ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿವಾಸಿಗಳಿಗೆ ಕರುನಾಡು ಕಂಡ್ರೆ ಅದೇನೋ ಪ್ರೀತಿ

By Prasad
|
Google Oneindia Kannada News

Karnataka first choice of returning NRIs
ನವದೆಹಲಿ, ನ. 01 : ಭಾರತದಲ್ಲಿ ಕಲಿತು ಚಾಕರಿಗಾಗಿ ವಿದೇಶ ಸೇರಿಕೊಂಡಿದ್ದ 3 ಲಕ್ಷಕ್ಕೂ ಹೆಚ್ಚು ಪ್ರತಿಭಾವಂತ ಇಂಜಿನಿಯರುಗಳು 2015ರ ಹೊತ್ತಿಗೆ ಭಾರತಕ್ಕೆ ಮರಳಲಿದ್ದಾರೆ ಎಂದು ಕೆಲ್ಲಿ ಸರ್ವೀಸಸ್ ಇಂಡಿಯಾ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆ ತಿಳಿಸಿದೆ. ಅದರಲ್ಲೂ ಕರ್ನಾಟಕವನ್ನು ಆಯ್ಕೆ ಮಾಡಿಕೊಳ್ಳುವವರು ಹೆಚ್ಚು.

ಮುಂದಿನ 2-3 ವರ್ಷಗಳಲ್ಲಿ ವೃತ್ತಿ ಸಂತೃಪ್ತಿ ವಿದೇಶಕ್ಕಿಂತ ಭಾರತದಲ್ಲಿಯೇ ಹೆಚ್ಚು ದೊರೆಯುವುದರಿಂದ ಪ್ರತಿಭಾ ಪಲಾಯನದಿಂದಾಗಿ ನಾನಾ ದೇಶ ಸೇರಿಕೊಂಡಿದ್ದ ಸಾಫ್ಟ್ ವೇರ್ ಇಂಜಿನಿಯರುಗಳು ಸ್ವದೇಶಕ್ಕೆ ಮರಳಿ ಇಲ್ಲಿಯೇ ನೆಲೆ ಕಾಣಲಿದ್ದಾರೆ ಎಂದು ತಿಳಿಸಿದೆ.

ವಿದೇಶದಲ್ಲಿ ಉತ್ತಮ ಸಂಬಳ ದೊರೆಯುತ್ತಿದ್ದರೂ ಭವಿತವ್ಯದ ದೃಷ್ಟಿಯಿಂದ ಮತ್ತು ಏಳ್ಗೆ ಕಾಣುವುದು ಭಾರತದಲ್ಲಿ ಮಾತ್ರ ಎಂಬ ಜ್ಞಾನೋದಯ ಅಲ್ಲಿನ ಅನೇಕರಿಗಾಗುತ್ತಿದೆ. ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಭಾರತ ತೋರಿದ ಗಟ್ಟಿತನ ತೋರಿರುವುದು ಶೇ.48ರಷ್ಟು ಜನರಿಗೆ ಪಾಠ ಕಲಿಸಿದೆ ಎನ್ನುತ್ತಾರೆ ಕೆಲ್ಲಿ ಸರ್ವೀಸಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕಮಲ್ ಕಾರಂತ್.

ಆರ್ಥಿಕ ಮುಗ್ಗಟ್ಟಿನಿಂದಾಗಿ 2008ರಿಂದ 2011ರೊಳಗೆ ಜಾಗತಿಕ ಆರ್ಥಿಕತೆ ಸಾಕಷ್ಟು ಹೊಡೆತ ತಿಂದಿರುವುದು, ಅನಿವಾಸಿ ಭಾರತೀಯರು ಸ್ವದೇಶಕ್ಕೆ ಮರಳಲು ಮೂಲ ಕಾರಣ. ಕೆಲ ದೇಶಗಳು ಚೇತರಿಸಿಕೊಂಡಿದ್ದರೆ, ಹಲವು ಇನ್ನೂ ಆರ್ಥಿಕ ಬಿಕ್ಕಟ್ಟಿನಿಂದ ಹೊರಬಂದಿಲ್ಲ.

ಉಳಿದೆಲ್ಲ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಅನಿವಾಸಿ ಭಾರತೀಯರನ್ನು ಬರಮಾಡಿಕೊಳ್ಳುವಲ್ಲಿ ಹೆಚ್ಚಿನ ಒಲವನ್ನು ತೋರಿದೆ. ಸರಕಾರ ಮರಳುವವರಿಗೆ ಸಾಕಷ್ಟು ಅನುಕೂಲಗಳನ್ನು ಮಾಡಿಕೊಡುತ್ತಿರುವುದರಿಂದ ಜೀವನಮಟ್ಟು ಸಾಕಷ್ಟು ಸುಧಾರಿಸಿರುವುದು ಇದಕ್ಕೆ ಕಾರಣ ಎನ್ನುತ್ತಾರೆ ಕಾರಂತ್.

English summary
At least 300,000 Indian engineering professionals who are abroad are expected to come back home in the period from 2011-2015, according to a survey by Kelly Services India. Karnataka is the most preferred Indian state to live for reverse migrants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X