ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಿಮೋಳಿಗೆ ಸಿಗಲಿಲ್ಲ ಜಾಮೀನು; ಅತ್ತೆ ಮನೆಯಲ್ಲೇ ದೀಪಾವಳಿ

By Srinath
|
Google Oneindia Kannada News

2g-scam-kanimozhi-bail-order-on-nov-3
ನವದೆಹಲಿ, ಅ.24: ಸ್ಪೆಕ್ಟ್ರಂ ಹಗರಣದಲ್ಲಿ ಸಿಲುಕಿರುವ ಡಿಎಂಕೆ ಸಂಸದೆ ಕನ್ನಿಮೊಳಿಗೆ ಪಟಿಯಾಲಾ ಹೈಕೋರ್ಟ್ ತಕ್ಷಣಕ್ಕೆ ಜಾಮೀನು ನೀಡಲು ನಿರಾಕರಿಸಿದೆ. ಇದರಿಂದ ಕನ್ನಿಮೋಳಿಗೆ ಈ ಬಾರಿ ಅತ್ತೆ ಮನೆಯಲ್ಲೇ ದೀಪಾವಳಿ. ಏನಾದರೂ ಮಾಡಿ ತನ್ನ ಕಣ್ಮಣಿ ಮಗಳನ್ನು (ಕನ್ನಿಮೋಳಿ ಅಂದರೆ ಕಣ್ಮಣಿ ಎಂದರ್ಥ ) ತವರಿಗೆ ಕರೆತರುವ ಪ್ರಯತ್ನಗಳೂ ಕರುಣಾನಿಧಿ 'ಕೈ' ಹಿಡಿಯಲಿಲ್ಲ. ಮೇ 20ರಿಂದ ಕನ್ನಿಮೋಳಿ ತಿಹಾರ್ ಜೈಲಿನಲ್ಲಿ ಠಿಕಾಣಿ ಹೂಡಿದ್ದಾರೆ.

ಕಲೈಂಗರ್ ಟಿವಿ ಎಂಡಿ ಶರದ್ ಕುಮಾರ್, ಅಸೀಫ್ ಬಲ್ವಾ, ರಾಜೀವ್ ಅಗರವಾಲ್ ಮತ್ತು ಕರೀಂ ಮೊರಾನಿ ಸೇರಿದಂತೆ ಒಟ್ಟು ಐದು ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ ನವೆಂಬರ್ 3ಕ್ಕೆ ತೀರ್ಪು ಕಾಯ್ದಿರಿಸಿತು. ಇದಕ್ಕೂ ಮುನ್ನ ಈ ಐದೂ ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಗೆ ಆಕ್ಷೇಪ ಸಲ್ಲಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ಸಿಬಿಐ ತಿಳಿಸಿತ್ತು.

English summary
The Delhi High Court has reserved its order on DMK MP Kanimozhi's bail plea to Nov 3. The CBI had earlier stated that it will not oppose the bail plea of Kanimozhi and 4 others including Sharad Kumar, Asif Balwa, Rajiv Agarwal and Karim Morani who were accused in the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X