ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಂಡತಿಗೆ ಸ್ಟಿರಾಯಿಡ್ ನೀಡಿದ ಇವ ಗಂಡನಲ್ಲ ಭಂಡ

By Prasad
|
Google Oneindia Kannada News

NRI husband gives steroid to wife, jailed
ಲಂಡನ್, ನ. 3 : ಪ್ರತಿ ಪ್ರಜ್ಞಾವಂತ ಗಂಡಸು ತನ್ನ ಹೆಂಡತಿ ತೆಳ್ಳಗೆ ಬಳುಕುವ ಬಳ್ಳಿಯಂತಿರಬೇಕು, ಸೌಂದರ್ಯವತಿಯಾಗಿರಬೇಕು, ಪುಟಿದೇಳುವ ಕಾರಂಜಿಯಂತೆ ಚುರುಕಾಗಿರಬೇಕು, ತನ್ನ ಜೊತೆ ಕರೆದಲ್ಲೆಲ್ಲ ಸುತ್ತಾಡಲು ಬರಬೇಕು ಅಂತ ಬಯಸುತ್ತಾನೆ.

ಆದರೆ, ಅನಿವಾಸಿ ಭಾರತೀಯ ಇದಕ್ಕೆ ತದ್ವಿರುದ್ಧ. ತನ್ನ ಹೆಂಡತಿ ಕುರೂಪಿಯಾಗಿರಬೇಕು, ಸದಾಕಾಲ ಅಡುಗೆ ಮಾಡುತ್ತ ಮನೆಯಲ್ಲೇ ಇರಬೇಕೆಂದು ಅವಳಿಗೆ ಗೊತ್ತಿಲ್ಲದಂತೆ ದಪ್ಪಗಾಗಲು ಸ್ಟಿರಾಯಿಡ್ ನೀಡುತ್ತಿದ್ದ. ಧಡೂತಿಯಾಗಿದ್ದರೆ ಮನೆಯಲ್ಲೇ ಬಿದ್ದಿರುತ್ತಾಳೆಂಬ ದುರಾಲೋಚನೆ.

ಈ ಅಪರಾಧಕ್ಕಾಗಿ ಗಂಡ ಈಗ ಜೈಲು ಸೇರುವಂತಾಗಿದೆ. ಲೀಸ್ಟರ್ ನಲ್ಲಿ ವಾಸವಿರುವ ದಲ್ವಾರಾ ಸಿಂಗ್ ತನ್ನ ಹೆಂಡತಿಯ ಆಹಾರದಲ್ಲಿ ಪಾನೀಯದಲ್ಲಿ ಗುಪ್ತವಾಗಿ ಮಾದಕ ವಸ್ತು ಸೇರಿಸುತ್ತಿದ್ದ. ಅದನ್ನು ಸೇವಿಸಿದ ಆಕೆಯ ಮುಖ ಮತ್ತು ಬೆನ್ನ ಮೇಲೆಲ್ಲ ಕೂದಲು ಬೆಳೆದವು. ಚರ್ಮ ಜೋಲುಜೋಲಾಯಿತು.

ಇದನ್ನು ತನ್ನ ಗಂಡನ ಗಮನಕ್ಕೆ ತಂದು ವೈದ್ಯರ ಬಳಿ ಹೋಗಬೇಕೆಂದಾಗ, ಸುಮ್ಮನೆ ಇಂಥದಕ್ಕೆಲ್ಲ ಚಿಂತೆ ಮಾಡಬೇಡು ಎಂದು ಸಾಗಹಾಕಿದ್ದಾನೆ. ಇವನ ಕೃತ್ಯವನ್ನು ಕಂಡುಹಿಡಿದಿದ್ದು ಆತನ ಮಗಳು. ಹೆಂಡತಿ ಪರಿಶೀಲಿಸಿದಾಗ ಮಾದಕ ವಸ್ತು ನೀಡುತ್ತಿದ್ದುದು ತಿಳಿದುಬಂದಿದೆ. ಇದು ಕೋರ್ಟ್ ಮೆಟ್ಟಿಲೇರಿ, ವಿಚಾರಣೆ ನಡೆಸಿದಾಗ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಅವನಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿದೆ.

English summary
Indian-origin man has been jailed by Britain court for administering steroids in the food and drinks to make her stay at home for cooking. The drugs made her ugly. He has been given 12 months suspended jail term.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X