ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೆವಿನ್‌ಸ್ಕಿ ಲೈಂಗಿಕ ಹಗರಣ: ಜಾಬ್ಸ್‌ ಸಲಹೆ ಕೇಳಿದ್ದ ಕ್ಲಿಂಟನ್!

By Srinath
|
Google Oneindia Kannada News

clinton-lewinsky-sex-scandal-The Telegraph
ಲಂಡನ್, ಅ.25: ಅಮೆರಿಕದ ಅಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್ ತಮ್ಮ ಪರಿಚಾರಕಿ ಮೋನಿಕಾ ಲೆವಿನ್‌ಸ್ಕಿ ಜತೆಗಿನ ಚಕ್ಕಂದವನ್ನು ಜಗತ್ತಿನೆದುರು ಒಪ್ಪಿಕೊಳ್ಳುವಂತೆ ಮಾಡಿದ್ದು 'ಆಪಲ್' ಜನಕ ಸ್ಟೀವ್ ಜಾಬ್ಸ್! ಹೌದು, 1998ರಲ್ಲಿ ಇಡೀ ಜಗತ್ತಿನ ಹುಬ್ಬೇರಿಸುವಂತೆ ಮಾಡಿದ್ದ ಮೋನಿಕಾ ಲೆವಿನ್‌ಸ್ಕಿ ಹಗರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಒದ್ಲಾಡುತ್ತಿದ್ದಾಗ ಕಂಪ್ಯೂಟರ್ ದಿಗ್ಗಜ ದಿ. ಸ್ಟೀವ್ ಜಾಬ್ಸ್ ಗೆ ಫೋನಾಯಿಸಿ, ಈ ಸಮಸ್ಯೆಯನ್ನು ಹೇಗೆ ಎದುರಿಸುವುದು ಎಂದು ಕೇಳಿದ್ದರಂತೆ.

ಇದಕ್ಕೆ ಉತ್ತರಿಸಿದ್ದ ಜಾಬ್ಸ್, 'ನೀವು ಇಂತಹ ಕೆಲಸ ಮಾಡಿದ್ದೀರಿ ಎಂದು ನನಗನ್ನಸುತ್ತಿಲ್ಲ. ಹಾಗೊಂದು ವೇಳೆ ಮಾಡಿದ್ದೇ ಆದರೆ ಅದನ್ನು ದೇಶದ ಜನರೆದುರು ಸ್ಪಷ್ಟವಾಗಿ ತಿಳಿಸಿಬಿಡಿ' ಎಂಬ ಸಲಹೆ ನೀಡಿದ್ದರಂತೆ! ಆಗ ಅತ್ತ ಕಡೆಯಿಂದ ನೀರವ ಮೌನವೇ ಇದಕ್ಕೆ ಉತ್ತರವಾಗಿತ್ತಂತೆ!

ಅಂದಹಾಗೆ, ಕ್ಲಿಂಟನ್ ಕುಟುಂಬದ ಜತೆ ಅದರಲ್ಲೂ ಕ್ಲಿಂಟನ್ ಪುತ್ರಿ ಚೆಲ್ಸಿಯಾ ಜತೆ ಜಾಬ್ಸ್ ಆಪ್ತ ಸಂಬಂಧ ಹೊಂದಿದ್ದರು. ಜಾಬ್ಸ್ ಸತ್ತಾಗ ಇಡೀ ಕುಟುಂಬ ಕಂಬನಿ ಮಿಡಿದಿತ್ತು.

ಜಾಬ್ಸ್ ತಮ್ಮ 13ನೇ ವಯಸ್ಸಿಗೇ ಚರ್ಚಿಗೆ ಹೋಗುವುದನ್ನು ನಿಲ್ಲಿಸಿದ್ದರಂತೆ. ಅವರಿಗೆ ದೇವರು ಇದ್ದಾನೊ, ಇಲ್ಲವೊ ಎಂಬುದು ಒಂದು ರೀತಿ 50-50 ಛಾನ್ಸ್ ಎಂಬಂತಹ ಧೋರಣೆಯಾಗಿತ್ತಂತೆ. ಜಾಬ್ಸ್ ತಮ್ಮ 15ನೇ ವಯಸ್ಸಿನಲ್ಲೇ ಮಾದಕ ವಸ್ತು ಮರಿಜುವಾನದ ರುಚಿ ನೋಡಿದ್ದರಂತೆ!

ಇಂತಹ ಹತ್ತು ಹಲವು ಸ್ವಾರಸ್ಯಕರ ಅಂಶಗಳನ್ನು ಒಳಗೊಂಡ ಸ್ಟೀವ್ ಜಾಬ್ಸ್ ಅವರ ಜೀವನ ಚರಿತ್ರೆಯಲ್ಲಿ ಅಡಕವಾಗಿದೆ. ವಾಲ್ಟರ್ ಇಸಾಕ್‌ಸನ್ ಬರೆದಿರುವ ಈ ಜೀವನ ಚರಿತ್ರೆಯಲ್ಲಿ ಜಾಬ್ಸ್ ಜತೆ ನಡೆಸಲಾಗಿರುವ ಸುಮಾರು 40 ಹೆಚ್ಚು ಸಂದರ್ಶನಗಳಿವೆ.

English summary
An authorized biography on Steve Jobs, author Walter Isaacson reveals that the late Apple co-founder had advised former US President Bill Clinton on how to handle the 1998 Monica Lewinsky scandal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X