ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಹದ್ಯೋಗಿ ರೇಪ್ ಮಾಡಿ ಎಂಎಂಎಸ್ ಹಂಚಿದವ ಬಲೆಗೆ

By Mahesh
|
Google Oneindia Kannada News

Pune: Man rapes married collegue, films, circulates MMS
ಪುಣೆ, ನ.6: ಖಾಸಗಿ ಕಂಪನಿಯ ಉದ್ಯೋಗಿಯೊಬ್ಬ ತನ್ನ ಸಹದ್ಯೋಗಿಯನ್ನು ರೇಪ್ ಮಾಡಿ ಬೆದರಿಸಿ ವಿಡಿಯೋ ಚಿತ್ರಿಸಿ, ಎಂಎಂಎಸ್ ಮಾಡಿ ಹಂಚುತ್ತಿದ್ದ. ಚಕನ್ ನಲ್ಲಿ ನಡೆದ ಈ ಘಟನೆಯ ಬೆನ್ನು ಹತ್ತಿದ ಲೊನಿ ಕಲ್ಭೋರ್ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಂಪನಿ ಅವಳಿಗೆ ಬಾಕಿ ಮೊತ್ತ ಎಂದು 40,000 ರೂ ನೀಡಿತ್ತು. ಅದೇ ಖುಷಿಯಲ್ಲಿ ಅವಳು ಎಲ್ಲಾ ಸಹದ್ಯೋಗಿಗಳಿಗೂ ಪಾರ್ಟಿ ಕೊಡಿಸಿದಳು. ಅದರೆ, ಆರೋಪಿ ಆ ಪಾರ್ಟಿಗೆ ಬಂದಿರಲಿಲ್ಲ.

ಚಕನ್ ನ ಖಾಸಗಿ ಸಂಸ್ಥೆಯ ಉದ್ಯೋಗಿಗಳಾಗಿದ್ದ ಇಬ್ಬರ ನಡುವೆ ಯಾವುದೇ ಅನೈತಿಕ ಸಂಬಂಧವಿರಲಿಲ್ಲ. ಆದರೆ, ಆರೋಪಿ ಮಾತ್ರ ವಿವಾಹಿತ ಸಹದ್ಯೋಗಿಯ ಮೇಲೆ ಕಾಮದೃಷ್ಟಿ ಬೀರಿದ್ದ.

ನನಗೆ ಬೇರೆ ಪಾರ್ಟಿ ಕೊಡಿಸು ಎಂದು ಪೀಡಿಸತೊಡಗಿದ. ಅವನ ಕಾಟ ತಡೆಯಲಾಗದೆ, ವಡಿಕಾನ್ ನ ರೆಸ್ಟೋರೆಂಟ್ ನಲ್ಲಿ ಅವನಿಗೆ ಟ್ರೀಟ್ ಕೊಡಿಸಿದಳು.

ಮುಂದಿನದು ದುರಂತ: ಆದರೆ, ಅಲ್ಲಿ ನಡೆದಿದ್ದೆ ಬೇರೆ, ಕೈಯಲ್ಲಿ ಆಯುಧ ಹಿಡಿದ ಆರೋಪಿ ಆಕೆಯನ್ನು ಹೆದರಿಸುತ್ತಾ ಆಕೆಯನ್ನು ಲಾಡ್ಜ್ ನಲ್ಲಿ ದೂಡಿ ಅತ್ಯಾಚಾರ ಎಸೆಗಿ, ವಿಡಿಯೋ ಚಿತ್ರೀಕರಣ ಮಾಡಿಟ್ಟುಕೊಂಡ. ಯಾರಿಗಾದರೂ ಹೇಳಿದರೆ ಎಂಎಂಎಸ್ ಹಂಚುವುದಾಗಿ ಬೆದರಿಕೆ ಹಾಕಿದ.

ಅವನ ಬೆದರಿಕೆಗೆ ಹೆದರಿದ ಆಕೆ ತನ್ನ ಪಾಡಿಗೆ ತಾನಿದ್ದು, ಕಚೇರಿಗೆ ಎಂದಿನಂತೆ ಹಾಜರಾದಳು.ಆದರೆ, ಅವನು ಆಗಲೇ ಕಚೇರಿಯಲ್ಲಿ ಎಂಎಂಎಸ್ ವೈರಸ್ ಹಬ್ಬಿಸಿದ್ದ. ವಿಧಿಯಿಲ್ಲದೆ ಆಕೆ ತನ್ನ ಪತಿಯನ್ನು ಕರೆದುಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದಳು.

ಆರೋಪಿ ಬೆದರಿಕೆ ಕರೆ ಜೊತೆಗೆ 11 ಸಾವಿರ ರೂ ನೀಡುವಂತೆ ಪೀಡಿಸಿದ್ದ ಕಾಲ್ ರೆಕಾರ್ಡ್ ಪಡೆದು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಲ್ಲಿರಿಸಿದ್ದೇವೆ ಎಂದು ಠಾಣಾಧಿಕಾರಿ ಸುಹಾಸ್ ಹೇಳಿದ್ದಾರೆ.

English summary
A 27-year-old man was arrested by the Loni Kalbhor police for allegedly raping and circulating the MMS clip of the entire act. The accused and the victim were employees of a private company in Chakan said Suhas Garud, Loni Kalbhor police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X