ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಸೂ ಇಲ್ಲ ಕಾಸೂ ಇಲ್ಲ: ಇಂದಿಗೂ ಮನೆ ಸಾಲ ಕಟ್ಟುತ್ತಿರುವ ನ್ಯಾಯಾಧೀಶ

By Srinath
|
Google Oneindia Kannada News

lokayukta-judge-sudhindra-still-debt-ridden
ಬೆಂಗಳೂರು, ನ.7: ಬಂಗಾರಪೇಟೆಯಂತಹ ಚಿಕ್ಕ ಊರಿನಲ್ಲಿ ಕೇಸೂ ಇಲ್ಲ ಕಾಸೂ ಇಲ್ಲ ಎಂಬ ಪರಿಸ್ಥಿತಿ ಎನ್ಕೆ ಸುಧೀಂದ್ರ ಅವರದು. ಆಗ ತಮ್ಮ ಕುಟುಂಬ ನಿಭಾಯಿಸಲು ಎಂಟು ಹಸುಗಳನ್ನು ಮನೆ ಮುಂದೆ ಕಟ್ಟಿದರು. ಎರಡು ಹಸುಗಳು ಅಸುನೀಗಿ, ಡೈರಿಯಿಂದ ಏನೂ ಗಿಟ್ಟುಪಾಟು ಆಗದಿದ್ದಾಗ ಮತ್ತೆ ಕಾನೂನು ಕೃಷಿಯತ್ತ ಹೊರಳಿದರು.

ಮುಂದೆ ಕಾನೂನು ಕೃಷಿ ಕೈಹಿಡಿದು ಎನ್ಕೆ ಸುಧೀಂದ್ರರಾವ್ ಅವರನ್ನು ನಿರ್ಭೀತ ನ್ಯಾಯಮೂರ್ತಿಯನ್ನಾಗಿಸಿ, ಇದೀಗ ಭ್ರಷ್ಟ ರಾಜಕಾರಣಿಗಳಿಗೆ ಬೆವರಿಳಿಸುತ್ತಿದ್ದಾರೆ. 2003ರಲ್ಲಿ ನೇರವಾಗಿ ಸೆಷನ್ಸ್ ಜಡ್ಜ್ ಆಗಿ ನೇಮಕಗೊಂಡ ನ್ಯಾ. ಸುಧೀಂದ್ರ ವೆರಿ ಸ್ಟ್ರಿಕ್ಟ್ ಜಡ್ಜ್ ಆಗಿದ್ದರೂ ಅವರ ಸಮೀಪವರ್ತಿಗಳು ಹೇಳುವಂತೆ ಅವರೊಬ್ಬ ಅಪ್ಪಟ ಮಾನವತಾವಾದಿ. ಲಘು ನಗೆಯ ಲಘುಬಗೆ ಮನುಷ್ಯ. ಇಂತಹವರು ಸ್ನೇಹ ಪರರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಸುಧೀಂದ್ರರಾವ್ ಬಹುತೇಕ ಇತರೆ ನ್ಯಾಯಮೂರ್ತಿಗಳಂತೆ ಅನ್ಯಾಯದ ಹಾದಿ ಹಿಡಿದಿದ್ದರೆ ಕೋಟ್ಯಂತರ ರುಪಾಯಿ ಗಳಿಸಬಹುದಿತ್ತು. ಹಾಗೆಯೇ, ಆ ಭ್ರಷ್ಟರಂತೆ ನಿವೇಶನಗಳನ್ನು ಪಡೆದು ಒಂದಾದ ಮೇಲೊಂದರಂತೆ ಮನೆ ಕಟ್ಟಿಸಬಹುದಿತ್ತು. ಆದರೆ ಹುಟ್ಟೂರಿನಲ್ಲಿ ಕಟ್ಟಿದ ಹಳೆಯ ಮನೆಗಾಗಿ ಪಡೆದಿದ್ದ ಬ್ಯಾಂಕ್ ಸಾಲವನ್ನು ಇಂದಿಗೂ ನ್ಯಾಯಯುತವಾಗಿ ಕಟ್ಟುತ್ತಿದ್ದಾರೆ.

English summary
The upright Lokayukta judge N K Sudhindra Rao is married to a Bangalorean. Judge NK Sudhindra is from Bangarpet a small town in Kolar district. Judge Sudhindrarao is still debt ridden, promptly repaying his home loan in Bangarpet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X