ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭರ್ಜರಿ ಕೊಡುಗೆ ಸಿಕ್ಕರೂ ನೌಕರರಿಗೆ ಅಸಮಾಧಾನ

By Prasad
|
Google Oneindia Kannada News

Rajyotsava gift to employees by DVS
ಬೆಂಗಳೂರು, ನ. 01 : ಸರಕಾರಿ ನೌಕರರ ಮೂಲ ವೇತನದ ಮೇಲೆ ಶೇ.12.5ರಷ್ಟು ಮಧ್ಯಂತರ ಪರಿಹಾರವನ್ನು ನವೆಂಬರ್ 1ರಿಂದ ಜಾರಿಗೆ ಬರುವಂತೆ ಘೋಷಿಸಿ ಮುಖ್ಯಮಂತ್ರಿ ಸದಾನಂದ ಗೌಡ ಅವರು ಕರ್ನಾಟಕ ರಾಜ್ಯೋತ್ಸವದಂದು ಭರ್ಜರಿ ಕೊಡುಗೆ ನೀಡಿದ್ದಾರೆ.

ಈ ಕೊಡುಗೆ ಸರಕಾರಿ ನೌಕರರಿಗೆ, ಸ್ಥಳೀಯ ಸಂಸ್ಥೆಗಳ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ, ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿಗಳಿಗೆ, ನಿವೃತ್ತ ವೇತನದಾರರಿಗೆ ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೆ ಅನ್ವಯವಾಗುತ್ತದೆ.

ಸರಕಾರಿ ನೌಕರರಿಗೆ ಇದು ಬಹುದಿನದ ಬೇಡಿಕೆಯಾಗಿತ್ತು. ಅವರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಒಂದು ಅಧಿಕೃತ ಸಮಿತಿಯನ್ನು ರಚಿಸಲಾಗಿತ್ತು. ಆ ಸಮಿತಿ ವರದಿಯನ್ನು ಸಲ್ಲಿಸುವ ಮೊದಲೇ ರಾಜ್ಯೋತ್ಸವದಂದು ಈ ಕೊಡುಗೆಯನ್ನು ಪ್ರಕಟಿಸಿದೆ.

ಆದರೂ ಅಸಮಾಧಾನ :
ಈ ವೇತನ ಪರಿಷ್ಕರಣೆ ಸರಕಾರಿ ನೌಕರರಿಗೆ ಎಳ್ಳಷ್ಟೂ ಸಮಾಧಾನ ತಂದಿಲ್ಲ. ಈ ಕುರಿತಂತೆ ನ.3ರಂದು ಸದಾನಂದ ಗೌಡರ ಜೊತೆ ಸರಕಾರಿ ನೌಕರರ ಸಂಘದ ಅಧ್ಯಕ್ಷ ಭೈರಪ್ಪ ಚರ್ಚೆ ನಡೆಸಲಿದ್ದಾರೆ. ಚರ್ಚೆಯ ನಂತರ ಮುಷ್ಕರ ಹೂಡುವುದೋ ಬೇಡವೋ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

English summary
Chief minister has announced interim relief of 12.5% of basic pay of govt employees, employees of local bodies, university non-teaching staff, retired people. This will come into effect from Nov 1, 2011. But, this relief has not satisfied the govt employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X