ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳು ಚಿತ್ರ ಪ್ರದರ್ಶನಕ್ಕೆ ಕರವೇಯಿಂದ ಅಡ್ಡಿ

|
Google Oneindia Kannada News

karave
ಬೆಂಗಳೂರು, ನ. 01: ಕನ್ನಡ ರಾಜ್ಯೋತ್ಸವದ ದಿನವಾದ ಇಂದು ರಕ್ಷಣಾ ವೇದಿಕೆಯ ಕಾರ್ಯಕರ್ತರಿಗೆ ಕನ್ನಡ ಪ್ರೇಮ ಉಕ್ಕಿ ಹರಿದಿದೆ. ತಮಿಳು ಚಿತ್ರ 'ವೇಲಾಯುಧಂ' ಪ್ರದರ್ಶನವಾಗುತ್ತಿದ್ದ ಆರ್ ಟಿ ನಗರದ ರಾಧಾಕೃಷ್ಣ ಚಿತ್ರಮಂದಿರಕ್ಕೆ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಅಲ್ಲಿದ್ದ ಬ್ಯಾನರ್ ಕಿತ್ತಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ, ವೇಲಾಯುಧಂ ಪ್ರದರ್ಶನ ರದ್ದಾಗಿದೆ.

ನಟ ವಿಜಯ್ ನಾಯಕತ್ವದ 'ವೇಲಾಯುಧಂ' ದೀಪಾವಳಿಯಂದೇ ಬಿಡುಗಡೆ ಆಗಿದೆ. ಸೂರ್ಯ ನಾಯಕತ್ವದ ತಮಿಳು ಚಿತ್ರ '7 ಅಮ್ ಅರಿವು' ಹಾಗೂ ಹಿಂದಿ ಚಿತ್ರ 'ರಾ ಒನ್' ಕೂಡ ಅದೇ ದಿನ ಬಿಡುಗಡೆಯಾಗಿವೆ. ಕನ್ನಡದ ಒಂದೇ ಒಂದು ಚಿತ್ರವೂ ಕೂಡ ದೀಪಾವಳಿಯ ದಿನ ಬಿಡುಗಡೆ ಆಗಿಲ್ಲ. ಪರಭಾಷೆ ಚಿತ್ರ ಚಿತ್ರಗಳನ್ನು ನೋಡಿಯೇ ಕನ್ನಡಿಗರ ದೀಪಾವಳಿ ಮುಗಿದಿದೆ.

ಆದರೆ ಇಂದು ಕನ್ನಡ ರಾಜ್ಯೋತ್ಸವ. ಕನ್ನಡ ಅಭಿಮಾನ ಎಲ್ಲರಿಗೂ ಉಕ್ಕಿ ಹರಿಯುವ ದಿನ. ಇದೇ ದಿನಕ್ಕಾಗಿ ಕಾದು ಕುಳಿತಿದ್ದರು ಎನ್ನುವಂತೆ ಇಂದು ದಾಳಿ ನಡೆಸಲಾಗಿದೆ. ಅಂದರೆ, ರಾಜ್ಯೋತ್ಸವದಂದು ಮಾತ್ರ 'ಕನ್ನಡಪ್ರೇಮ' ಕನ್ನಡಿಗರಿಗೆ ಜಾಗೃತವಾಗಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯವರು ಈ ಮೂಲಕ ಕರೆಕೊಟ್ಟಿರಬಹುದೇ?

English summary
Karnataka Rakshana Vedike members attacked Radhakrishna movie theater. There was show of Tamil movie Vijay Starer Velayudham. Radhakrishna theater is in RT Nagar, Bangalore. Today, Kannad Rajyotsava Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X