ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಮರ ಬರ್ತ್‌ಡೇ ಕೇಕಿಗೆ ಶರಿಯತ್ ಕೊಕ್ಕೆ

|
Google Oneindia Kannada News

Fatwa
ಮುಜಫರ್ ನಗರ, ನ. 7: ಇಸ್ಲಾಂ ಧರ್ಮದ ಪ್ರಕಾರ ಮುಸಲ್ಮಾನರು ಹುಟ್ಟುಹಬ್ಬ ಆಚರಿಸುವುದು ಸಮ್ಮತವಲ್ಲ ಮತ್ತು ಇದು ಇಸ್ಲಾಂ ಧರ್ಮದ ವಿರುದ್ದವಾಗಿದೆ ಎಂದು ಧಾರ್ಮಿಕ ಸಂಘಟನೆ ದಾರುಲ್ ಉಲೇಮಾ ಫತ್ವಾ ಹೊರಡಿಸಿದೆ. ಹುಟ್ಟುಹಬ್ಬ ಆಚರಿಸುವುದು ಪಾಶ್ಚಿಮಾತ್ಯರ ಸಂಪ್ರದಾಯವೇ ವಿನಾ ಅದು ನಮ್ಮ ಸಂಪ್ರದಾಯವಲ್ಲ ಎಂದು ಸ್ಪಷ್ಟಪಡಿಸಿದೆ.

ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ವಿಧ್ಯಾರ್ಥಿನಿಯೊಬ್ಬಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಂಘಟನೆಯ ಹಿರಿಯ ಸದಸ್ಯ ಮೌಲಾನ ಅಬ್ದುಲ್ ಕಾಸಿಂ, ಮುಸ್ಲಿಮರು ಹುಟ್ಟುಹಬ್ಬ ಆಚರಿಸುವುದು ಶರಿಯತ್ ಕಾನೂನಿಗೆ ವಿರುದ್ದ ಮತ್ತು ಪ್ರವಾದಿ ಮಹಮ್ಮದ ಜನ್ಮದಿನವನ್ನು ಆಚರಿಸುವುದೂ ಇಸ್ಲಾಂ ಸಂಪ್ರದಾಯವಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಅಲಿಘಡ ವಿಶ್ವವಿದ್ಯಾಲಯದ ಸಂಸ್ಥಾಪಕ ಸರ್ ಸಯ್ಯದ್ ಅಹಮದ್ ಖಾನ್ ಅವರ ಹುಟ್ಟುಹಬ್ಬ ಜನ್ಮದಿನಾಚರಣೆಯ ಸಂದರ್ಭದಲ್ಲೇ ಈ ವಿಷಯ ಪ್ರಸ್ತಾಪಿಸಿದ ಕಾಸಿಂ, ನಮ್ಮ ಧರ್ಮದ ವಿರುದ್ದವಾಗಿ ನಡೆದುಕೊಳ್ಳಬಾರದೆಂದು ಫರ್ಮಾನು ಹೊರಡಿಸಿದ್ದಾರೆ.

English summary
Islam does not permit birthday celebrations as they are against the Shariat law. Celebrating Bday is "tradition of western countries and not ours ( Islam)" . So says a Fatwa released by Darul Uloom Deoband, Maulana Abul Kasim Naumani. He was speaking in an event in Aligarh University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X