ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

50 ಮಂದಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

|
Google Oneindia Kannada News

Kannada Flag
ಬೆಂಗಳೂರು, ಅ. 30: ಈ ಸಾಲಿನ (2011) ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಇದು 56 ನೇ ರಾಜ್ಯೋತ್ಸವ ಪ್ರಶಸ್ತಿಯಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 50 ಮಂದಿ ಸಾಧಕರಿಗೆ ಮಾತ್ರ ಈ ಬಾರಿ ಪ್ರಶಸ್ತಿ ಪ್ರಕಟಿಸಿದ್ದು ವಿಶೇಷ. ಈ ಪ್ರಶಸ್ತಿಯನ್ನು 'ಕರ್ನಾಟಕ ರಾಜ್ಯೋತ್ಸವ'ದ ದಿನ, ನವೆಂಬರ್ 1 ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ವಿತರಿಸಲಾಗುವುದು.

ಪ್ರಶಸ್ತಿ ಫಲಕ, ಹಾಗೂ ನಗದು ಬಹುಮಾನವನ್ನು ಒಳಗೊಂಡಿರುವ ಈ ಪ್ರಶಸ್ತಿ, ಕ್ರೀಡೆ, ಪತ್ರಿಕೋದ್ಯಮ, ಸಂಗೀತ, ಕಿರುತೆರೆ, ವೈದ್ಯಕೀಯ, ಜಾನಪದ, ಕೃಷಿ, ಸಮಾಜ ಸೇವೆ ಹಾಗೂ ಸಾಹಿತ್ಯ ಹೀಗೆ ವಿವಿಧ ಕ್ಷೇತ್ರಗಳನ್ನು ಒಳಗೊಂಡಿದೆ. ಪತ್ರಿಕೋದ್ಯಮ ವಿಭಾಗದಲ್ಲಿ ಪ್ರತಾಪ ಸಿಂಹ, ಕೆ. ಎನ್. ತಿಲಕ್ ಕುಮಾರ್, ಜಗದೀಶ್ ಮಣಿಯಾಣಿ, ಜಿ. ಎಸ್ ಕುಮಾರ್ ಹಾಗೂ ಮಂಜುನಾಥ್ ಭಟ್ ಪಡೆದಿದ್ದಾರೆ.

ಸಂಗೀತ ವಿಭಾಗದಲ್ಲಿ ಎಚ್. ಫಲ್ಗುಣ, ಡಾ. ಬಾಲಚಂದ್ರ ನಾಕೋಡ್, ಗಣೇಶ್ ಪುತ್ತೂರು ಪಡೆದಿದ್ದರೆ ಸಾಹಿತ್ಯದಲ್ಲಿ ಶಾಂತಿನಾಥ ದಿಬ್ಬದ ಅವರಿಗೆ ಸಂದಿದೆ. ಕಿರುತೆರೆ ಹಾಗೂ ಸಿನಿಮಾ ವಿಭಾಗದಲ್ಲಿ ಕೆ. ಶಿವರುದ್ರಯ್ಯ, ಸರಿಗಮ ವಿಜಿ, ಎ. ಆರ್. ರಾಜು, ಕ್ರೀಡೆಯಲ್ಲಿ ತೇಜಸ್ವಿನಿಬಾಯಿ, ರಮೇಶ್ ಟೀಕಾರಾಮ್ ಮುಂತಾದವರು ಪಡೆದಿದ್ದಾರೆ.

ಒಟ್ಟಾರೆ 50 ಜನ ಈ ಬಾರಿಯ (2011) ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ. ಪೂರ್ಣ ಪಟ್ಟಿಗೆ ನಿರೀಕ್ಷಿಸಿ.

English summary
Karnataka "Rajyotsava Award" announced. 50 achievers bag the coveted annual State awards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X