ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡ್ವಾಣಿ ಬೆಂಗಳೂರು ರಥಯಾತ್ರೆ ಮಾರ್ಗದರ್ಶಿ

By Prasad
|
Google Oneindia Kannada News

LK Advani Bangalore rath yatra guide
ಬೆಂಗಳೂರು, ಅ. 28 : ಬೆಂಗಳೂರಿಗೆ ಬರುವುದೋ ಬೇಡವೋ ಎಂದು ಒಂದು ಹೆಜ್ಜೆ ಮುಂದೆ ಒಂದು ಹೆಜ್ಜೆ ಹಿಂದೆ ಚಲಿಸುತ್ತಿದ್ದ ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿಯವರ ರಥಯಾತ್ರೆ ಅಂತಿಮವಾಗಿ ಕರ್ನಾಟಕದ ರಾಜಧಾನಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಜನ ಚೇತನ ಯಾತ್ರೆಯಾಗಿ ನರ್ವಸನ್ನದ್ಧತೆಗಳನ್ನು ಬಿಜೆಪಿ ಮಾಡಿದೆ.

ಯಾತ್ರೆಯ ಅಂಗವಾಗಿ ಬೆಂಗಳೂರಿನಲ್ಲಿ ಅ.30ರಂದು ಬೆಳಗ್ಗೆ 5 ರಥಗಳು ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಲಿವೆ. ಜನ ಚೇತನ ಯಾತ್ರೆಯ ಉದ್ದೇಶ ಕುರಿತಂತೆ ನಗರದ ನಾಗರಿಕರಿಗೆ ತಿಳಿಯಪಡಿಸುವ ದೃಷ್ಟಿಯಿಂದ ಈ ರಥಗಳನ್ನು ರೆಡಿ ಮಾಡಲಾಗಿದೆ.

ಬಿಜೆಪಿ ರಾಧ್ಯಾಕ್ಷರಾದ ಕೆಎಸ್ ಈಶ್ವರಪ್ಪ ಅವರು ಅ.30ರ ಬೆಳಿಗ್ಗೆ 10 ಗಂಟೆಗೆ ಮಲ್ಲೇಶ್ವರದ ಜಗನ್ನಾಥ ಭವನದಲ್ಲಿ ಪ್ರಚಾರ ರಥಗಳಿಗೆ ಚಾಲನೆ ನೀಡಲಿದ್ದಾರೆ. ಮಲ್ಲೇಶ್ವರದ ಶಾಸಕ ಡಾ. ಸಿಎನ್ ಅಶ್ವತ್ಥನಾರಾಯಣ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.

ರಥ ಸಂಚಾರ ಮುಗಿದ ನಂತರ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿರುವ ಅಡ್ವಾಣಿಯವರು ಸಂಜೆ 5 ಗಂಟೆಗೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅನೇಕ ಬಿಜೆಪಿ ನಾಯಕರು ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅಡ್ವಾಣಿ ಭ್ರಷ್ಟಾಚಾರದ ವಿರುದ್ಧ ಏನು ಮಾತನಾಡಲಿದ್ದಾರೆ ಎಂಬ ಕುತೂಲಹ ಸಾರ್ವಜನಿಕರಲ್ಲಿ ಮನೆಮಾಡಿದೆ.

ರಥಗಳು ಮತ್ತು ಅವು ಚಲಿಸುವ ಪ್ರದೇಶಗಳು ವಿವರ

ಜನಕಲ್ಯಾಣ ರಥ : ಆನೇಕಲ್, ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಬಿಟಿಎಂ ಲೇಔಟ್ ಮತ್ತು ಯಶವಂತಪುರ.

ಜನವಿಶ್ವಾಸ ರಥ : ಸಿವಿ ರಾಮನ್ ನಗರ, ಮಹದೇವಪುರ, ಕೆಆರ್ ಪುರ, ಸರ್ವಜ್ಞನಗರ ಮತ್ತು ಪುಲಕೇಶಿನಗರ.

ಜನಜಾಗೃತಿ ರಥ : ಯಲಹಂಕ, ಬ್ಯಾಟರಾಯನಪುರ, ದಾಸರಹಳ್ಳಿ ಮತ್ತು ರಾಜರಾಜೇಶ್ವರಿನಗರ.

ಜನಪ್ರೇರಣ ರಥ : ಹೆಬ್ಬಾಳ, ಮಲ್ಲೇಶ್ವರ, ಮಹಾಲಕ್ಷ್ಮೀ ಲೇಔಟ್, ಗೋವಿಂದರಾಜನಗರ, ವಿಜಯನಗರ, ರಾಜಾಜಿನಗರ ಮತ್ತು ಗಾಂಧಿನಗರ.

ಜನಶಕ್ತಿ ರಥ : ಚಾಮರಾಜಪೇಟೆ, ಬಸವನಗುಡಿ, ಪದ್ಮನಾಭನಗರ, ಜಯನಗರ, ಚಿಕ್ಕಪೇಟೆ, ಶಾಂತಿನಗರ ಮತ್ತು ಶಿವಾಜಿನಗರ.

English summary
On the occasion of LK Advani's Jan Chethena Yatra arriving in Bangalore on Sunday 30 Oct, 5 BJP local chariots will move in 5 different direction in Bangalore to give more information about concept of Rath Yatra to the public. BJP state president KS Eshwarappa will inaugurate these 5 chariots which culminate in National College Grounds, Basavanagudi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X