ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡರ ತೀರದ ಬಯಕೆ ಇನ್ನಾದರೂ ಈಡೇರಲಿ

By Mahesh
|
Google Oneindia Kannada News

HD Deve Gowda
ಹಾಸನ, ನ.6: ನನ್ನ ಜೀವನದ ಮಹತ್ವಾಕಾಂಕ್ಷೆ, ಬಹು ಕಾಲ ಕನಸು ಎಂದರೆ, ಹಾಸನದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಏರ್‌ಪೋರ್ಟ್ ನಿರ್ಮಾಣ. ಇಷ್ಟು ಕಾಲವಾದರೂ ನನ್ನ ಬಯಕೆ ತೀರದೆ ಇರುವುದು ನನಗೆ ಬೇಸರ ತಂದಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಬಾಗೂರಿನ ಆಂಜನೇಯ ಸ್ವಾಮಿ ದೇಗುಲದಲ್ಲಿ ಕುಳಿತು ಹೇಳುತ್ತಿದ್ದರು.

ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಗ್ರಾಮದಲ್ಲಿ ಪುನರ್ ಪ್ರತಿಷ್ಠಾಪನೆಗೊಂಡ ಹೆಬ್ಬಾಗಿಲು ಆಂಜನೇಯಸ್ವಾಮಿ ದೇವಾಲಯದ ಶುಭಕಾರ್ಯಕ್ಕೆ ಬಂದಿದ್ದ ದೇವೇಗೌಡರು ತಮ್ಮ ದುಃಖ ತೋಡಿಕೊಂಡರು. 'ನಾನಂದುಕೊಂಡಂತೆ ತವರು ಜಿಲ್ಲೆ ಹಾಸನದ ಅಭಿವೃದ್ಧಿ ಆಗದೇ ಇರುವುದಕ್ಕೆ ಅಸಮಾಧಾನವಾಗಿದೆ' ಎಂದರು.

ಜಿಲ್ಲೆಯಲ್ಲಿ ವೈದ್ಯಕೀಯ, ಕೃಷಿ, ಇಂಜಿನಿಯರಿಂಗ್ ಕಾಲೇಜುಗಳು ಆಗಿವೆ. ಆದರೆ ಮಹತ್ವಾಕಾಂಕ್ಷೆಯ ಏರ್‌ಪೋರ್ಟ್ ಕನಸು ನನಸಾಗಿಲ್ಲದಿರುವುದು ಇನ್ನೂ ಕಾಡುತ್ತದೆ ಎಂದು ಗೌಡರು ವಿಷಾದ ರಾಗ ಹಾಡಿದರು.

ಜೆಡಿಎಸ್ ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಬದ್ಧರಾಗಿರಬೇಕು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ ಎಂದು ಕಿವಿಮಾತು ಹೇಳಿದ ಗೌಡರು ಮತ್ತೆ ಫ್ಲ್ಯಾಶ್ ಬ್ಯಾಕ್ ಗೆ ಹೋದರು.

ನಾನು ಪ್ರಧಾನ ಮಂತ್ರಿಯಾಗಿದ್ದಾಗ ಮಂಜೂರಾತಿ ನೀಡಿದ್ದ ಹಾಸನ- ಬೆಂಗಳೂರು ರೈಲು ಮಾರ್ಗದ ಕಾಮಗಾರಿ ಆರಂಭವಾಗಿಲ್ಲ. ವಿಮಾನ ನಿಲ್ದಾಣ ಕಾರ್ಯಕ್ಕೆ ಚಾಲನೆ ನೀಡಿ ಹಣ ಬಿಡುಗಡೆ ಮಾಡಲಾಗಿತ್ತು.

ಆದರೆ ಎಲ್ಲಾ ಯೋಜನೆಗಳು ನೆನೆಗುದಿಗೆ ಬಿದ್ದಿದೆ. ನಾನು ಇರುವಾಗಲೇ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಬೇಕು. ಜಿಲ್ಲೆ ಸಮಗ್ರ ಅಭಿವೃದ್ಧಿಯನ್ನು ಕಣ್ಣಾರೆ ಕಾಣಬೇಕು ಎಂಬುದು ನನ್ನ ಆಸೆ ಎಂದು ಗೌಡರು ಮೌನವಾದರು. ನಾಡಿನ ಹಿರಿ ರಾಜಕೀಯ ಮುತ್ಸದ್ಧಿ ದೇವೇಗೌಡರ ಮೌನದ ಅರ್ಥ ಕಂಡುಕೊಂಡ ಜೆಡಿಎಸ್ ಕಾರ್ಯಕರ್ತರು ಚಡಪಡಿಸುತ್ತಿದ್ದರು.

English summary
Former Prime Minister HD Deve Gowda has revealed his long lasting desire recently in Bagur Temple. Deve Gowda wish to see flights flying in Hassan, a international airport in his home town. over all development of Hassan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X