ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.22ರಂದು ಯುಆರ್ ಅನಂತಮೂರ್ತಿ ಸಾಹಿತ್ಯ ಚಿಂತನ

By Prasad
|
Google Oneindia Kannada News

Dr UR Anantha Murthy
ಬೆಂಗಳೂರು, ಅ. 22 : ಕರ್ನಾಟಕ ಸಾಹಿತ್ಯ ಅಕಾಡೆಮಿಯು ಶೇಷಾದ್ರಿಪುರಂ ಕಾಲೇಜಿನ ಕನ್ನಡ ಸ್ನಾತಕೋತ್ತರ ಕೇಂದ್ರ ಮತ್ತು ಕನ್ನಡ ವಿಭಾಗದೊಂದಿಗೆ ಅಕ್ಟೋಬರ್ 22ರಂದು ಬೆಳಿಗ್ಗೆ 10.30 ಗಂಟೆಗೆ ಶೇಷಾದ್ರಿಪುರಂ ಕಾಲೇಜು ಸಭಾಂಗಣದಲ್ಲಿ ಡಾ ಯು.ಆರ್. ಅನಂತಮೂರ್ತಿ - ಸಾಹಿತ್ಯ ಚಿಂತನ ವಿಚಾರ ಸಂಕಿರಣ ಸಂವಾದ ಕಾರ್ಯಕ್ರಮವನ್ನು ನಡೆಸಲಿದೆ.

ಹಿರಿಯ ಸಾಹಿತಿಗಳಾದ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಮಾಲೆಯ ಅನಂತಮೂರ್ತಿ ಕೃತಿ ಬಿಡುಗಡೆ ಮಾಡಲಿದ್ದಾರೆ. ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿ ಡಾ ವೂಡೇ ವಿ. ಕೃಷ್ಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಅಕಾಡೆಮಿಯ ಅಧ್ಯಕ್ಷರಾದ ಪ್ರೊ ಎಂ.ಎಚ್.ಕೃಷ್ಣಯ್ಯ ಅವರು ಅಧ್ಯಕ್ಷತೆ ವಹಿಸುವರು.

ಬೆಳಿಗ್ಗೆ 11.30 ಗಂಟೆಗೆ ಅನಂತಮೂರ್ತಿಯವರ ಸಾಹಿತ್ಯ ಕುರಿತಂತೆ ಪ್ರೊ.ಸಿ.ನಾಗಣ್ಣ, ಡಾ.ಸಿರಾಜ್ ಅಹಮದ್ ಮತ್ತು ಎಸ್.ಆರ್.ವಿಜಯಶಂಕರ್ ಅವರು ಮಾತನಾಡಲಿದ್ದಾತೆ. ಡಾ ಎಸ್.ಎಸ್.ಲಕ್ಷ್ಮೀನಾರಾಯಣ ಆವಯೀ ಅವರು ಈ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸುವರು. ಮಧ್ಯಾಹ್ನ 2.30 ಗಂಟೆಗೆ ಯು.ಆರ್.ಅನಂತಮೂರ್ತಿಯವರೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಯಲಿದ್ದು, ಕಾರ್ಯಕ್ರಮದಲ್ಲಿ ಡಾ. ವಿಜಯಾ, ಡಾ ಎಂ.ಎಸ್.ಆಶಾದೇವಿ, ಡಾ.ಕೆ.ಸತ್ಯನಾರಾಯಣ, ಚಂದ್ರಶೇಖರ ಆಲೂರು ಹಾಗೂ ಡಾ.ಜಿ.ಪ್ರಶಾಂತ ನಾಯಕ್ ಅವರು ಪಾಲ್ಗೊಳ್ಳಲಿದ್ದಾರೆ.

English summary
A seminar on literary works of Jnanpith awardee Dr U.R. Anantha Murthy has been organized at Sheshadripuram college Bangalore on October 22, 2011 by Karnataka Sahitya Academy. Prof GS Siddalingaiah will inaugurate the program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X