ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಲಿನಲ್ಲಿ ದುಃಖ ತಡೆಯಲಾರದೆ ಕಣ್ಣೀರಿಟ್ಟ ಯಡ್ಡಿ

|
Google Oneindia Kannada News

B S Yedyurappa
ಬೆಂಗಳೂರು ಅ 21: ತನ್ನ ಅಧಿಕಾರದ ಅವಧಿಯಲ್ಲಿ ಮೆಟ್ರೋ ಕಾಮಗಾರಿ ಚುರುಕಾಗಿ ನಡೆಯಲು ಕಾರಣಕರ್ತರಾಗಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಗುರುವಾರ (ಅ 20) ಮೆಟ್ರೋ ಸಮಾರಂಭದ ಉದ್ಘಾಟನೆ ಮತ್ತು ಮೊದಲ ಸಾರ್ವಜನಿಕ ಸಂಚಾರವನ್ನು ಟಿವಿಯಲ್ಲಿ ವೀಕ್ಷಿಸಿ ಕಣ್ಣೀರಿಟ್ಟ ಘಟನೆ ವರದಿಯಾಗಿದೆ.

ಜೈಲಿನ ಮೂಲಗಳ ಪ್ರಕಾರ, ಕಟ್ಟಾ ಸುಬ್ರಮಣ್ಯ ನಾಯ್ದು ಮತ್ತು ಕಟ್ಟಾ ಜಗದೀಶ್ ಜೊತೆ ಉದ್ಘಾಟನೆಯ ನೇರ ಪ್ರಸಾರ ವೀಕ್ಷಿಸುತ್ತಿದ್ದ ಯಡಿಯೂರಪ್ಪ ದುಃಖ ತಡೆಯಲಾರದೆ ಬಿಕ್ಕಿಬಿಕ್ಕಿ ಅತ್ತರೆಂದು ತಿಳಿದು ಬಂದಿದೆ. ನಂತರ ಕಟ್ಟಾ ಮತ್ತು ಅವರ ಪುತ್ರ ಬಿಎಸ್ವೈ ಅವರನ್ನು ಸಂತೈಸಿದ್ದಾರೆಂದು ಜೈಲಿನ ಮೂಲಗಳಿಂದ ತಿಳಿದು ಬಂದಿದೆ.

ಆಮೆಗತಿಯಲ್ಲಿ ಸಾಗುತ್ತಿದ್ದ ಮೆಟ್ರೋ ಕಾಮಗಾರಿಯನ್ನು ಸವಾಲಾಗಿ ಸ್ವೀಕರಿಸಿದ್ದ ಯಡಿಯೂರಪ್ಪ ಅದಕ್ಕೆ ಬೇಕಾದ ಹಣಕಾಸಿನ ವ್ಯವಸ್ಥೆಯನ್ನು ತುರ್ತಾಗಿ ನೀಡಲು ಬಜೆಟ್ ನಲ್ಲಿ ಹಣ ಮೀಸಲಿಟ್ಟಿದ್ದರು ಅಲ್ಲದೆ ತನ್ನ ಅಧಿಕಾರದ ಅವಧಿಯಲ್ಲೇ ಮೆಟ್ರೋ ಉದ್ಘಾಟನೆ ನಡೆಯ ಬೇಕೆಂದು ಪಣ ತೊಟ್ಟಿದ್ದರು. ಆದರೆ ಅವರ ಪಕ್ಷ ಅಧಿಕಾರದಲ್ಲಿದ್ದರೂ ಉದ್ಘಾಟಿಸುವ ಯೋಗ ಅವರಿಗಿಲ್ಲ.

2008ರಲ್ಲಿ ಬೆಂಗಳೂರು ಮೆಟ್ರೋ ನಿರ್ದೇಶಕರಾಗಿದ್ದ ವಿ ಮಧು ಅವರನ್ನು ಆ ಸ್ಥಾನದಿಂದ ವರ್ಗಾಯಿಸಿ ಶ್ರೀಶೈಲಂ ಅವರನ್ನು ಆ ಸ್ಥಾನದಲ್ಲಿ ಕೂರಿಸಿ ಕಾಮಗಾರಿ ಚುರುಕಾಗಿ ಸಾಗಲು ಯಡಿಯೂರಪ್ಪ ಪ್ರಮುಖ ಕಾರಣರಾಗಿದ್ದರು.

English summary
Ex CM B S Yedyurappa breaks down yesterday after watching the inauguration ceremony of Namma Metro in Parappana Agrahara Central Jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X