ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನಲ್ಲಿ ಪೊಲೀಸ್ ಪೇದೆ ಮೇಲೆ ಚಿರತೆ ದಾಳಿ

By * ಬಿ.ಎಂ. ಲವಕುಮಾರ್, ಮೈಸೂರು
|
Google Oneindia Kannada News

Leopard attacks police in Mysore
ಮೈಸೂರು, ಅ. 31 : ಮೈಸೂರು ನಗರಕ್ಕೆ ನುಗ್ಗಿ ಕಾಡಾನೆಯೊಂದು ದಾಳಿ ಮಾಡಿ ವ್ಯಕ್ತಿಯೊಬ್ಬನನ್ನು ಸಾಯಿಸಿದ ಘಟನೆ ಇನ್ನೂ ಜನರ ಮನಪಟಲದಿಂದ ದೂರ ಸರಿಯುವ ಮುನ್ನವೇ ಸೋಮವಾರ ಬೆಳಗ್ಗಿನ ಜಾವ ನಗರದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದಲ್ಲದೆ, ಪೊಲೀಸ್ ಪೇದೆಯೊಬ್ಬರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ.

ಮೈಸೂರಿನ ವಿಜಯನಗರ 4ನೇ ಹಂತದ ಖಾಲಿ ನಿವೇಶನದಲ್ಲಿ ಬೆಳೆದಿದ್ದ ಕುರುಚಲು ಗಿಡಗಳ ಪೊದೆಯಲ್ಲಿ ಅವಿತುಕೊಂಡಿದ್ದ ಚಿರತೆ ಛಂಗನೆ ಹಾರಿ ಓಡುತ್ತಿದ್ದುದನ್ನು, ನಾಯಿ ಹಿಡಿದುಕೊಂಡು ವಾಕಿಂಗ್‌ಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬರು ನೋಡಿದ್ದರು. ಕೂಡಲೇ ಅವರು ಸ್ಥಳೀಯರಿಗೆ ತಿಳಿಸಿದ್ದರು. ಇದರಿಂದ ಭಯಗೊಂಡ ಜನರು ಚಿರತೆಗಾಗಿ ಹುಡುಕಾಡಿದರಲ್ಲದೆ, ವಿಜಯನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿಗಳು ಚಿರತೆಯನ್ನು ಹಿಡಿಯಲು ಹುಡುಕಾಟ ಆರಂಭಿಸಿದರು. ಈ ಸಂದರ್ಭ ವಿದ್ಯಾರಣ್ಯಪುರಂ ನಿವಾಸಿ ಪೊಲೀಸ್ ಪೇದೆಯಾಗಿರುವ ಚೆಲುವರಾಜು ಎಂಬುವರು ಪೊದೆಯೊಂದರ ಬಳಿ ಗಿಡಗಳನ್ನು ಸರಿಸಿ ಹುಡುಕಾಡುತ್ತಿದ್ದಾಗ ದಿಢೀರ್ ಆಗಿ ಅವರ ಮೇಲೆ ಚಿರತೆ ಎರಗಿದೆ. ಈ ಸಂದರ್ಭ ಅದನ್ನು ತಮ್ಮ ಕೈಯ್ಯಿಂದ ಕೆಳಕ್ಕೆ ತಳ್ಳಿ ಹಾಕಿದಾಗ ಅದು ಅವರ ತೊಡೆಗೆ ಕಚ್ಚಿದೆ. ತಕ್ಷಣ ಜೊತೆಯಲ್ಲಿದ್ದವರು ಕೂಗುತ್ತಾ ಅವರ ಬಳಿಗೆ ಬಂದಾಗ ಹೆದರಿದ ಚಿರತೆ ಅವರನ್ನು ಬಿಟ್ಟು ಮತ್ತೆ ಪೊದೆ ಸೇರಿಕೊಂಡಿದೆ. ಗಾಯಾಳು ಚೆಲುವರಾಜು ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗ್ಗಿನಿಂದಲೇ ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಚಿರತೆ ಯಾವ ಪೊದೆಯಲ್ಲಿ ಅಡಗಿ ಕುಳಿತಿದೆ ಎಂಬುವುದು ಮಾತ್ರ ಗೊತ್ತಾಗಿಲ್ಲ. ಹೀಗಾಗಿ ಬೋನ್‌ಗಳನ್ನಿಟ್ಟಿರುವ ಸಿಬ್ಬಂದಿ ಚಿರತೆಗಾಗಿ ಕಾಯುತ್ತಿದ್ದಾರೆ. ಆದರೆ ಚಿರತೆ ಪತ್ತೆಯಾಗದಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ನಿವಾಸಿಗಳು ಆತಂಕದಲ್ಲಿದ್ದಾರೆ.

English summary
A Leopard has appeared in Mysore city on October 31st morning injuring a police constable. A morning walker noticed the wild animal and informed the locality. Soon the public pressed the panic button. Search is on for the Leopard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X