ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸಾಯಿಖಾನೆ ಜಾನುವಾರು : ಯಲ್ಲಾಪುರದಲ್ಲಿ 3 ಬಂಧನ

By Srinath
|
Google Oneindia Kannada News

cattles-for-slaughter-3-arrested-by-yellapur-police
ಯಲ್ಲಾಪುರ, ಅ.25: ಕಸಾಯಿಖಾನೆಗಳಿಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಮೂವರನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ. ಒಟ್ಟು 9 ಎಮ್ಮೆ ಹಾಗೂ ಎತ್ತುಗಳನ್ನು ಪಾರುಮಾಡಿದ್ದು, ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.

ಮುಂಬೈದಿಂದ ಭಟ್ಕಳ ಹಾಗೂ ಮಂಗಳೂರಿನ ಕಸಾಯಿಖಾನೆಗಳಿಗೆ ಸಾಗಿಸಲಾಗುತ್ತಿದ್ದ ಏಳು ಎಮ್ಮೆ ಹಾಗೂ ಎರಡು ಎತ್ತುಗಳ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಲಾರಿಯನ್ನು ಬೆನ್ನಟ್ಟಿ ಇಡಗುಂದಿ ಬಳಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಮುಂಬೈ ನಿವಾಸಿಗಳಾದ ಬೋರಾ ಅಸ್ಲಾಂ ಅನ್ಸಾರಿ (18), ನಿಸ್ಸಾರ್ ಅಹಮ್ಮದ್ ಖುರೇಶಿ (48) ಮತ್ತು ಲಾರಿಯ ಚಾಲಕ ಇಕ್ಬಾಲ್ ಹುಸೇನ್ ಖುರೇಶಿ (37) ಬಂಧಿತರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಭಾಷ್ ಗುಡಿಮನಿ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಗೋಪಾಲಕೃಷ್ಣ ನಾಯಕ ನೇತೃತ್ವದಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು.

English summary
Illegal movement of cattle alleged for slaughter was found near idagundi in near Yellapur in North Kanara recently. Nine cattles are rescued and a lorry was recovered. Yallapur police have arrested 3 persons in thisi connection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X