ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಪಿ ಗೃಹ ಸಚಿವ ಅಶೋಕ್‌ ಯಾಕ್ ರಾಜೀನಾಮೆ ನೀಡುತ್ತಿಲ್ಲ?

By Srinath
|
Google Oneindia Kannada News

land-scam-ashoka-should-resign-demands-citizen-forum
ಬೆಂಗಳೂರು, ಅ.25: ಗೃಹ ಮಂತ್ರಿಯೇ ಆರೋಪಿಯಾಗಿರುವಾಗ ಯಾವ ಪೊಲೀಸ್‌ ಅಧಿಕಾರಿ ತನಿಖೆ ಮಾಡಲು ಮುಂದಾಗುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿದೆ. ಹೀಗಾಗಿ, ಭೂಹಗರಣದ ಭೂತವನ್ನು ಹೊತ್ತಿರುವ ಗೃಹ ಸಚಿವ ಆರ್‌. ಅಶೋಕ್‌ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಸಿಟಿಜನ್‌ ಫೋರಂ ಸೇರಿದಂತೆ ಮಾನವ ಹಕ್ಕುಗಳ ಹೋರಾಟಗಾರರು ಒತ್ತಾಯಿಸಿದ್ದಾರೆ.

ಅಶೋಕಗೆ ಸಚಿವ ಸ್ಥಾನದಲ್ಲಿ ಮುಂದುವರಿಯಲು ಯಾವುದೇ ಅರ್ಹತೆ ಇಲ್ಲ. ಆರೋಪಿಯೇ ಗೃಹ ಮಂತ್ರಿಯಾಗಿರುವಾಗ ಯಾವ ಪೊಲೀಸ್‌ ಅಧಿಕಾರಿ ತನಿಖೆ ಮಾಡಲು ಮುಂದಾಗುತ್ತಾರೆ ಎಂಬ ಪರಿಸ್ಥಿತಿ ಇದೆ.

ಹೀಗಾಗಿ, ನ್ಯಾಯಾಲಯದ ಆದೇಶಕ್ಕೆ ತಲೆಬಾಗುತ್ತೇನೆ ಎಂದು ಹೇಳುವ ಸಚಿವ ಅಶೋಕ್‌, ತಾವಾಗಿಯೇ ಮುಂದೆ ಬಂದು ರಾಜೀನಾಮೆ ಸಲ್ಲಿಸಿದರೆ ಒಳಿತು ಎಂದು ನಾಗರಿಕ ಸಮಿತಿ ಸದಸ್ಯ ಎನ್‌. ನರಸಿಂಹಮೂರ್ತಿ ಆಗ್ರಹಿಸಿದ್ದಾರೆ.

ನಗರದ ಎಂ.ಜಿ. ರಸ್ತೆಯ ಗಾಂಧಿ ಪ್ರತಿಮೆ ಮುಂಭಾಗ ಸೋಮವಾರ ಧರಣಿ ನಡೆಸಿದ ಮಾನವ ಹಕ್ಕುಗಳ ಹೋರಾಟಗಾರರು, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ರಾಜ್ಯಾಪಾಲರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ನಾಗರಿಕ ಸಮಿತಿ ಸದಸ್ಯರು, ವಕೀಲರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.

English summary
As the Karnataka Home minister R Ashoka is named accussed No. 1 in a Land Denotification Case the Citizen Forum members demand for the tainted minister's resignation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X