ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಳಯಾಂತಕ ಜಗನ್, ಸಿಬಿಐ ದಿಕ್ಕು ತಪ್ಪಿಸಲು ಸ್ಕೆಚ್

By Mahesh
|
Google Oneindia Kannada News

YS Jagan fears detention
ಹೈದರಾಬಾದ್, ನ.4: ಸಿಬಿಐ ತಂಡಕ್ಕೆ ಸತತವಾಗಿ ಚಳ್ಳೆಹಣ್ಣು ತಿನ್ನಿಸುತ್ತಾ ವಿಚಾರಣೆಗೂ ಸಿಲುಕದೆ ಬಂಧನಕ್ಕೂ ನಿಲುಕದೆ ಮೆರೆಯುತ್ತಿದ್ದ ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಕೊನೆಗೂ ಸಿಬಿಐ ಕಚೇರಿಗೆ ಬೆಳಗ್ಗೆ 10.30 ರ ಸುಮಾರಿಗೆ ಹಿಂಬಾಗಿಲಿನಿಂದ ಕಚೇರಿ ಪ್ರವೇಶಿಸಿದ್ದು, ಜಗನ್ ಬಾಡಿಗಾರ್ಡ್, ಬೆಂಬಲಿಗರನ್ನು ಕಚೇರಿ ಹೊರಗೆ ನಿಲ್ಲಿಸಲಾಗಿದೆ.

ಬಳ್ಳಾರಿ ಗಾಲಿ ಜನಾರ್ದನ ರೆಡ್ಡಿ ಅವರ ಓಬಳಾಪುರಂ ಮೈನಿಂಗ್ ಕಂಪನಿಗೆ ನೀಡಿದ ಪರವಾನಿಗೆ ಹಾಗೂ ಅನುದಾನಗಳ ಬಗ್ಗೆ ಜಗನ್ ಸಿಬಿಐ ತಂಡದ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ.

ಜಗನ್ ಅಕ್ರಮ ಆಸ್ತಿ ಗಳಿಕೆ ಬಗ್ಗೆ ತನಿಖೆ ನಡೆಸುತ್ತಿದ್ದ ಸಿಬಿಐ ತಂಡ ಇದ್ದಕ್ಕಿದ್ದಂತೆ 161 CrPC ಅಡಿಯಲ್ಲಿ ಸಮನ್ಸ್ ನೀಡಿ ಅಕ್ರಮ ಗಣಿಗಾರಿಕೆ, ಭೂ ಕಬಳಿಕೆ ಬಗ್ಗೆ ವಿಚಾರಣೆಗೆ ಹಾಜರಾಗಬೇಕು ಎಂದಾಗ ಶ್ರೀಮಂತ ಸಂಸದ ಜಗನ್ ಗೂ ಒಂದು ಕ್ಷಣ ಶಾಕ್ ಆಗಿತ್ತು. ಬಂಧನದ ಭೀತಿಯೂ ಎದುರಾಗಿತ್ತು.

ಜಗನ್ ಸಮನ್ಸ್ ನೀಡಿದ್ದು ಏಕೆ? :
ವೈಎಸ್ ಆರ್ ಕುಟುಂಬಕ್ಕೆ ಸೇರಿದ ಸಾಕ್ಷಿ ಹಾಗೂ ಇತರೆ ಕಂಪನಿಗಳನ್ನು ಪರೋಕ್ಷವಾಗಿ ಗಾಲಿ ಜನಾರ್ದನ ರೆಡ್ಡಿ ಬಂಡವಾಳ ಹೂಡಿದ್ದಾರೆ.

ಸಾಕ್ಷಿ ಸಮೂಹಕ್ಕೆ ಆರ್ ಆರ್ ಗ್ಲೋಬಲ್ ಹಾಗೂ ರೆಡ್ ಗೋಲ್ಡ್ ಸಂಸ್ಥೆ ಮೂಲಕ ಸುಮಾರು 70 ಕೋಟಿ ರು ಸಂದಾಯವಾಗುವಂತೆ ಜನಾರ್ದನ ರೆಡ್ಡಿ ನೋಡಿಕೊಂಡಿದ್ದಾರೆ ಎಂದು ತೆಲುಗು ದೇಶಂ ಪಾರ್ಟಿ ಆರೋಪಿಸಿತ್ತು.

ಗಾಲಿ ರೆಡ್ಡಿ ಕೇಸ್ ಗೆ ಸಂಬಂಧಿಸಿದಂತೆ ಪಿಸಿಸಿ ಅಧ್ಯಕ್ಷ ಬೋಟ್ಸಾ ಸತ್ಯ ನಾರಾಯಣ, ಗೃಹ ಸಚಿವೆ ಸಬಿತಾ ಇಂದ್ರ ರೆಡ್ಡಿ ಅವರನ್ನು ಸಿಬಿಐ ಈಗಾಗಲೇ ವಿಚಾರಣೆಗೆ ಒಳಪಡಿಸಿದೆ.

ಆದರೆ, ಸಿಬಿಐ ಜಂಟಿ ನಿರ್ದೇಶಕ ಲಕ್ಷ್ಮಿನಾರಾಯಣ ಅವರು ಕೇಳುವ ಪ್ರಶ್ನೆಗಳಿಗೆ ಯಾವ ರೀತಿ ಉತ್ತರ ನೀಡಬೇಕು ಎಂಬ ಹೋಮ್ ವರ್ಕ್ ಮಾಡಿಕೊಂಡಿರುವ ಜಗನ್, ತಮ್ಮ ತಂದೆ ಕಾಲದಲ್ಲಿ ಯಾವುದೇ ಅಕ್ರಮ ನಡೆದಿಲ್ಲ.

ಎಲ್ಲವೂ ಟಿಡಿಪಿ ಅಧಿಕಾರದಲ್ಲಿದ್ದಾಗ ನೀಡಿದ ಅನುಮತಿ, ನಾವು ಅದನ್ನು ಮುಂದುವರೆಸಿಕೊಂಡು ಹೋದೆವು ಅಷ್ಟೇ ಎಂದು ಹೇಳಿ ನುಣಚಿಕೊಳ್ಳಲು ಯತ್ನಿಸುವ ಸಾಧ್ಯತೆಯಿದೆ.

English summary
CBI starts grilling YSR congress chief Jagan Mohan Reddy in connection with illegal mining and irregularities and allotment of leases to OMC owned by jailbird former Karnataka Minister Gali Janardhan Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X