿ 'ಬಿಗಿ'ದಪ್ಪಿಕೊಂಡವರೆ. ಇಲ್ಲಿ ಮಕ್ಕಳುಗಳೆ ಹೆಚ್ಚು ಎಂಬುದು ವಿಷಾದಕರ ಸಂಗತಿ.

ಈ ವಿಚಾರವನ್ನು ನಮ್ಮ ಸರ್ಕಾರ ಇನ್ನಾದರು ಗಂಭಿರವಾಗಿ ಪರಿಗಣಿಸಲಿ.ಇಲ್ಲವಾದರೆ ಇಂದಿನ ಮಕ್ಕಳೆ ನಮ್ಮನಾಡಿನ ನಾಳಿನ ಪ್ರಜೆಗಳು ಎನ್ನುವ ನಾಣ್ನುಡಿಯನ್ನು ಮರೆಯ ಬೇಕಾಗುತ್ತದೆ. ಏಕೆಂದರೆ ಭದ್ರ ಬುನಾದಿ ಇಲ್ಲದೆ ಈ ರೀತಿ ಮಾದಕ ವ್ಯಸನಕ್ಕೆ ಬಿದ್ದ ಮಕ್ಕಳು ಹೇಗೆತಾನೆ ನಮ್ಮನಾಡಿನ ಮುಂದಿನ ಪ್ರಜೆಗಳಾಗಲು ಸಾಧ್ಯ?

ತಂಬಾಕನ್ನು ಹೇಗೆ ಹದಿನೆಂಟು ವರ್ಷದೊಳಗಿನ ಮಕ್ಕಳು ಕೊಳ್ಳುವ ಮತ್ತು ಮಾರುವ ಹಾಗಿಲ್ಲವೊ ಅದೇ ರೀತಿಯ ಕಾನೂನನ್ನು ಇಲ್ಲಿಯೂ ಈ ವಿಚಾರದಲ್ಲಿ
ಅಳವಡಿಸಬೇಕಾಗಿದೆ.ಇಲ್ಲವಾದಲ್ಲಿ ಭವಿಷ್ಯದ ಪ್ರಜೆಗಳು ಬಾಡಿಹೊಗುತ್ತಾರೆ. ಅದು ಮೊಳಕೆಯಲ್ಲೇ!!

English summary
Youths mainly scrap collectors, garbage vendors and some Bangalore college students are addicted to fabric whitener and use them as drugs. Electronic city police are yet to inspect and curb the menace report from Citizen journalist Malatesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X