ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಗೂ ಜಗನ್ ಗೆ ಖೆಡ್ಡಾ ತೋಡಿದ ಗಾಲಿ ರೆಡ್ಡಿ

By Mahesh
|
Google Oneindia Kannada News

Jagan and Janardhan Reddy
ಹೈದರಾಬಾದ್, ನ.2: ಕಡಪ ಸಂಸದ ವೈ.ಎಸ್. ಜಗನ್‌ಮೋಹನ್ ರೆಡ್ಡಿ ಹೊಂದಿರುವ ಸ್ಥಿರಾಸ್ತಿಗಳ ಲೆಕ್ಕಾಚಾರ ಅಂದಾಜು ಮಾಡಲು ಸೋತ ಸಿಬಿಐಗೆ ಗಾಲಿ ಜನಾರ್ದನ ರೆಡ್ಡಿ ಸಹಾಯ ಹಸ್ತ ನೀಡಿದ್ದಾರೆ.

ಇದುವರೆವಿಗೂ ಜಗನ್ ರೆಡ್ಡಿ ಬಗ್ಗೆ ಬಾಯಿಬಿಡದ ಜನಾರ್ದನ ರೆಡ್ಡಿ, ಇತ್ತೀಚಿಗೆ ನೀಡಿರುವ ಮಾಹಿತಿ ಆಧಾರದ ಮೇಲೆ ಜಗನ್ ರೆಡ್ಡಿಗೆ ಸಿಬಿಐ ಸಮನ್ಸ್ ನೀಡಿದೆ.

ಸಿಬಿಐ ತಂಡಕ್ಕೆ ಚಳ್ಳೆ ಹಣ್ಣು ತಿನ್ನಿಸುತ್ತಾ ಬಂದಿರುವ ಜಗನ್ ಮೋಹನ್ ರೆಡ್ಡಿ ನ.4ರಂದು ನಾಂಪಲ್ಲಿಯ ಸಿಬಿಐ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಬೇಕಿದೆ.

ಬಳ್ಳಾರಿ ಗಾಲಿ ಜನಾರ್ದನ ರೆಡ್ಡಿ ಹಾಗೂ ವೈಎಸ್ ರಾಜಶೇಖರ ರೆಡ್ಡಿ ಕುಟುಂಬ ಓಎಂಸಿ ಮೈನಿಂಗ್ ಹೆಸರಿನಲ್ಲಿ ನಡೆಸಿದ ಅಕ್ರಮಗಳ ಬಗ್ಗೆ ವಿಚಾರಣೆ ನಡೆಯಲಿದೆ.

ಪುಲಿವೆಂದುಲ, ಜಮ್ಮಲಮಡುಗು ಮತ್ತು ರಾಯಚೊಟಿಯಲ್ಲಿ ಬೆಟ್ಟಿಂಗ್ ದಂಧೆ ಎಗ್ಗಿಲ್ಲದೆ ಸಾಗಿ ಜಗನ್ ರೆಡ್ಡಿ ಬಂಧನದ ಬಗ್ಗೆ ಮತ್ತೆ ಬೆಟ್ಟಿಂಗ್ ಮುಂದುವರೆದಿದೆ. ಬೆಟ್ಟಿಂಗ್‌ಗೆ ಹತ್ತು ಸಾವಿರದಿಂದ ಒಂದು ಲಕ್ಷ ರೂ ತನಕ ನಡೆಯುವ ಸಾಮಾನ್ಯ ಬೆಟ್ಟಿಂಗ್ ಈಗ ಜಗನ್ ದೆಸೆಯಿಂದ ಕೋಟಿ ರೂ ಗಳಲ್ಲಿ ನಡೆಯುತ್ತಿದೆ.

English summary
The investigative agency, Central Bureau of Investigation (CBI) summoned Kadapa MP, YS Jagan Mohan Reddy to appear before the officials on Nov 4. Jagan has been summoned over the illegal mining case over which former Karnataka minister, Gali Janardhan Reddy was arrested
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X