ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಜರುಗುವುದೆ ಮೆಟಾಲಿಕಾ ಹಂಗಾಮಾ?

By Prasad
|
Google Oneindia Kannada News

Live concert in Bangalore on Oct 30
ಬೆಂಗಳೂರು, ಅ. 29 : ಮೆಟಾಲಿಕಾ (Metallica) ರಾಕ್ ಬ್ಯಾಂಡ್ ಕಂಪನಿಯ ಹುಡುಗರು ಅ.30ರಂದು ಇಳಿಸಂಜೆ ಅರಮನೆ ಮೈದಾನದಲ್ಲಿ ಬೆಂಗಳೂರನ್ನು ಗಡಗಡನೆ ನಡುಗಿಸಲು ಸಜ್ಜಾಗಿದ್ದಾರೆ. ನಗರದ ಪಡ್ಡೆಗಳು ತೈಥಕ ಕುಣಿಯುತ್ತ ಸೊಂಟ ಬಳುಕಿಸಲು ಕಾತುರದಿಂದ ಕಾಯುತ್ತಿದ್ದಾರೆ.

ಆದರೆ, ಭಾರೀ ನಿರೀಕ್ಷೆ ಹುಟ್ಟಿಸಿರುವ ಈ ಕಾರ್ಯಕ್ರಮ ನಡೆಯುವುದೆ? ಅನುಮಾನ. ಯಾಕೆಂದರೆ, ಭಾರತದಲ್ಲಿ ಮೆಟಾಲಿಕಾ ಕನ್ಸರ್ಟ್ ಗಳನ್ನು ಆಯೋಜಿಸಿರುವ ಸಂಸ್ಥೆಯ ಸೀನಿಯರ್ ಎಕ್ಸಿಕ್ಯೂಟಿವ್ ಸೇರಿದಂತೆ ನಾಲ್ಕು ಜನರನ್ನು ಪೊಲೀಸರು ಬಂಧಿಸಿದ್ದು, ಗುರ್ ಗಾಂವ್ ನಲ್ಲಿ ಶುಕ್ರವಾರ ನಡೆಯಬೇಕಿದ್ದ ಸಂಗೀತ ಸಂಜೆ ರದ್ದಾಗಿದೆ.

ಸಂಗೀತ ಸಂಜೆ ಕ್ಯಾನ್ಸಲ್ ಆಗಿದ್ದೇನೋ ಸರಿ. ಆದರೆ, ಅದನ್ನು ಘೋಷಿಸುವ ಮುನ್ನ ಆಯೋಜಕರು ಜನರಿಂದ ಭಾರೀ ಮೊತ್ತಕ್ಕೆ ಟಿಕೆಟ್ಟುಗಳನ್ನು ಮಾರಿ ವಂಚಿಸಿದ್ದಾರೆ ಎಂಬುದು ಪ್ರಮುಖ ಆರೋಪ. ಈ ಸಂಬಂಧ ರಾಜೇಶ್ ಚಂದವಾನಿ, ಉಮೇಶ್, ಅಶೋಕ್ ಸಿಂಗ್ ಮತ್ತು ಸಾವಿಯೋ ಫೆಲಿಯೋ ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಗುರ್ ಗಾಂವ್ ನಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚಿನ ಜನ ನೆರೆದಿದ್ದರು. ಸುರಕ್ಷತಾ ದೃಷ್ಟಿಯ ನೆಪವೊಡ್ಡಿ ಸಂಗೀತ ಸಂಜೆಯನ್ನು ಶನಿವಾರ ಸಂಜೆ 4ಕ್ಕೆ ಆಯೋಜಕರು ಮುಂದೂಡಿದರು. ಇದರಿಂದ ರೊಚ್ಚಿಗೆದ್ದ ಸಂಗೀತ ಅಭಿಮಾನಿಗಳು ಸಂಗೀತ ಸಾಧನಗಳನ್ನು ಚಿಂದಿಚಿಂದಿ ಮಾಡಿಹಾಕಿದ್ದಾರೆ. ಇದರಿಂದಾಗಿ ಕನ್ಸರ್ಟ್ ರದ್ದಾಯಿತು.

ಹುಚ್ಚೆದ್ದ ಜನರ ನಡುವಿನಿಂದ ನನ್ನ ಮಗ ಪಾರಾಗಿ ಬಂದಿದ್ದೇ ಒಂದು ಪವಾಡ. ಇಂಥ ಯಾವುದೇ ಅವಘಡ ನಡೆಯದಂತೆ ಸುರಕ್ಷಿತವಾಗಿ ಇಂಥ ಕಾರ್ಯಕ್ರಮಗಳನ್ನು ನಡೆಸಲು ಇವರಿಗೆ ಸಾಧ್ಯವಿಲ್ಲವೆ ಎಂದು ಹಿರಿಯ ಜೀವಿಯೊಬ್ಬರು ಕಳಕಳಿ ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ, ಬೆಂಗಳೂರಿನಲ್ಲಿ ಕೂಡ ಎಲ್ಲ ಟಿಕೆಟ್ ಗಳು ಸೋಲ್ಡ್ ಔಟ್!

English summary
Cancellation of Metallica live concert in Gurgaon, New Delhi has cast a shadow on concert to be held in Bangalore on October 30 evening at Palace Ground. Four people including senior executive have been arrested by police for cheating the music lovers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X