ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸ್ಕತ್ತು ತಿನ್ನಿಸಿ, ಟ್ಯಾಬ್ಲೆಟ್ಟು ನುಂಗಿಸಿದ ಶ್ರೀನಿಧಿ ಪುಸ್ತಕ

By * ವಿಕಾಸ ಹೆಗಡೆ, ಬೆಂಗಳೂರು
|
Google Oneindia Kannada News

Tinnalagada biskattu nungalagada tyablettu book release
ಕನ್ನಡದ ತಂತ್ರಜ್ಞಾನ ಸಾಹಿತ್ಯಕ್ಕೆ ಮತ್ತೊಂದು ವಿಶಿಷ್ಟ ಪುಸ್ತಕ ಸೇರ್ಪಡೆಯಾಗಿದೆ. 'ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು' ಎಂಬ ಹೆಸರಿನ ಈ ಪುಸ್ತಕ ನವೆಂಬರ್ 6, ಭಾನುವಾರ ಸಂಜೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಲೋಕಾರ್ಪಣೆಯಾಯಿತು.

ಯುವಬರಹಗಾರ, ಅಂಕಣಕಾರ ಶ್ರೀನಿಧಿ ಟಿ.ಜಿ.ಯವರ ಈ ಪುಸ್ತಕವನ್ನು ಪ್ರೊ,ಜಿ.ವೆಂಕಟಸುಬ್ಬಯ್ಯ ಹಾಗೂ ಮಠ ಗುರುಪ್ರಸಾದ್ ಬಿಡುಗಡೆ ಮಾಡಿ ಮಾತನಾಡಿದರು. www.ejnana.com ಮತ್ತು 'ಆಕೃತಿ ಪುಸ್ತಕ'ದಿಂದ ಪ್ರಕಟವಾಗಿರುವ ಈ ಪುಸ್ತಕಕ್ಕೆ ಅದರಲ್ಲಿನ ಉಪಯುಕ್ತ ವಿಷಯಗಳಿಗೆ ಮತ್ತು ಸರಳ ಭಾಷೆಯ ಬಳಕೆಗೆ ಅತಿಥಿಗಳಿಂದ, ಹಿರಿಯರಿಂದ ಶಭಾಷ್ಗಿರಿ ದೊರಕಿತು.

ಜೋಶ್ ತುಂಬಿದ ಜೋಶಿ ಭಾಷಣ:
ಅಂಕಣಕಾರ ಶ್ರೀವತ್ಸಜೋಶಿಯವರು ಅಮೆರಿಕಾದಲ್ಲೇ ಕುಳಿತು ಈ ಪುಸ್ತಕದ ಬಗ್ಗೆ ಮಾತನಾಡಿದ್ದು, ಅದನ್ನು ಸಭಾಂಗಣದಲ್ಲಿ ಪ್ರಸಾರ ಮಾಡಿದ್ದು ವಿಶೇಷವಾಗಿದ್ದು ಕಾರ್ಯಕ್ರಮಕ್ಕೆ ಒಂದು ತಾಂತ್ರಿಕ ಕಳೆ ತಂದುಕೊಟ್ಟಿತು.

ಬಹುಶಃ ಪ್ರಪ್ರಥಮ ಇ ಭಾಷಣ ಇದೇ ಎನಿಸುತ್ತದೆ. ಭಾಷಣದ ಸಂಪೂರ್ಣ ವಿಡಿಯೋ ಇಲ್ಲಿದೆ ನೋಡಿ

ಭಾಷೆ ಬೆಳೆಯಬೇಕು: ಭಾಷಾತಜ್ಞ ಪ್ರೊ.ಜಿ.ವಿ. ಪುಸ್ತಕದ ಭಾಷೆಯ ಬಗ್ಗೆ ಬಹಳ ಸಂತಸಪಟ್ಟರು. ಪಾರಿಭಾಷಿಕ ಶಬ್ದಗಳ ಭಾರದಿಂದ ನಲುಗದೇ ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತಹ ಭಾಷೆ ಮತ್ತು ಪದಗಳನ್ನು ಬಳಸಿ ಬರೆದಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಂಪ್ಯೂಟರ್ ಮುಂತಾದ ತಂತ್ರಜ್ಞಾನ ಸಂಬಂಧಿತ ಪದಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಆಭಾಸ ಮಾಡುವುದರ ಬದಲು ಹಾಗೆಯೇ ಬಳಸಿದರೆ ಜನಕ್ಕೆ ಅರ್ಥವೂ ಆಗುತ್ತದೆ ಮತ್ತು ಭಾಷೆಯೂ ಬೆಳೆಯುತ್ತದೆ ಎಂದು ಹೇಳಿದರು.

ಶಾಲಾಶಿಕ್ಷಣದ ಪಠ್ಯಕ್ರಮದಲ್ಲಿ ಈ ಪದ್ಧತಿಯನ್ನು ಮೊದಲಿಂದಲೇ ಅಳವಡಿಸಿದ್ದರೆ ಇವತ್ತು ಕನ್ನಡ ಮಾಧ್ಯಮ, ಇಂಗ್ಲೀಷ್ ಮಾಧ್ಯಮ ತಾರತಮ್ಯ ಇರುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

ತಮಗೆ ಕಂಪ್ಯೂಟರ್ ಬಳಕೆ ಬಗ್ಗೆ ಅಷ್ಟು ತಿಳುವಳಿಕೆ ಇಲ್ಲದಿದ್ದರೂ ಕೂಡ ಈ ಪುಸ್ತಕವನ್ನು ಓದಿದ ಮೇಲೆ ಅದರಲ್ಲಿನ ವಿಚಾರಗಳು ಅರ್ಥವಾದವು, ಆದ್ದರಿಂದ ಇದು ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ ಬಹಳ ಸಹಾಯವಾಗುತ್ತದೆ ಮತ್ತು ತಂತ್ರಜ್ಞಾನದ ಬಗ್ಗೆ ಕನ್ನಡದಲ್ಲಿ ಬರೆಯುವವರಿಗೆ ಇದು ಮಾದರಿ ಪುಸ್ತಕ ಎಂದರು.

ಸಿನೆಮಾಗೆ ಬರಹಗಾರರು ಬೇಕು ಎಂದ ಮಠ ನಿರ್ದೇಶಕ ಗುರುಪ್ರಸಾದ್ ಭಾಷಣ ಹೇಗಿತ್ತು? ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು ಪುಸ್ತಕದಲ್ಲಿ ಅಂಥದ್ದೇನಿದೆ? ಮುಂದೆ ಓದಿ...

English summary
Tinnalagada biskattu nungalagada tyablettu-a Kannada Book published by Akruthi publisher written by TG Srinidhi launched on Nov.6 in Bangalore by Prof. G Venkatasubbaiah, Director Guruprasad and Srivatsa Joshi's internet speech was the highlight reports Vikas Hegde.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X