ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರಿಗೆ ಹೊರಟಿದೆ ಅಡ್ವಾಣಿ ರಥಯಾತ್ರೆ

By * ಚಿದಂಬರ ಬೈಕಂಪಾಡಿ, ಮಂಗಳೂರು
|
Google Oneindia Kannada News

LK Advani to address public in Mangalore
ಮಂಗಳೂರು, ಅ. 31 : ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರ ಜನ ಚೇತನ ಯಾತ್ರೆಯ ಮಂಗಳೂರು ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಲು ರಾಜ್ಯದ ಬೇರೆ ಬೇರೆ ಕಡೆಗಳಿಂದ ಸುಮಾರು 1,500 ಮಂದಿ ಪೊಲೀಸರು ಆಗಮಿಸಿದ್ದಾರೆ. ಕಾರ್ಯಕ್ರಮ ಸೋಮವಾರ ಬೆಳಿಗ್ಗೆ ಹನ್ನೊಂದು ಗಂಟೆಗೆ ಆರಂಭವಾಗಲಿದೆ.

ಇದರಲ್ಲಿ ಮಂಗಳೂರು ಮತ್ತು ದಕ್ಷಿಣ ಕನ್ನಡದ ಪೊಲೀಸರನ್ನು ಹೊರತು ಪಡಿಸಿ ಎನ್‌.ಎಸ್‌.ಜಿ., ಕೆಎಸ್‌ಆರ್‌ಪಿ ಮತ್ತು ಮೈಸೂರು, ಶಿವಮೊಗ್ಗ, ಬೆಳಗಾವಿ ವಲಯ ವ್ಯಾಪ್ತಿಯ ಪೊಲೀಸ್‌ ಸಿಬಂದಿ ಒಳಗೊಂಡಿದ್ದಾರೆ. ದಿಲ್ಲಿಯಿಂದ ಎನ್‌.ಎಸ್‌.ಜಿ. ಸಿಬಂದಿ ಆಗಮಿಸಿದ್ದು, ವೇದಿಕೆಯನ್ನು ಸಂಪೂರ್ಣವಾಗಿ ಅವರು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಬಾಂಬ್‌ ಪತ್ತೆ ದಳವನ್ನು ಕೂಡಾ ನಿಯೋಜಿಸಲಾಗಿದೆ.

ಅಡ್ವಾಣಿ ಅವರು ಸಂಚರಿಸುವ ಮಾರ್ಗದುದ್ದಕ್ಕೂ ಪೊಲೀಸ್‌ ಕಾವಲು ಏರ್ಪಡಿಸಲಾಗಿದೆ. ಸಂಚಾರ ವ್ಯವಸ್ಥೆ ನಿಯಂತ್ರಣಕ್ಕಾಗಿ ಟ್ರಾಫಿಕ್‌ ಪೊಲೀಸರನ್ನು ಅಲ್ಲಲ್ಲಿ ನಿಯುಕ್ತಿಗೊಳಿಸಲಾಗಿದೆ. ಆಡ್ವಾಣಿ ಅವರ ಕಾರ್ಯಕ್ರಮದ ಕಾರಣಕ್ಕೆ ನಗರದಲ್ಲಿ ವಾಹನ ಸಂಚಾರದಲ್ಲಿ ವ್ಯಾಪಕ ಬದಲಾವಣೆ ಮಾಡಲಾಗಿದ್ದು ಸಾರ್ವಜನಿಕರು ನಿರಾತಂಕವಾಗಿ ಸಂಚರಿಸುವಂತಿಲ್ಲ. ಮಂಗಳೂರು ನಗರದ ರಸ್ತೆಗಳಲ್ಲಿ ಪೊಲೀಸರೇ ಕಂಡುಬರುತ್ತಿದ್ದಾರೆ.

ನಗರದ ನೆಹರೂ ಕ್ರೀಡಾಂಗಣದಲ್ಲಿ ಅಡ್ವಾಣಿ ಬಹಿರಂಗ ಸಭೆ ನಡೆಸಲಿದ್ದಾರೆ. ಅವರ ಜೊತೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಂತ್ ಕುಮಾರ್, ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಮತ್ತು ಮುಖ್ಯಮಂತ್ರಿ ಸದಾನಂದ ಗೌಡ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ ವೇಳೆಗೆ ಉಡುಪಿಯಲ್ಲಿ ಆಡ್ವಾಣಿ ಕಾರ್ಯಕ್ರಮ ನಡೆಯಲಿದ್ದು ಅಲ್ಲೂ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.

English summary
After Bangalore LK Advani's Jan Chetna Yatra will move towards Mangalore Udupi on October 31. Advani will be addressing the public at 11 am at Nehru stadium in Mangalore. Later he will go to Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X