ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಿಗೆಹಳ್ಳಿ ಭೂಹಗರಣ: ಅಶೋಕ್‌ ವಿರುದ್ಧ ಬಿತ್ತು ಮತ್ತೊಂದು ಕೇಸು

By Srinath
|
Google Oneindia Kannada News

denotification-one-more-case-against-hm-ashoka
ಬೆಂಗಳೂರು, ಅ.28: ಈಗಾಗಲೇ ಒಂದು ಭೂಹಗರಣದ ಭೂತವನ್ನು ಹೆಗಲಿಗೇರಿಸಿಕೊಂಡಿರುವ ಗೃಹ ಸಚಿವ ಆರ್‌. ಅಶೋಕ್‌ ವಿರುದ್ಧ ಮತ್ತೊಂದು ಭೂ ಹಗರಣ ಆರೋಪ ಕೇಳಿಬಂದಿದೆ. ಕೊಡಿಗೆಹಳ್ಳಿಯ ಕೆ.ಎನ್. ಜಗದೀಶ್ ಕುಮಾರ್ ಎಂಬುವವರು ಲೋಕಾಯುಕ್ತದಲ್ಲಿ ಈ ಭೂ ಕಬಳಿಕೆಯ ದೂರು ದಾಖಲಿಸಿದ್ದಾರೆ. ಗಮನಾರ್ಹವೆಂದರೆ ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಅವರು ಇದಕ್ಕೆ ಸಹಕರಿಸಿದ್ದಾರೆ ಎನ್ನಲಾಗಿದೆ.

'ಬೆಂಗಳೂರು ಉತ್ತರ ತಾಲ್ಲೂಕು ವಿದ್ಯಾರಣ್ಯಪುರ ವ್ಯಾಪ್ತಿಯ ಕೊಡಿಗೆಹಳ್ಳಿಯಲ್ಲಿರುವ ಲೋಕ ಕಲ್ಯಾಣ ಪ್ರತಿಷ್ಠಾನಕ್ಕೆ ಸೇರಿದ 7 ಎಕರೆ 9 ಗುಂಟೆ ಜಾಗದ ಕೆಲವೊಂದು ದಾಖಲೆಗಳನ್ನು ತಿದ್ದಿ ಅಶೋಕ್ ತಮ್ಮ ಸಹೋದರಿಯ ಮಕ್ಕಳಾದ ಮಾರುತೀಶ್‌, ವಿನೋದ್‌ಕುಮಾರ್‌, ಪ್ರಶಾಂತ್‌ಕುಮಾರ್‌, ಕೆಂಪಣ್ಣ ಮತ್ತು ರಾಜಣ್ಣ ಎಂಬವರ ಹೆಸರಿಗೆ ನೋಂದಣಿ ಮಾಡಿಸಿದ್ದಾರೆ. ಇದಾದ ನಂತರ ಬಹುತೇಕ ಭೂಮಿಯನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ' ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಟ್ರಸ್ಟ್‌ನ ಸದಸ್ಯರಲ್ಲಿ ಒಬ್ಬರಾದ ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಅವರು ಇದಕ್ಕೆ ಸಹಕರಿಸಿದ್ದು, ಭೂಮಿ ಪರಭಾರೆಯಾಗಲು ಅವರೂ ಕಾರಣರಾಗಿದ್ದಾರೆ.

ಈ ಟ್ರಸ್ಟ್‌ನ ಸದಸ್ಯರಾದ ಮಾಜಿ ಶಾಸಕ ರಮೇಶ್‌ ಕುಮಾರ್‌ ಅವರಿಂದ ಜಾಗವನ್ನು ಖರೀದಿಸಿರುವಂತೆ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಸರ್ವೆ ನಂ.162/1, 163/1, 163/2 ಮತ್ತು 164/7ಕ್ಕೆ ಸೇರಿದ ಈ ಜಾಗದ ಒಟ್ಟು ಮೌಲ್ಯ 175 ಕೋಟಿ ರೂಪಾಯಿ. ಅಲ್ಲಿ ಈಗ ಅಪಾರ್ಟ್‌ಮೆಂಟ್‌ಗಳನ್ನು ಕಟ್ಟಿಸಲಾಗುತ್ತಿದೆ ಎಂದು ಜಗದೀಶ್ ಕುಮಾರ್ ದೂರಿದ್ದಾರೆ.

ರಾಜ್ಯಪಾಲರ ಕಾರ್ಯದರ್ಶಿ, ಬೆಂಗಳೂರು ನಗರ ಜಿಲ್ಲಾಧಿಕಾರಿ, ಯಲಹಂಕ ತಹಶೀಲ್ದಾರ್ ಅವರಿಗೆ ಈಗಾಗಲೇ ದೂರು ನೀಡಲಾಗಿದೆ. ಇದರ ಜತೆಗೆ ಲೋಕಾಯುಕ್ತಕ್ಕೂ ದೂರು ನೀಡಿದ್ದೇನೆ. ಈ ಕುರಿತು ಅಶೋಕ್‌ ವಿರುದ್ದ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸುವುದಾಗಿ ಜಗದೀಶ್‌ ಕುಮಾರ್‌ ತಿಳಿಸಿದ್ದಾರೆ.

English summary
The Karnataka Home minister R Ashoka who is already accussed in a Land Denotification Case is involved in one more case. As such KN Jagadish Kumar fas filed a complaint in Lokayukta Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X