ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಭಾರತದ ಮೊದಲ ಮೆಟ್ರೋಗೆ ಚಾಲನೆ

By Mahesh
|
Google Oneindia Kannada News

BMRCL Metro Flagged Off
ಬೆಂಗಳೂರು, ಅ.20: ಬಹುನಿರೀಕ್ಷಿತ ದಕ್ಷಿಣ ಭಾರತದ ಮೊದಲ ಮೆಟ್ರೋ ರೈಲು ಸೇವೆ 'ಬಿಎಂಆರ್ ಸಿಎಲ್ ನಮ್ಮ ಮೆಟ್ರೋ'ಗೆ ಕೇಂದ್ರ ನಗರಾಭಿವೃದ್ಧಿ ಸಚಿವ ಕಮಲನಾಥ್ ಅವರು ಗುರುವಾರ(ಅ.20) ರಂದು ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ನಗರದ ಎಂ.ಜಿ ರಸ್ತೆಯಲ್ಲಿರುವ ನಮ್ಮ ಮೆಟ್ರೋ ಸ್ಟೇಷನ್ ನಲ್ಲಿ ಬೆಂಗಳೂರಿನ ಕನಸಿನ ಸಾರಿಗೆ ಚಾಲನೆ ದೊರೆತಿದೆ. ಮೆಟ್ರೋ ಸ್ಟೇಷನ್ ನ ಎರಡನೇ ಮಹಡಿಯಲ್ಲಿ ಹೂವುಗಳಿಂದ ಅಲಂಕೃತಗೊಂಡ 'ಹಸಿರು ಬಟನ್' ಒತ್ತುವ ಮೂಲಕ ಮೆಟ್ರೋ ಸಂಚಾರಕ್ಕೆ ಚಾಲನೆ ನೀಡಲಾಯಿತು.

ಇದಕ್ಕೂ ಮುನ್ನ ಹೊಸ ವಾಹನಕ್ಕೆ ಸಾಂಪ್ರದಾಯಿಕ ಶೈಲಿಯಲ್ಲಿ ವೇದಘೋಷಗಳ ನಡುವೆ ಪೂಜೆ ಸಲ್ಲಿಸಲಾಯಿತು.

ಗಣ್ಯರ ದಂಡು: ಕೇಂದ್ರದ ನಾಯಕರಾದ ರೈಲ್ವೇ ಸಚಿವ ದಿನೇಶ್ ತ್ರಿವೇದಿ,ವೀರಪ್ಪ ಮೊಯ್ಲಿ, ಕೆಎಚ್ ಮುನಿಯಪ್ಪ, ಬಿಜೆಪಿ ನಾಯಕ ಅನಂತಕುಮಾರ್, ಸಚಿವ ಆರ್ ಅಶೋಕ್, ಬಚ್ಚೇಗೌಡ, ಸುರೇಶ್ ಕುಮಾರ್, ಶೋಭಾ ಕರಂದ್ಲಾಜೆ, ನರೇಂದ್ರ ಬಾಬು, ಮೇಯರ್ ಶಾರದಮ್ಮ ಮುಂತಾದವರು ಈ ಐತಿಹಾಸಿಕ ಪಯಣದಲ್ಲಿ ಭಾಗವಹಿಸಿದ್ದಾರೆ.

ಸುಮಾರು 900 ಜನ ಮೊದಲ ಪಯಣದ ಸುಖ ಅನುಭವಿಸಲಿದ್ದಾರೆ.

ಮೊದಲ ಪಯಣವೇ ಸಚಿವ ಮುನಿಯಪ್ಪ ಮಿಸ್...?

English summary
South India's first Metro railway BMRCL Namma Metro starts its first run today(Oct.20). Union Minister Kamalnath and CM DV Sadananda Gowda inaugurated the much awaited public service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X