ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣಾ ಮೇಲ್ದಂಡೆ ಗುತ್ತಿಗೆ ಹಗರಣದಲ್ಲಿ ಜೆ.ಎಚ್‌. ಪಟೇಲರ ಪಾತ್ರವೇನು?

By Srinath
|
Google Oneindia Kannada News

ukp-scam-haunts-devegowda-role-of-jh-patel
ಬೆಂಗಳೂರು, ಅ.27: ಕೃಷ್ಣಾ ಮೇಲ್ದಂಡೆ ಗುತ್ತಿಗೆ ಹಗರಣದಲ್ಲಿ ಮುಖ್ಯವಾಗಿ ದೇವೇಗೌಡರ ಹೆಸರು ಏಕೆ ಕೇಳಿಬರುತ್ತಿದೆ ಅಂದರೆ ... ರಾತ್ರೋರಾತ್ರಿ ಅವರು ದೇಶದ ಪ್ರಧಾನಿಯಾಗುವ ಕೆಲವೇ ದಿನಗಳ ಮುನ್ನ ರಾಜ್ಯದ ಮುಖ್ಯಮಂತ್ರಿಯಾಗಿ ತರಾತುರಿಯಲ್ಲಿ ಕಾಮಗಾರಿ ತುಂಡು ಗುತ್ತಿಗೆಗೆ ಅನುಮೋದನೆ ನೀಡಿದ್ದರು. ಆಗಲೇ ಅನುಮಾನದ ಹೊಗೆ ಹಬ್ಬಿದ್ದು.

ಬಳಿಕ ದೇವೇಗೌಡರು ತಮ್ಮ ಪ್ರೀತಿಪಾತ್ರ ಜೆ.ಎಚ್‌.ಪಟೇಲರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದ್ದರು. ಅವರು ಅಧಿಕಾರಕ್ಕೆ ಬರುತ್ತಿದ್ದಂತೆ ಹಗರಣದ ಬಗ್ಗೆ ತನಿಖೆ ನಡೆಸಲು 14 ಸದಸ್ಯರ ಸದನ ಸಮಿತಿ ರಚಿಸಲಾಗಿತ್ತು. ಸದನ ಸಮಿತಿಯು ಸಿಬಿಐ ತನಿಖೆಗೆ ನೀಡುವಂತೆ ಶಿಫಾರಸ್ಸು ಮಾಡಿತ್ತು.

ಆದರೆ ಮುಖ್ಯಮಂತ್ರಿ ಜೆ.ಎಚ್‌. ಪಟೇಲರು ಅದಕ್ಕೆ ಒಪ್ಪಿರಲಿಲ್ಲ. ಅಷ್ಟರಮಟ್ಟಿಗೆ ದೇವೇಗೌಡರಿಗೆ ತಮ್ಮ ನಿಷ್ಠೆ ತೋರಿದರು. ಕಾಲಹರಣ ತಂತ್ರ ಅಳವಡಿಸಿಕೊಂಡ ಪಟೇಲರು ಮತ್ತೂಂದು ಸದನ ಸಮಿತಿಯನ್ನು ರಚಿಸಿದರು. ಮತ್ತೊಂದೂ ಇರಲಿ ಎಂದು ನಾಲ್ವರು ನಿವೃತ್ತ ಅಧಿಕಾರಿಗಳ ಸಮಿತಿಯನ್ನೂ ರಚಿಸಿತ್ತು. ಆದರೆ ಆ ಸಮಿತಿ ಯಾವುದೇ ವರದಿ ಕೊಟ್ಟಿರಲಿಲ್ಲ.

ವಾಸ್ತವದಲ್ಲಿ, ಅಂದು ವಿಧಾನಮಂಡಲದ ಅಂದಾಜು ಸಮಿತಿಯ ಅಧ್ಯಕ್ಷರಾಗಿದ್ದ ವೈಜ್ಯನಾಥ್‌ ಪಾಟೀಲ್‌ ಯೋಜನೆಯಲ್ಲಿ ನಡೆದಿದ್ದ ಅವ್ಯವಹಾರಗಳ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಿದ್ದರು. ಇನ್ನು, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ನಂತರ ಈ ಹಗರಣ ಕುರಿತ ಸದನ ಸಮಿತಿ ವರದಿಗೆ ಜೀವ ಕೊಡಲು ಮುಂದಾಗಿ ಸಿಬಿಐ ತನಿಖೆ ನಡೆಸುವಂತೆ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದರು. ಆದರೆ ಪ್ರಕರಣನ್ನು ಸಿಐಡಿ ತನಿಖೆಗೆ ವಹಿಸಿ ಸುಮ್ಮನಾಗಿದ್ದರು. ಅದೀಗ ಕೈಹಿಡಿದಿದೆ.

English summary
Vidhana Soudha police drew up a FIR on Monday (Oct 24) against unnamed 'politicians' and 'officials' involved in a Rs 400-crore scam in the awarding of piece works contracts in the Upper Krishna Project (UKP) during 1995-98. As such Upper Krishna Project Scam haunts HD Deve Gowda. What is the role of the then Chief Minister JH Patel?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X