ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡ್ವಾಣಿ ರಥ ಯಾತ್ರೆ ದಾರಿಯಲ್ಲಿ ಆರ್ ಡಿಎಕ್ಸ್ ಪತ್ತೆ

By Mahesh
|
Google Oneindia Kannada News

RDX bomb found in Advani yatra route in Tirunelveli, TN
ಮಧುರೈ, ಅ.28: ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು ಕೈಗೊಂಡಿರುವ 'ಜನ ಚೇತನ ಯಾತ್ರೆ' ಗೆ ಬಾಂಬ್ ಭೀತಿ ಸುದ್ದಿ ಹೊರ ಬಿದ್ದ ಬೆನ್ನಲ್ಲೇ ಶುಕ್ರವಾರ ಆರ್ ಡಿಎಕ್ಸ್ ಬಾಂಬ್ ಗಳು ಪತ್ತೆಯಾಗಿದೆ.

ಅಡ್ವಾಣಿ ಅವರ ರಥ ಯಾತ್ರೆ ಸಾಗುವ ದಾರಿಯಲ್ಲೇ ಈ ಆರ್ ಡಿಎಕ್ಸ್ ಬಾಂಬ್ ಗಳು ಸಿಕ್ಕಿರುವುದು ಆತಂಕಕ್ಕೆ ಕಾರಣವಾಗಿದೆ. ಸದ್ಯ ಕೇರಳದಲ್ಲಿರುವ ಅಡ್ವಾಣಿ ಅವರು ಮಧುರೈನ ರಾಜಪಾಳ್ಯಂ ಹಾದಿಯಲ್ಲಿ ಸಾಗಬೇಕಿತ್ತು. ಆದರೆ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ ಯಾತ್ರೆ ಹಾದಿ ಬದಲಿಸಲಾಗಿದೆ.

ಮಧುರೈ ಹಾಗೂ ಟಿ ಕಲ್ಲು ಪಟ್ಟಿ ನಡುವಿನ ಸೇತುವೆಯ ಕೆಳಗೆ ಆರ್ ಡಿಎಕ್ಸ್ ಬಾಂಬ್ ನೋಡಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ. 6 ಅಡಿ ಪ್ಲಾಸ್ಟಿಕ್ ಪೈಪ್ ಗೆ ಹೊಂದಿಕೊಂಡಂತೆ ಇರುವ ಬಾಂಬ್ ಗೆ 25 ಮೀ ತಂತಿ ಅಳವಡಿಸಲಾಗಿದ್ದು, ದೂರದಿಂದ ಟ್ರಿಗರ್ ಮಾಡಿ ಸ್ಫೋಟಿಸಲು ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ.

ಎನ್ ಡಿಎ ಕಮ್ಯಾಂಡೋಗಳು ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿದ್ದಾರೆ. ಅಡ್ವಾಣಿಗೆ 3 ಸುತ್ತಿನ ಭದ್ರತೆ ಒದಗಿಸಲಾಗಿದೆ. ಅಡ್ವಾಣಿ ರಥ ಯಾತ್ರೆಗೆ ಉಗ್ರರ ಭೀತಿ ಇದೆ ಎಂದು ಕೇಂದ್ರ ಭದ್ರತಾ ಮಂಡಳಿ ಸೂಚಿಸಿದೆ.

English summary
There was a major security scare near LK Advani's Jan Chethana Yatra route in Madurai when an RDX bomb was discovered. The bomb was discovered under a bridge on which he was scheduled to travel on the way from Madurai to Rajapalayam. The bomb was found by locals first, who later alerted local police who then intimated the NDA commandos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X