ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನಲ್ಲಿ ಹುಲಿ ಪ್ರತ್ಯಕ್ಷ : ಭಯಭೀತರಾಗಿರುವ ಗ್ರಾಮಸ್ಥರು

By * ಬಿಎಂ ಲವಕುಮಾರ್, ಮೈಸೂರು
|
Google Oneindia Kannada News

Tiger menace in Coorg
ಮಡಿಕೇರಿ, ಅ. 29 : ಮೊದಲೇ ಆನೆ ದಾಳಿಯಿಂದ ಕಂಗೆಟ್ಟಿದ್ದ ಕೊಡಗಿನ ಜನ ಇದೀಗ ಹುಲಿ ದಾಳಿಯಿಂದ ಭಯಭೀತರಾಗಿದ್ದಾರೆ. ಕಳೆದ ಒಂದು ವಾರದಿಂದ ದಕ್ಷಿಣ ಕೊಡಗಿನ ಕೋತೂರಿನ ಸುತ್ತಮುತ್ತ ನಿಗೂಢ ಸ್ಥಳದಲ್ಲಿ ಬೀಡುಬಿಟ್ಟಿರುವ ಹುಲಿ ದಿನಕ್ಕೊಂದು ಬೆಳೆಗಾರರ ಮನೆಯ ಕೊಟ್ಟಿಗೆಗೆ ನುಗ್ಗಿ ಹಸು, ಎಮ್ಮೆ, ಕರು, ನಾಯಿ ಹಾಗೂ ಆಡುಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಇದರ ಉಪಟಳದಿಂದ ಭಯಭೀತರಾಗಿರುವ ಗ್ರಾಮಸ್ಥರು ಮನೆಯಿಂದ ಹೊರಬಾರದೆ ಭಯದಲ್ಲಿಯೇ ದಿನಕಳೆಯುವಂತಾಗಿದೆ.

ಕೋತೂರುವಿನ ಪೋರಂಗಡ ತಮ್ಮಯ್ಯ (ಗಾಂಧಿ) ಅವರಿಗೆ ಸೇರಿದ 2 ಹೋರಿ ಹಾಗೂ ಒಂದು ಹಸು, ಮುಕ್ಕಾಟಿರ ಮುತ್ತಣ್ಣ ಅವರ ಒಂದು ಹೋರಿ, ಕಟ್ಟೆಂಗಡ ಸಾಬು ಅವರ ಒಂದು ಕರು, ಕೆ.ಆರ್.ಸುರೇಶ್ ಅವರ 2 ದನ ಹಾಗೂ 2 ಮೇಕೆ, ಸಹೋದರ ಕೆ.ಆರ್.ಸತೀಶ್ ಅವರ 6 ರಾಸುಗಳು ಹಾಗೂ ವಿ.ಎ.ಪದ್ಮ ಅವರ ಒಂದು ಹಾಲು ಕರೆಯುವ ಹಸು ಸೇರಿದಂತೆ ಈವರೆಗೆ ಒಟ್ಟು 14 ಜಾನುವಾರು ಹಾಗೂ ಎರಡು ಮೇಕೆಗಳು ಹಾಗೂ ನಾಯಿಯೊಂದು ಹುಲಿಗೆ ಬಲಿಯಾಗಿರುವುದು ಬೆಳಕಿಗೆ ಬಂದಿದೆ.

ಗ್ರಾಮಸ್ಥರ ಆಕ್ರೋಶ : ಕಳೆದ ಒಂದು ವಾರದಿಂದ ಹುಲಿ ಹಲವು ರೈತರ ಕೊಟ್ಟಿಗೆಯಲ್ಲಿ ಹಸು, ಕರುಗಳನ್ನು ಕೊಂದು ನಷ್ಟಪಡಿಸಿದೆ. ಅರಣ್ಯ ಇಲಾಖೆ ಬಂದು ಅಷ್ಟೋ-ಇಷ್ಟೋ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುತ್ತಿದೆ. ಹಾಗಾಗಿ ಸಮಸ್ಯೆ ಅಲ್ಲಿಗೆ ಮುಗಿಯದೆ ಪುನರಾವರ್ತನೆಯಾಗುತ್ತಿದೆ. ಆದ್ದರಿಂದ ಒಂದೋ ನೀವೇ ಹುಲಿಯನ್ನು ಹಿಡಿಯಿರಿ, ಇಲ್ಲವೇ ನಮಗೆ ಗುಂಡು ಹೊಡೆಯಲು ಅವಕಾಶ ಕೊಡಿ. ನಿಮ್ಮ ಇಲಾಖೆಯಿಂದ ನಮಗೆ ಸಾಕಾಗಿದೆ. ರೈತರು ಏನಾದರೂ ತಪ್ಪು ಮಾಡಿಬಿಟ್ಟರೆ ಇಡೀ ಇಲಾಖೆಯೇ ಬಂದು ಬಂಧಿಸ್ತೀರಾ. ಈಗ ವ್ಯಾಘ್ರನಿಂದ ಇಷ್ಟೊಂದು ತೊಂದರೆ ಆಗಿದೆಯಲ್ಲ, ನೀವೇನು ಮಾಡುತ್ತಿದ್ದೀರಿ ಎಂದು ಗ್ರಾಮಸ್ಥರು ಇಲಾಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪರಿಹಾರ ವಿತರಣೆ : ವಿಷಯ ತಿಳಿದ ಸ್ಪೀಕರ್ ಬೋಪಯ್ಯ ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಾಕುಪ್ರಾಣಿಗಳ ಸಾವಿನಿಂದ ನಷ್ಟ ಅನುಭವಿಸಿರುವ ಕೃಷಿಕರಿಗೆ ಅರಣ್ಯ ಇಲಾಖೆ ವತಿಯಿಂದ ರೂ. 2.49 ಲಕ್ಷ ಪರಿಹಾರ ವಿತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

English summary
Citizens of Coorg district, especially in Kotur, are living in fear as Tiger menace haunting them everyday. Cattle eater tiger has eaten 14 domestic animals including cows and sheeps. Karnataka Forest dept is not responding to their request to give licence to kill the tiger.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X