ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಿಸ್ ಬ್ಯಾಂಕ್ ನಲ್ಲಿ ರಾಜೀವ್ ಗಾಂಧಿಗೆ ಸೇರಿದ 25 ಲಕ್ಷ ಫ್ರಾಂಕ್

|
Google Oneindia Kannada News

Rajiv Gandhi
ನವದೆಹಲಿ ನ 2: ಸುಮಾರು 20 ವರ್ಷಗಳ ಹಿಂದೆ ಸಣ್ಣ ಪತ್ರಿಕೆಯ ವರದಿಯನ್ನು ಆಧರಿಸಿ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರು ಸ್ವಿಸ್ ಬ್ಯಾಂಕ್ ನಲ್ಲಿ ಇಟ್ಟಿರುವ 25 ಲಕ್ಷ ಫ್ರಾಂಕ್ ಹಣವನ್ನು ಸ್ವದೇಶಕ್ಕೆ ವಾಪಾಸ್ ತರಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕೆಂದು ವಕೀಲರೊಬ್ಬರು ಸಾರ್ವಜನಿಕ ಹಿತಾಶಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಸುಪ್ರೀಂಕೋರ್ಟ್ ನಲ್ಲಿ ದಾವೆ ಹೂಡಿರುವ ಎಂ ಎಲ್ ಶರ್ಮಾ ಎಂಬ ವಕೀಲರು, ಫ್ಲಚ್ ಜೆಲ್ದರ್ ಎನ್ನುವ ಪತ್ರಿಕೆಯ 1991ರಲ್ಲಿ ಈ ಸಂಬಂಧ ಲೇಖನ ಪ್ರಕಟ ಮಾಡಿತ್ತು. ಅದರ ನಕಲು ಪ್ರತಿಯನ್ನು ಕೂಡಾ ದಾವೆ ಜೊತೆಗೆ ನ್ಯಾಯಾಲಯಕ್ಕೆ ಶರ್ಮಾ ಸಲ್ಲಿಸಿದ್ದಾರೆ. ರಾಜೀವ್ ಗಾಂಧಿ ಅಲ್ಲದೆ ಇತರ ವಿಶ್ವನಾಯಕರ ಪಟ್ಟಿ ಕೂಡಾ ಇದರಲ್ಲಿ ನಮೂದಾಗಿದೆ ಎಂದು ವಕೀಲರು ಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದಾರೆ.

ಅಲ್ಲದೆ ಸೋನಿಯಾ ಮತ್ತು ರಾಹುಲ್ ಗಾಂಧಿ ಸ್ವಿಸ್ ಬ್ಯಾಂಕ್ ನಲ್ಲಿ ಕೋಟ್ಯಾಂತರ ರೂಪಾಯಿ ಹೊಂದಿದ್ದಾರೆ. ಆದರೆ ಇಬ್ಬರೂ ಆ ಅಕೌಂಟ್ ನಲ್ಲಿರುವ ದುಡ್ಡನ್ನು ತಮ್ಮದೆಂದು ಹೇಳಿ ಕೊಂಡಿಲ್ಲ. ಅಪೆಕ್ಸ್ ಕೋರ್ಟ್ ಗೆ ಇದರ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಆದೇಶ ನೀಡಬೇಕೆಂದು ವಕೀಲರು ಕೋರಿದ್ದಾರೆ.

ಕೇಂದ್ರ ಸರಕಾರ ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪು ಹಣವನ್ನು ವಾಪಸ್ ತರಿಸುವ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸುಪ್ರೀಂಕೋರ್ಟ್ ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ ಈ ಪ್ರಕ್ರಿಯೆಗೆ ಕೂಡಲೇ ಚಾಲನೆ ನೀಡಲು ಕೇಂದ್ರ ಸರಕಾರಕ್ಕೆ ಆದೇಶ ನೀಡಬೇಕೆಂದು ವಿನಂತಿಸಿ ಕೊಂಡಿದ್ದಾರೆ. ಈ ಆರೋಪದ ಸಂಬಂಧ ಕಾಂಗ್ರೆಸ್ ತುಟಿಕ್ ಪಿಟಿಕ್ ಎಂದಿಲ್ಲ.

English summary
Public Interest Litigation filed against Former PM late Rajiv Ganhdi. Advocate M L Sharma claims based on local newspaper 25 Lac Franks has been kept in Swiss Bank by Rajiv Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X