ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಹೆಸರೆತ್ತಿದರೆ ಸಾಕು ಭರ್ಜರಿ ಚಪ್ಪಾಳೆ

By Mahesh
|
Google Oneindia Kannada News

Yeddyurappa Metro raid
ಬೆಂಗಳೂರು, ಅ.20: ಈ ದಿನವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕು. ಎಂದು ಮಾಡಿದ ಪುಣ್ಯವೋ ನನಗೆ ಇಂದು ಮೆಟ್ರೋ ರೈಲು ಸಂಚಾರಕ್ಕೆ ಚಾಲನೆ ನೀಡುವ ಅವಕಾಶ ದೊರೆತಿದೆ.

ಈ ಶುಭ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಹೇಳಿ ಭಾವುಕರಾದರು.

ಬಿಎಂಆರ್ ಸಿಎಲ್ ಮೆಟ್ರೋ ರೈಲು ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬಗ್ಗೆಯೇ ಸಾರ್ವಜನಿಕರು ಮಾತಾಡುತ್ತಿದ್ದರು.

ಮೆಟ್ರೋ ಹಿಂದೆ ಎಸ್ ಎಂಕೃಷ್ಣ ಅವರ ಕನಸು, ಅನಂತ್ ಕುಮಾರ್ ಪರಿಶ್ರಮ ಇದೆ ಎಂದರೂ ಯೋಜನೆ ಕಾರ್ಯಗತವಾಗಲು ಯಡಿಯೂರಪ್ಪ ಅವರೇ ಕಾರಣ ಎಂಬುದು ಜನಪ್ರತಿನಿಧಿ ಮಾತಿನಿಂದ ಸ್ಪಷ್ಟವಾಗುತ್ತಿತ್ತು.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಯಡಿಯೂರಪ್ಪ ಅವರು ಜನಪ್ರಿಯ ನಾಯಕರಾಗಿ ಪಕ್ಷಾತೀತವಾಗಿ ಹೊಗಳಿಕೆ ಪಾತ್ರವಾದರು ಎಂದು ನಮ್ಮ ಪ್ರತಿನಿಧಿ ಪ್ರಸಾದ್ ನಾಯಿಕ ಅವರು ಮಾಹಿತಿ ನೀಡಿದ್ದಾರೆ.

ಅನಂತ್ ಕೂಡಾ ಹೊಗಳಿಕೆ: ಎಲ್ ಕೆ ಅಡ್ವಾಣಿ ಅವರ ಜನ ಚೇತನ ಯಾತ್ರೆಯಲ್ಲೂ ಬೆಂಗಳೂರು ಮೆಟ್ರೋ ಬಗ್ಗೆ ಎಲ್ಲರೂ ಕೇಳುತ್ತಿದ್ದರು. ಹೈದರಾಬಾದಿನಲ್ಲಿ ಇನ್ನೂ ಮೆಟ್ರೋ ಬಗ್ಗೆ ಚರ್ಚೆ ನಡೆದಿದೆ. ನಮ್ಮಲ್ಲಿ ಯೋಜನೆ ತ್ವರಿತ ಗತಿಯಲ್ಲಿ ಸಾಕಾರಗೊಳ್ಳಲು ಬಿಎಸ್ ಯಡಿಯೂರಪ್ಪ ಅವರೇ ಕಾರಣ ಎಂದರು.

ಯಡಿಯೂರಪ್ಪ ಅವರ ಹೆಸರು ಕೇಳುತ್ತಿದ್ದಂತೆ ಸಮಾರಂಭದಲ್ಲಿ ನೆರೆದ್ದಿದ್ದ 50 ಸಾವಿರಕ್ಕೂ ಅಧಿಕ ಜನ ಕಿವಿಗಡಕಿಚ್ಚುವಂತೆ ಚಪ್ಪಾಳೆ ಬಾರಿಸಿ ಹರ್ಷ ವ್ಯಕ್ತಪಡಿಸಿದರು.

ಹಾಸ್ಯ ಪ್ರಸಂಗ: ಕೆ.ಎಚ್ ಮುನಿಯಪ್ಪ ಫಸ್ಟ್ ರೈಡ್ ಮಿಸ್ ಮಾಡಿಕೊಂಡ ಪ್ರಸಂಗದ ನಂತರ ಕೇಂದ್ರ ರೈಲ್ವೇ ಸಚಿವ ದಿನೇಶ್ ದ್ವಿವೇದಿ ಕೂಡಾ ಕನ್ ಫ್ಯೂಸ್ ಸ್ಥಿತಿಯಲ್ಲಿದ್ದರು.

ಕೇಂದ್ರ ನಗರಾಭಿವೃದ್ಧಿ ಸಚಿವ ಕಮಲ್ ನಾಥ್ ಅವರತ್ತ ತಿರುಗಿ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳೇ ಎಂದು ಸಂಬೋಧಿಸಿ ಎಲ್ಲರನ್ನು ದಿಗ್ಭ್ರಮೆಗೆ ಒಳಪಡಿಸಿದರು. ನಂತರ ಸಾವರಿಸಿಕೊಂಡು

English summary
South India's first Metro railway BMRCL Namma Metro started its first run today(Oct.20). CM DV Sadananda Gowda and Union Ministers all praised good work done by then CM BS Yeddyurappa. BSY proved to be still mass leader in the function.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X