ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿದರಿ ವಿರುದ್ಧ ನಗಾರಿ ಬಾರಿಸಿದ ಎಚ್.ಡಿ.ಕುಮಾರಸ್ವಾಮಿ

By Srinath
|
Google Oneindia Kannada News

ukp-scam-haunts-hdd-kumaraswamy-takes-dig-at-bidari
ಬೆಂಗಳೂರು, ಅ.27: ಕೃಷ್ಣಾ ಮೇಲ್ದಂಡೆ ಗುತ್ತಿಗೆ ಅಕ್ರಮದಲ್ಲಿ ಸಿಓಡಿ ಪೊಲೀಸರು ತನಿಖೆಗಾಗಿ ದೂರು ದಾಖಲಿಸಿರುವುದಕ್ಕೆ ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ಸಿಓಡಿ ಡಿಜಿ ಶಂಕರ ಬಿದರಿ ವಿರುದ್ಧ ಕಿಡಿಕಾರಿದ್ದಾರೆ.

ಯಾರದ್ದೊ ಹಿತಾಸಕ್ತಿ ಕಾಪಾಡುವುದಕ್ಕಾಗಿ ಸಿಓಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಆರೋಪಿಸಿರುವ ಕುಮಾರಸ್ವಾಮಿ, ಈ ಕುರಿತು ಎಫ್‌ಐಆರ್ ದಾಖಲಿಸಿರುವ ಅಧಿಕಾರಿಗಳ ಸತ್ಯಾಂಶವನ್ನು ಮುಂದಿನ ದಿನಗಳಲ್ಲಿ ಬಯಲಿಗೆಳೆಯುವುದಾಗಿ ಗುಡುಗಿದರು.

ದಾಖಲಾಗಿರುವ ದೂರುನಲ್ಲಿ ಸ್ಪಷ್ಟವಾದ ಹೆಸರು ಸೂಚಿಸಿಲ್ಲ. ಆದರೆ ಮುಂದೆ ಹೆಸರನ್ನು ಬೇಕಾದ ರೀತಿಯಲ್ಲಿ ಸೇರಿಸಿಕೊಳ್ಳುತ್ತಾರೆ. ಈ ರೀತಿ ಯಾರದ್ದೋ ಚಿತಾವಣೆ ಮೇರೆಗೆ, ದ್ವೇಷಕ್ಕಾಗಿ ದೇವೇಗೌಡರ ಮೇಲೆ ದೂರು ದಾಖಲಾಗಿದೆ. ದೂರು ದಾಖಲಿಸಿಕೊಂಡು ಸತ್ಯ ಹರಿಶ್ಚಂದ್ರರಂತೆ ಬಿಂಬಿಸಿಕೊಳ್ಳುತ್ತಿರುವ ಸಿಐಡಿ ಅಧಿಕಾರಿಗಳ ಬಣ್ಣವನ್ನು ಸದ್ಯದಲ್ಲೇ ಬಯಲಿಗೆಳೆಯುತ್ತೇನೆ ಎಂದು ಮಾರುತ್ತರ ನಿಡಿದ್ದಾರೆ.

ರಾಜ್ಯದಲ್ಲಿ ಸಿಐಡಿ ಅಧಿಕಾರಿಗಳು ಯಾರ ಮರ್ಜಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ಅವರ ಹಿನ್ನೆಲೆ ಏನು ಎಂಬುದರ ಸಮಗ್ರ ಮಾಹಿತಿಯನ್ನು ಜನರ ಮುಂದಿಡುವುದಾಗಿ ಪರೋಕ್ಷವಾಗಿ ಸಿಐಡಿ ಡಿಜಿ ಶಂಕರ್ ಬಿದರಿ ವಿರುದ್ಧ ಹರಿಹಾಯ್ದರು.

1995ರ ಪ್ರಕರಣದ ಬಗ್ಗೆ ತನಿಖೆ ನಡೆಸಲು ರಚಿಸಿದ್ದ ಸದನ ಸಮಿತಿ ವರದಿಯನ್ನು ಎರಡು ಬಾರಿ ಸಚಿವ ಸಂಪುಟದಲ್ಲಿ ಚರ್ಚಿಸಿ ಪ್ರಕರಣ ಕೈ ಬಿಟ್ಟ ನಂತರವೂ ಮತ್ತೆ ಸಿಐಡಿ ತನಿಖೆಗೆ ವಹಿಸಿ ಇದೀಗ ಎಫ್ಐಆರ್‌ ದಾಖಲಿಸಲಾಗಿದೆ. ರಾಜಕೀಯ ಸಣ್ಣತನ, ದ್ವೇಷ ಇದರ ಹಿಂದಿದೆ ಎಂದು ದೂರಿದರು.

ಯಾರೋ ಒಬ್ಬರು ಅರ್ಜಿ ಗುಜರಾಯಿಸುವುದು. ಆ ಅರ್ಜಿ ಆಧಾರದ ಮೇಲೆ ಬೇಕಂತಲೇ ತನಿಖೆ ನಡೆಸುವುದು. ಆ ನಂತರ ಎಫ್ಐಆರ್‌ ದಾಖಲಿಸುವುದು ನಡೆದಿದೆ. ಎಲ್ಲದಕ್ಕೂ ಮುಂದಿನ ದಿನಗಳಲ್ಲಿ ಸೂಕ್ತ ಉತ್ತರ ನೀಡಲಾಗುವುದು ಎಂದರು.

English summary
Vidhana Soudha police drew up a FIR on Monday (Oct 24) against unnamed 'politicians' and 'officials' involved in a Rs 400-crore scam in the awarding of piece works contracts in the Upper Krishna Project (UKP) during 1995-98. As such Upper Krishna Project Scam haunts HD Deve Gowda. H D Kumaraswamy takes dig at Shankar Bidari,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X