ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಗಾರಪೇಟೆಯ ಸ್ಟಾಂಪ್ ವೆಂಡರ್ ಮಗ ನ್ಯಾ ಸುಧೀಂದ್ರರಾವ್

By Srinath
|
Google Oneindia Kannada News

lokayukta-judge-sudhindrarao-son-of-stamp-vendor
ಬೆಂಗಳೂರು, ನ.7: ಯಥಾ ನ್ಯಾಯಾಧೀಶ ತಥಾ ನ್ಯಾಯ ಎಂಬುದನ್ನು ಸಮರ್ಥವಾಗಿ ಸಾಬೀತುಪಡಿಸಿರುವ ಲೋಕಾಯುಕ್ತ ವಿಶೇಷ ಕೋರ್ಟಿನ ನ್ಯಾಯಮೂರ್ತಿ ಎನ್ಕೆ ಸುಧೀಂದ್ರರಾವ್ ಬಂಗಾರಪೇಟೆಯ ಬಂಗಾರದಂತಹ ನ್ಯಾಯಪರ ವ್ಯಕ್ತಿ.

ಎನ್ಕೆ ಸುಧೀಂದ್ರರಾವ್ ಹುಟ್ಟಿದ್ದು ಕಡುಬಡತನದ ಕುಟುಂಬದಲ್ಲಿ. ಇವರ ತಂದೆ ಮೂಲತಃ ಮುಳಬಾಗಲಿನ ನಂಗಲಿ ಗ್ರಾಮದವರಾದರೂ ಜೀವನೋಪಾಯಕ್ಕಾಗಿ ಪಕ್ಕದ ಬಂಗಾರುಪೇಟೆಯಲ್ಲಿ ನೆಲೆಸಿದರು. ಅಲ್ಲಿ ಸ್ಟಾಂಪ್ ವೆಂಡರ್ ಆಗಿ ಜೀವನ ಕಟ್ಟಿಕೊಂಡರು. 1958ರಲ್ಲಿ ಅಪ್ಪಟ ಮಾಧ್ವ ಕುಟುಂಬದಲ್ಲಿ ಜನಿಸಿದ ಎನ್ಕೆ ಸುಧೀಂದ್ರ, ಮೂವರು ಸೋದರರ ಪೈಕಿ ಕೊನೆಯವ.

ಎನ್ಕೆ ಸುಧೀಂದ್ರ ಚಿಕ್ಕಂದಿನಲ್ಲೇ ಅಪ್ಪ ಮತ್ತು ಒಬ್ಬ ಸೋದರನನ್ನು ಕಳೆದುಕೊಂಡರು. ಅಣ್ಣ ಬದರಿನಾಥ್ ಸಹ ಸ್ಟಾಂಪ್ ವೆಂಡರ್ ಆಗಿ, ಕುಟುಂಬದ ಪೋಷಣೆಯ ಜವಾಬ್ದಾರಿ ಹೊತ್ತರು. ಎನ್ಕೆ ಸುಧೀಂದ್ರ ಕುಟುಂಬದಲ್ಲಿ ಕಾನೂನು ಪದವಿ ಪಡೆದ ಮೊದಲಿಗರು. ಮುಂದೆ ತಾವು ಕೆಜಿಎಫ್ ಕಾನೂನು ಕಾಲೇಜಿನಲ್ಲಿ (ಈಗಿನ ಕೆಂಗಲ್ ಹನುಮಂತಯ್ಯ ಕಾನೂನು ಕಾಲೇಜು) ಲೆಕ್ಚರರ್ ಸಹ ಆದರು.

English summary
The upright Lokayukta judge N K Sudhindra Rao’s father was a stamp vendor in Bangarpet. Born in 1958, Rao is the youngest of three sons of this Madhva Brahmin, who originally hailed from Mulbagal’s Nangali village. Judge Sudhindrarao is still debt ridden, promptly repaying his home loan in Bangarpet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X