ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ ಮೇಯರ್ ಮೇಲೆ ಬಿತ್ತು 'ನಾಡದ್ರೋಹದ' ಕೇಸ್

|
Google Oneindia Kannada News

Belgaum Mayor
ಬೆಳಗಾವಿ ನ 3: ನಮ್ಮ ಮಣ್ಣಿನಲ್ಲಿದ್ದು ನಮ್ಮ ರಾಜ್ಯಕ್ಕೆ ನಾಡದ್ರೋಹ ಬಗೆದ ಕೇಸ್ ಬೆಳಗಾವಿ ಮೇಯರ್ ಮುಂದಾ ಬಾಳೆಕುಂದ್ರಿ ಮೇಲೆ ದಾಖಲಾಗಿದೆ. ಕನ್ನಡ ರಾಜ್ಯೋತ್ಸವದ ದಿನದಂದು ಮೇಯರ್ ಮುಂದಾ ಮತ್ತು ಉಪಮೇಯರ್ ರೇಣು ಕಿಲ್ಲೇಕರ್ ನಾಡ ವಿರೋಧಿ ಕಾರ್ಯದಲ್ಲಿ ತೊಡಗಿರುವುದರ ವಿರುದ್ದ ಕನ್ನಡಪರ ಹೋರಾಟಗಾರ ರಾಜೀವ್ ಟೋಪಣ್ಣವರ್ ಇಲ್ಲಿನ ಮಾರ್ಕೆಟ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೇಯರ್ ನಗರದ ಪ್ರಥಮ ಪ್ರಜೆ ಮತ್ತು ಉಪಮೇಯರ್ ಕರ್ನಾಟಕ ಸರಕಾರದ ನೌಕರರು ಎಂದು ಪರಿಗಣಿಸಲಾಗುತ್ತದೆ. ರಾಜ್ಯ ಸರಕಾರದಿಂದ ವೇತನ ಮತ್ತು ಇತರ ಸೌಲಭ್ಯ ಪಡೆಯುತ್ತಿರುವ ಇವರುಗಳು ನಾಡದ್ರೋಹದ ಕೆಲಸ ಮಾಡಿ ಕರ್ನಾಟಕ ಮತ್ತು ಕನ್ನಡಕ್ಕೆ ಅವಮಾನ ಮಾಡಿದ್ದಾರೆ ಎಂದು ರಾಜೀವ್ ದೂರಿದ್ದಾರೆ.

ಹಿಂದೊಮ್ಮೆ ಕನ್ನಡ ಮೇಯರ್ ಯೊಬ್ಬರಿಗೆ ಚಪ್ಪಲಿ ತೋರಿಸಿ ಎಂಇಎಸ್ ಜತೆ ಕಾಣಿಸಿಕೊಂಡಿದ್ದ ಮೇಯರ್ ಮಂದಾ ಸುನೀಲ ಬಾಳೇಕುಂದ್ರಿ ಕನ್ನಡ ವಿರೋಧಿ ಕೆಲಸಗಳನ್ನು ನಡೆಸುತ್ತಲೇ ಇದ್ದಾರೆ. ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನ, ನಡೆಸಕೂಡದು ಎಂದು ಅಡ್ಡಿಪಡಿಸಿ ಚಪ್ಪಲಿ ತೋರಿಸಿದ್ದ ಮೇಯರ್, ಶಿವಸೇನೆ ಮತ್ತು ಎಂಇಎಸ್ ನಂತಹ ನಾಡದ್ರೋಹಿ ಪಕ್ಷ ಸಂಘನೆಗಳನ್ನು ನಗರದಲ್ಲಿ ಬೆಳೆಯಲು ಪ್ರಮುಖ ಕಾರಣಕರ್ತರು.

ಮಹಾರಾಷ್ಟ್ರಕ್ಕೆ ಜೈ ಎಂದ ಮೇಯರ್‌ ಮಂದಾ ಬಾಳೇಕುಂದ್ರಿ ಅವರ ಮಹಾನಗರ ಪಾಲಿಕೆ ಸದಸ್ಯತ್ವ ರದ್ದುಗೊಳಿಸಬೇಕು ಎಂದು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮೇಯರ್ ಅವರು ಕನ್ನಡಕ್ಕೆ ಮತ್ತು ಕರ್ನಾಟಕ್ಕೆ ಅವಮಾನವಾಗುವ ರೀತಿಯಲ್ಲಿ ನಡೆದು ಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಕೂಡಲೇ ಅವರ ಮೇಯರ್ ಸದಸ್ಯತ್ವ ರದ್ದುಮಾಡಿ ಗಡಿಪಾರು ಮಾಡಬೇಕು ಎಂದು ಸಂಘಟನೆ ಒತ್ತಾಯಿಸಿದೆ.

English summary
A Case has been filed in Market Police Station, Belgaum against City Mayor Munda Balekundri and her deputy by Kannada activist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X