ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈ ಸಂಪಂಗಿಗೆ ಬೇಲು, ಯಡಿಯೂರಪ್ಪ ಕಂಗಾಲು

By Prasad
|
Google Oneindia Kannada News

Y Sampangi granted bail
ಬೆಂಗಳೂರು, ಅ. 31 : ಐದು ಲಕ್ಷ ರು. ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದ ಕೆಜಿಎಫ್ ಶಾಸಕ ವೈ ಸಂಪಂಗಿಗೆ ಷರತ್ತುಬದ್ಧ ಜಾಮೀನನ್ನು ಲೋಕಾಯುಕ್ತ ಕೋರ್ಟ್ ಅ.31ರಂದು ಮಂಜೂರು ಮಾಡಿದೆ. ರಾಜ್ಯೋತ್ಸವದಂದು ಸಂಪಂಗಿಗೆ ನಿಜಕ್ಕೂ ಉತ್ಸವ.

ವಿಚಾರಣೆ ಮುಗಿಯುವವರೆಗೆ ದೇಶ ಬಿಟ್ಟು ಹೋಗಬಾರದು ಮತ್ತು ಪಾಸ್ಪೋರ್ಟನ್ನು ಪೊಲೀಸರ ವಶಕ್ಕೆ ಒಪ್ಪಿಸಬೇಕು, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಮತ್ತು ದಾಖಲೆ ನಾಶ ಮಾಡಲು ಯತ್ನಿಸಬಾರದು ಎಂಬ ಷರತ್ತಿನಡಿ ಅವರಿಗೆ ನ್ಯಾಯಾಧೀಶ ಎನ್.ಕೆ. ಸುಧೀಂದ್ರರಾವ್ ಅವರು ಜಾಮೀನು ನೀಡಿದರು.

ಅಕ್ಟೋಬರ್ 28ರಂದು ಸಂಪಂಗಿ ಅವರ ಜಾಮೀನನ್ನು ರದ್ದುಪಡಿಸಿ ಸುಧೀಂದ್ರರಾವ್ ಅವರು ಸಂಪಂಗಿ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಅಟ್ಟಿದ್ದರು. ಹೀಗಾಗಿ, ಸಂಪಂಗಿಯವರು ಮೂರು ದಿನಗಳ ಕಾಲ ಸೆಂಟ್ರಲ್ ಜೈಲಿನಲ್ಲಿ ಯಡಿಯೂರಪ್ಪ ಜೊತೆ ಮಿನರಲ್ ವಾಟರ್ ಕುಡಿಯುವಂತಾಗಿತ್ತು. ಈಗ ಮುಂದಿನ ವಿಚಾರಣೆಯನ್ನು ನ.15ಕ್ಕೆ ಮುಂದೂಡಲಾಗಿದೆ.

ಯಡಿಯೂರಪ್ಪ ಜಾಮೀನು ವಿಚಾರಣೆ : ದೀಪಾವಳಿಯನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕತ್ತಲೆಯಲ್ಲೇ ಕಳೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕನ್ನಡ ರಾಜ್ಯೋತ್ಸವದಂದು ಕೂಡ ಕನ್ನಡ ಬಾವುಟವನ್ನು ಜೈಲಲ್ಲೇ ಹಾರಿಸುವಂತಾಗಿದೆ. ಅವರ ಡಿನೋಟಿಫಿಕೇಷನ್ ಗೆ ಸಂಬಂಧಿಸಿದ ಕೇಸಿನಲ್ಲಿ ಜಾಮೀನು ಅರ್ಜಿ ವಿಚಾರಣೆಯನ್ನು ನ.2ಕ್ಕೆ ಹೈಕೋರ್ಟ್ ಮುಂದೂಡಿದೆ.

ಅಕ್ಟೋಬರ್ 15ರಂದು ಬಂಧಿತರಾಗಿ ಅ.16ರಂದು ಎದೆನೋವು ಕಾಣಿಸಿಕೊಂಡು ಆಸ್ಪತ್ರೆ ಸೇರಿದ್ದ ಯಡಿಯೂರಪ್ಪ ಇನ್ನೆರಡು ದಿನ (ಜಾಮೀನು ಸಿಗುವವರೆಗೆ) ಜೈಲಿನಲ್ಲೇ ಕಳೆಯಬೇಕಾಗಿದೆ. ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ಹೈಕೂರ್ಟ್ ಇಂದು ಜಾಮೀನು ಮಂಜೂರು ಮಾಡಿ, ಕ್ಯಾನ್ಸರ್ ಚಿಕಿತ್ಸೆಗೆ ವಿದೇಶಕ್ಕೆ ತೆರಳಲು ಅನುವು ಮಾಡಿಕೊಟ್ಟಿದೆ.

English summary
KGF MLA Y Sampangi, who was caught red handed while accepting bribe, has been granted conditional bail by Lokayukta Special Court on Oct 31. But, BS Yeddyurappa's bail plea hearing is postponed to Nov 2 by Karnataka High Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X