ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಟ್ಟಾಗೆ ಹೈಕೋರ್ಟ್ ನಿಂದ ಮಧ್ಯಂತರ ಜಾಮೀನು

By Prasad
|
Google Oneindia Kannada News

Bail to Katta Subramanya Naidu
ಬೆಂಗಳೂರು, ಅ. 31 : ಕೆಐಎಡಿಬಿ ಹಗರಣದಲ್ಲಿ ಮಗನ ಜೊತೆ ಜೈಲು ಪಾಲಾಗಿರುವ (ಸದ್ಯಕ್ಕೆ ಆಸ್ಪತ್ರೆ) ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಮಾಜಿ ಐಟಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ಕರ್ನಾಟಕ ಹೈಕೋರ್ಟ್ ನ ಏಕಸದಸ್ಯ ಪೀಠ ಮಧ್ಯಂತರ ಜಾಮೀನು ನೀಡಿದೆ.

ಹೈಕೋರ್ಟ್ ಕಟ್ಟಾ ಅವರಿಗೆ 3 ತಿಂಗಳ ಮಧ್ಯಂತರ ಮತ್ತು ಷರತ್ತುಬದ್ಧ ಜಾಮೀನು ನೀಡಿದ್ದು, ಐದು ಲಕ್ಷ ರು. ಬಾಂಡ್ ಸಲ್ಲಿಸಬೇಕೆಂದು ಆದೇಶಿಸಿದೆ. ಲಂಡನ್ ನಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಬೇಕಿದ್ದರೆ ಲೋಕಾಯುಕ್ತ ಕೋರ್ಟ್ ಅನುಮತಿ ಪಡೆಯಬೇಕೆಂದು ತಿಳಿಸಿದೆ. ಲಂಡನ್ ನಲ್ಲಿ ಈಹಿಂದೆ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆದ ದಾಖಲೆಗಳನ್ನು ಸಲ್ಲಿಸುವಂತೆ ಹೈಕೋರ್ಟ್ ಕೇಳಿದೆ.

ಸದ್ಯಕ್ಕೆ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಟ್ಟಾ ಸುಬ್ರಮಣ್ಯ ನಾಯ್ಡು ಲಂಡನ್ ಗೆ ಹಾರಲು ದ್ವಾರಗಳು ತೆರೆದುಕೊಂಡಿವೆ. ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಪಯಣಿಸಲು ಜಾಮೀನು ನೀಡಬೇಕೆಂದು ಕಟ್ಟಾ ಅರ್ಜಿ ಸಲ್ಲಿಸಿದ್ದರೂ ಲೋಕಾಯುಕ್ತ ವಿಶೇಷ ನ್ಯಾಯಾಲಯ ಮತ್ತು ಹೈಕೋರ್ಟ್ ಮನವಿ ಪುರಸ್ಕರಿಸಿರಲಿಲ್ಲ.

English summary
Karnataka high court has granted 3 months interim bail to Katta Subramanya Naidu, suffering from Lymphoma (cancer). He has been asked to approach Lokayukta special court for permission to go to London for higher treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X