ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿಪತ್ನಿತ್ವ ಪ್ರಕರಣ: ಕುಮಾರಣ್ಣನಿಗೆ ಅನಿತಾ ಅಭಯ

By Mahesh
|
Google Oneindia Kannada News

HD Kumaraswamy
ಬೆಂಗಳೂರು, ಅ.24: ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರ ಮೇಲೆ ಹಾಕಿರುವ ದ್ವಿಪತ್ನಿತ್ವದ ಕೇಸ್ ಠುಸ್ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ.

ಕಾನೂನುಬಾಹಿರವಾಗಿ ಕುಮಾರಸ್ವಾಮಿ ಅವರು ಎರಡು ಮದುವೆಯಾಗಿದ್ದಾರೆ. ಅವರ ಸಂಸದ ಸ್ಥಾನವನ್ನು ಅನರ್ಹಗೊಳಿಸಬೇಕು ಎಂದು ಹೈಕೋರ್ಟ್‌ಗೆ ಶಶಿಧರ ಬೆಳಗುಂಬ ಎಂಬುವವರು ರಿಟ್ ಅರ್ಜಿ ಸಲ್ಲಿದ್ದರು.

* ಆದರೆ, ಸಂಸದ ಸ್ಥಾನ ವಜಾಗೊಳಿಸುವ ಅಧಿಕಾರ ಇರುವುದು ಚುನಾವಣಾ ಆಯೋಗಕ್ಕೆ ಮಾತ್ರ. ಶಶಿಧರ್ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿಲ್ಲ.
* ದ್ವಿಪತ್ನಿತ್ವದ ವಿಷಯದಲ್ಲಿ ಐಪಿಸಿ ಸೆಕ್ಷನ್ 494, 495 ರ ಪ್ರಕಾರ ಪತಿಯ ವಿರುದ್ಧ ಮೊದಲ ಪತ್ನಿ ದೂರು ನೀಡಿ ಎರಡನೇ ಮದುವೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೆ ಮಾತ್ರ ಕೇಸ್ ಊರ್ಜಿತವಾಗುತ್ತದೆ.
* ಪ್ರಸ್ತುತ ಕೇಸ್ ನಲ್ಲಿ ಅನಿತಾ ಕುಮಾರಸ್ವಾಮಿ ಅವರು ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಯಾವುದೇ ದೂರು ದಾಖಲಿಸಿಲ್ಲ. ದಾಖಲಿಸುವ ಸಾಧ್ಯತೆಯೂ ಇಲ್ಲ.

Note: Chapter XX of Indian Penal Code

IPC section 494: Marrying again during lifetime of husband or wife.

IPC section 495: Same offence with concealment of former marriage from person with whom subsequent marriage is contracted.

Accused shall be punished with imprisonment of either description for a term which may extend to 10 years, and shall also be liable to fine.

ಇದರ ಆಧಾರದಿಂದ ಹೇಳುವುದಾದರೆ, ಧರ್ಮಪತ್ನಿ ಅನಿತಾ ಅವರಿಗೆ ತಿಳಿಸದೆ ಕುಮಾರಸ್ವಾಮಿ ಅವರು ತಮ್ಮ ಎರಡನೇ ಮದುವೆಯನ್ನು(ಆರೋಪಿತ, ಮಾಧ್ಯಮ ವರದಿ ಆಧಾರಿತ)ಮಾಡಿಕೊಂಡಿಲ್ಲ.

ಅನಿತಾ ಕುಮಾರಸ್ವಾಮಿ ಅವರು ದೂರು ನೀಡದ ಹೊರತು ಕುಮಾರಸ್ವಾಮಿ ದ್ವಿಪತ್ನಿತ್ವ ಪ್ರಶ್ನೆಗೆ ಬೆಲೆ ಇರುವುದಿಲ್ಲ. ಇದಲ್ಲದೆ ಕುಮಾರಸ್ವಾಮಿಗೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಪ್ರಕರಣವೂ ಬೆಂಬಲಕ್ಕೆ ನಿಲ್ಲಲಿದೆ.

ಕರುಣಾನಿಧಿ ಪ್ರಕರಣ ಏನು ಹೇಳುತ್ತದೆ...?
ಇಷ್ಟಕ್ಕೂ ಅನಿತಾ ಮೇಡಂ ನಟಿ ರಾಧಿಕಾರನ್ನು ಒಪ್ಪಿಕೊಳ್ಳಲು ಕಾರಣವೇನು?

English summary
A Bangalore based advocate Shashidhar Belagumba has filed a public interest writ petition before the Karnataka High Court accusing of former chief minister HD Kumaraswamy's bigamy, under ipc section 494, 495 but HDK wife Anitha holds the key in this case not court. Kumaraswamy's legal wife Anitha has power than second wife Radhika according to Hindu Act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X