ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಯಿಮರಿಗಳಿಗೆ ಹಾಲುಣಿಸಿ ಮಾತೃವಾತ್ಯಲ್ಯ ಮೆರೆದ ಹಂದಿ

By * ಬಿ.ಎಂ. ಲವಕುಮಾರ್, ಮೈಸೂರು
|
Google Oneindia Kannada News

Pig mothers puppies
ಮೈಸೂರು, ಅ. 30 : ಹಸಿದ ಹೊಟ್ಟೆಗೆ ಅನ್ನ ನೀಡುವುದು ಮಾನವ ಧರ್ಮವಾಗಿದ್ದು, ಇದು ಅನಾದಿ ಕಾಲದಿಂದಲೂ ನಮಗೆ ರಕ್ತಗತವಾಗಿ ಬಂದಿದೆ. ಹಸಿದ ಹೊಟ್ಟೆಗೆ ಅನ್ನ ನೀಡಿ ಆ ಜೀವವನ್ನು ಸಂತುಷ್ಟಗೊಳಿಸಿದರೆ ಅದರಿಂದ ಪುಣ್ಯಫಲ ದೊರೆಯುತ್ತದೆ ಎಂಬ ನಂಬಿಕೆಯೂ ನಮ್ಮಲ್ಲಿದೆ.

ಮಾನವರಾದ ನಾವು ಬುದ್ದಿವಂತ ಪ್ರಾಣಿಗಳು, ಹಾಗಾಗಿ ಪಾಪ ಪುಣ್ಯದ ಲೆಕ್ಕಾಚಾರದಲ್ಲಿ ಒಂದಷ್ಟು ಒಳ್ಳೆ ಕೆಲಸ ಮಾಡುತ್ತೇವೆ. ಆದರೆ ಇಲ್ಲಿ ಮೂಕ ಪ್ರಾಣಿಯಾದ ಹಂದಿಯೊಂದು ಯಾವ ಫಲಾಪೇಕ್ಷೆಯಿಲ್ಲದೆ ಹಸಿದ ನಾಯಿ ಮರಿಗಳಿಗೆ ಹಾಲುಣಿಸಿ ತನ್ನ ತಾಯ್ತನವನ್ನು ಧಾರೆ ಎರೆಯುತ್ತಿರುವ ದೃಶ್ಯವೊಂದು ಅಚ್ಚರಿ ಮೂಡಿಸುತ್ತಿದೆ.

ಬೀದಿಯಲ್ಲಿ ಮರಿಗಳಿಗೆ ಜನ್ಮನೀಡಿದ ತಾಯಿನಾಯಿಯೊಂದು ಆಹಾರ ಅರಸುತ್ತಾ ಹೊರಟು ಹೋಗಿದ್ದು, ಇತ್ತ ತಾಯಿಯ ಬರುವಿಕೆಗಾಗಿ ಕಾದು ಹಸಿವಿನಿಂದ ಬಳಲಿ ಬೆಂಡಾದ ಮರಿಗಳು ಅದೇ ದಾರಿಯಲ್ಲಿ ಬಂದ ಹಂದಿಯೊಂದನ್ನು ಸುತ್ತುವರೆದು ಹಾಲಿಗಾಗಿ ಹಂಬಲಿಸಿವೆ. ಹಸಿವಿನಿಂದ ಪರಿತಪಿಸುತ್ತಿದ್ದ ಮರಿಗಳನ್ನು ನೋಡಿದ ತಾಯಿ ಹಂದಿಯ ಮನಕರಗಿದೆ. ಇವು ನನ್ನ ಮರಿಗಳಲ್ಲ ಎಂಬುವುದು ಗೊತ್ತಿದ್ದರೂ ಪ್ರತಿರೋಧ ಮಾಡದೆ ಹಾಲುಣಿಸುತ್ತಾ ತನ್ನ ತಾಯ್ತನವನ್ನು ಮೆರೆದಿದೆ.

ಎಲ್ಲಿ ನಮ್ಮ ಸೌಂದರ್ಯ ಹಾಳಾಗುತ್ತೋ ಎಂಬ ಭಯದಲ್ಲಿ ಕೆಲವು ಮಹಿಳೆಯರು ತಾವು ಹೆತ್ತ ಮಕ್ಕಳಿಗೆ ಹಾಲುಣಿಸಲು ಹಿಂದೇಟು ಹಾಕುವ ಇಂದಿನ ದಿನಗಳಲ್ಲಿ ಹಂದಿಯ ಮಾತೃ ವಾತ್ಸಲ್ಯವನ್ನು ಮೆಚ್ಚಲೇಬೇಕು. ಇಂತಹವೊಂದು ಅಪರೂಪದ ಚಿತ್ರವನ್ನು ಸೆರೆಹಿಡಿದು ಕಳುಹಿಸಿದವರು ಚಾಮರಾಜನಗರ ಜಿಲ್ಲೆಯ ಛಾಯಾಗ್ರಾಹಕ ಕಿರಣ್‌ ಬೇಗೂರು.

English summary
In an unusual incident pig fed hungry puppies, when they were by their mother. The incident has showed that the animals too understand the need of the hour and they do have humanity. Photograph taken by Kiran Begur, Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X