ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಣಂಬೂರು ಬೀಚಲ್ಲಿ ಸತಿಪತಿಗಳಾದ ವಿದೇಶಿ ಜೋಡಿ

By Chidambar Baikampady
|
Google Oneindia Kannada News

Foreigners marry on Panambur beach
ಮಂಗಳೂರು, ಅ. 29 : ಎತ್ತಣ ಪಣಂಬೂರು ಎತ್ತಣ ಜರ್ಮನಿ-ಆಸ್ಟ್ರೇಲಿಯಾ ಏನಿದೇನಿದು ಅಂತೀರಾ? ಪಣಂಬೂರು ಬೀಚ್ ನಲ್ಲಿ ಜರ್ಮನಿಯ ವಧು, ಆಸ್ಟ್ರೇಲಿಯಾದ ವರ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದು ಸತಿಪತಿಗಳಾದರು. ಇವರ ಮದುವೆಗೆ ಬೀಚ್ ನೋಡಲು ಬಂದಿದ್ದವರೇ ಸಾಕ್ಷಿ.

ಯುವಜೋಡಿಗಳು ಕರಿಮಣಿ ಧಾರಣೆ ಮಾಡಿ, ಸಪ್ತಪದಿ ತುಳಿದು ಪೌರೋಹಿತ್ಯದ ಉಸ್ತುವಾರಿಯಲ್ಲಿ ಸತಿಪತಿಗಳಾದರು. ಆರ್ಕಿಯಾಲಾಜಿ ವಿದ್ಯಾಭ್ಯಾಸ ಮಾಡಿದ್ದ ವೋಲ್‌ಫಾರಂ ಜರ್ಮನಿಯ ವಿವಿಯಲ್ಲಿ ಆರ್ಕಿಯಾಲಾಜಿಯ ಉಪನ್ಯಾಸಕಿಯಾಗಿರುವ ಜೆಸಿಂತಾ ಕೈಹಿಡಿದು ಬಾಳ ಸಂಗಾತಿಯಾದರು.

ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಯುವ ಜೋಡಿ ಪಣಂಬೂರು ಬೀಚ್‌ನಲ್ಲಿ ಸುಂದರ ಮಂಟಪದಲ್ಲಿ ಆಹ್ವಾನಿತರ ಮತ್ತು ಪ್ರವಾಸಿಗರನ್ನು ಸಾಕ್ಷೀಕರಿಸಿಕೊಂಡು ಮದುವೆಯಾಗಿದ್ದಾರೆ. ವರ ರೇಷ್ಮೆ ಪಂಚೆ, ಪೇಟ, ಬಾಸಿಂಗ ತೊಟ್ಟು ಅಪ್ಪಟ ಹಿಂದೂ ವರನಾಗಿ ಕಂಗೊಳಿಸಿದರೆ, ವಧು ಭಾರತೀಯ ಸಂಪ್ರದಾಯದಂತೆ ಸೀರೆ ತೊಟ್ಟಿದ್ದರು. ಬೀಚ್ ನಲ್ಲಿ ಮದುವೆಯಾಗುವ ಇವರ ಬಯಕೆಗೆ ಮುಖ್ಯ ಕಾರಣ ಭಾರತದ ಪ್ರಕೃತಿ ಸೌಂದರ್ಯವಂತೆ.

English summary
Foreign nationals marry on Panambur beach in Mangalore. Bride groom was from German and groom was from Australia. Both were loving each other and wanted to marry in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X