ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕ ಮುನಿರಾಜು ಮೇಲೆ FIR, ಸೆರೆ ಯಾವಾಗ?

By Mahesh
|
Google Oneindia Kannada News

FIR against BJP MLA Muniraju
ಬೆಂಗಳೂರು, ನ.6: ಭೂ ಹಗರಣದ ಸುಳಿಯಲ್ಲಿ ಸಿಲುಕಿರುವ ದಾಸರಹಳ್ಳಿ ಶಾಸಕ ಎಸ್ ಮುನಿರಾಜು ಅವರ ಬಂಧನ ಭೀತಿ ಇನ್ನೂ ಹೆಚ್ಚಾಗಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 156(3)ನೇ ಕಲಂ ಅಡಿಯಲ್ಲಿ ಎಸ್. ಮುನಿರಾಜು ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.

ಕೆರೆಗುಡ್ಡದಹಳ್ಳಿ ನಿವಾಸಿ ಪುಟ್ಟಸ್ವಾಮಿ ಎಂಬವರು ಸಲ್ಲಿಸಿದ್ದ ಖಾಸಗಿ ದೂರನ್ನು ಪರಿಗಣಿಸಿ ಶಾಸಕ ಮುನಿರಾಜು ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಪೊಲೀಸರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಸೂಚನೆ ನೀಡಿತ್ತು.

ಭಷ್ಟಾಚಾರ ನಿಯಂತ್ರಣ ಕಾಯ್ದೆ(ಪಿಸಿಎ) ಸೆಕ್ಷನ್ 9, 10 ಮತ್ತು 13 ಮತ್ತು ಭಾರತೀಯ ದಂಡ ಸಂಹಿತೆ ಕಾಯ್ದೆ ಸೆಕ್ಷನ್ 120, 468, 428 ಮತ್ತು 471ರ ಅಡಿಯಲ್ಲಿ ಆರೋಪಿಯಾಗಿರುವ ಮುನಿರಾಜು ಶೀಘ್ರವೇ ಪರಪ್ಪನ ಅಗ್ರಹಾರ ಜೈಲಿನ ದರ್ಶನ ಮಾಡುವ ಸಾಧ್ಯತೆಗಳು ನಿಚ್ಚಳವಾಗಿದೆ.

ಪ್ರಕರಣದ ವಿಚಾರಣೆಗಾಗಿ ಶಾಸಕ ಮುನಿರಾಜು ಅವರನ್ನು ಪೊಲೀಸರು ಬಂಧಿಸಬಹುದಾಗಿದೆ. ಪೊಲೀಸರು ತನಿಖಾ ವರದಿಯನ್ನು ನ.19ರೊಳಗೆ ಲೋಕಾಯುಕ್ತ ಕೋರ್ಟ್ ಗೆ ಸಲ್ಲಿಸಬೇಕಿದೆ. ಹಾಗಾಗಿ ಅಲ್ಲಿವರೆಗೂ ಮುನಿರಾಜು ಅವರು ಸ್ವಲ್ಪ ನೆಮ್ಮದಿಯಿಂದ ಉಸಿರಾಡಬಹುದಾದರೂ ವಿಚಾರಣೆಯನ್ನು ತಪ್ಪಿಸಿಕೊಳ್ಳುವಂತಿಲ್ಲ.

English summary
Dasararalli BJP MLA S Muniraju fears detention as Lokayukta DYSP have filed FIR against him. Lokayukta is to probe in to land encroachment allegation case against Muniraju in Dasarahalli Yeshwanthpur hobli Banaglore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X