ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣಪಟ್ಟಣಂ ಬಂದರಿನ ಚರಿತ್ರೆ, ವಾಸ್ತವ, ಭವಿಷ್ಯ

By Mahesh
|
Google Oneindia Kannada News

Krishnapatnam Port
ಹೈದರಾಬಾದ್, ಅ. 28: ಬಳ್ಳಾರಿ ರೆಡ್ಡಿಗಳು ಗಣಿಧೂಳು ಸಾಗಿಸಿ, ಚಿನ್ನದಂಥ ಬೆಳೆ ತೆಗೆದ ಬಂದಿರನ ಚರಿತ್ರೆ, ವಾಸ್ತವ ಚಿತ್ರಣ ಮುಂದಿನ ಭವಿಷ್ಯ ಬಗ್ಗೆ ಸ್ವಲ್ಪ ಗಮನ ಹರಿಸೋಣ.

ಆಂಧ್ರಪ್ರದೇಶದಲ್ಲಿ ವೈಎಸ್ ರಾಜಶೇಖರ ರೆಡ್ಡಿ ಅವರ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಕಾಲ. 'ಚೀನಾಬೂಮ್‌' ಆಗಿನ್ನೂ ಶುರುವಾಗಿತ್ತು. ಬಳ್ಳಾರಿ ರೆಡ್ಡಿಗಳ ಕಂಪನಿಗೆ ಅನುಕೂಲಕರವಾದ ಬಂದರು ಸ್ಥಾಪನೆಗೆ ವೈಎಸ್ ಆರ್ ಸಿದ್ಧತೆ ನಡೆಸಿದ್ದರು.

ಅಕ್ರಮ ಗಣಿಗಾರಿಕೆ ಹಾಗೂ ಅದಿರು ಸಾಗಾಣಿಕೆಗೆ ಅನಂತಪುರ, ಕಡಪ, ವಿಶಾಖಪಟ್ಟಣಂ, ಕಾಕಿನಾಡ ಬಂದರುಗಳಿಗಿಂತ ಮತ್ತೊಂದು ಹೊಸ ಜಾಗ ಸೃಷ್ಟಿಯಾಗಬೇಕಿತ್ತು. ಆ ಹುಟ್ಟಿಕೊಂಡಿದ್ದೆ 'ಕೃಷ್ಣಪಟ್ಣಂ ಬಂದರು'.

ಓಎಂಸಿಗೆ ಹೇಗೆ ಅನುಕೂಲ: ಓಎಂಸಿಯಿಂದ 500 ಕಿ.ಮೀ. ದೂರದಲ್ಲಿರುವ ವಿಶಾಖಪಟ್ಟಣಂ ಹಾಗೂ ಕಾಕಿನಾಡ ಬಂದರುಗಳಿಗೆ ಅದಿರು ಸಾಗಿಸಲು ಹೆಚ್ಚು ವೆಚ್ಚ ಹಾಗೂ ಸಮಯ ವ್ಯರ್ಥವಾಗುತ್ತಿತ್ತು.

ಹೀಗಾಗಿ ಅನಂತಪುರದಿಂದ 225 ಕಿ.ಮೀ. ದೂರದಲ್ಲಿರುವ ಕೃಷ್ಣಪಟ್ಣಂನಲ್ಲಿ ಬಂದರು ಸ್ಥಾಪಿಸಿ ನವಯುಗ್‌ ನಿರ್ಮಾಣ ಸಂಸ್ಥೆಗೆ ಅದರ ಜವಾಬ್ದಾರಿಯನ್ನು ಅಭಿವೃದ್ಧಿಪಡಿಸಿತು.

ಈ ಬಂದರು ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಸುಲಭವಾಗಿ ಸಿಕ್ಕಿತು. ಚೆನ್ನೈನಿಂದ 180 ಕಿ.ಮೀ ದೂರದಲ್ಲಿರುವ ಈ ಬಂದರು ನೆಲ್ಲೂರು ಜಿಲ್ಲೆಯಲ್ಲಿದೆ.

ಕೃಷ್ಣದೇವರಾಯನ ಲಿಂಕ್: ವಿಜಯನಗರದ ಅರಸು ಶ್ರೀಕೃಷ್ಣದೇವರಾಯನ ಕಾಲದ ಈ ಬಂದರಿಗೆ ಸಹಜವಾಗಿ ಆತನ ಹೆಸರನ್ನೇ ಇಡಲಾಗಿದೆ. ಕಬ್ಬಿಣದ ಅದಿರು, ಇತರೆ ಲೋಹಗಳನ್ನು ಇಲ್ಲಿಂದ ವಿದೇಶಕ್ಕೆ ಸಾಗಿಸುವ ಮಾರ್ಗ ಆಗಿನ ಕಾಲದಲ್ಲೇ ಇತ್ತು. ಅದು ಮತ್ತೆ ಅಭಿನವ ಕೃಷ್ಣದೇವರಾಯ ಎಂದು ಬಿರುದಾಂಕಿತರಾದ ಶ್ರೀ ಗಾಲಿ ಜನಾರ್ದನ ರೆಡ್ಡಿ ಅವರ ಕೈ ಸೇರಿರುವುದು ಕಾಕತಾಳೀಯ.

60ರ ದಶಕದಲ್ಲಿ ಮರದ ಬೋಟ್ ಗಳಲ್ಲಿ ಅದಿರು ಸಾಗಾಟ ನಡೆದಿತ್ತು. 80ರ ದಶಕದ ವೇಳೆಗೆ ಸರ್ಕಾರ ಈ ಬಂದಿರಿಗೆ ಮಾನ್ಯತೆ ನೀಡಿತ್ತು. ಆದರೆ, ಮುಂದೆ ರೆಡ್ಡಿಗಳ ಅಕ್ರಮ ದಂಧೆಯ ಅಡ್ಡಾ ಆಗಿದ್ದು ಮಾತ್ರ ದುರಂತ.

ಆದರೆ ಈಗ ಇಲ್ಲಿ ಕಾರ್ಯ ನಿರ್ವಹಿಸುವ ಹಡಗು 5,000 ಟನ್/ಗಂಟೆಗೆ ಹೊರಬಲ್ಲದು. ಎರಡನೇ ಹಂತದ ಬಂದಿರನ ಕಾರ್ಯಕ್ಕೆ 4,000 ಕೋಟಿ ಸುರಿದಿರುವ ಹೈದರಾಬಾದ್ ಮೂಲದ ನವಯುಗ ಇಂಜಿನಿಯರಿಂಗ್ ಕಂಪನಿ, ಈ ಬಂದರನ್ನು ದೇಶದ ದೊಡ್ಡ ಬಂದರಾಗಿ ಮಾರ್ಪಾಟು ಮಾಡುವ ಪಣ ತೊಟ್ಟಿದೆ. ಸಿಬಿಐ ಕೆಂಗಣ್ಣಿನಿಂದ ಬಚಾವಾದರೆ ಮಾತ್ರ ಇದು ಸಾಧ್ಯ.

English summary
CBI team is in Krishnapatnam port which is named after Karnataka Vijayanagar Emperor, Sri Krishnadevaraya is now allegedly had become private port of YS Rajashekar Reddy and Reddy Brothers for all illegal activities related to mining.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X