ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಪ್ಪಲಿ ಎಸೆದವನ ಬಿಟ್ಟು ಬಿಡಿ ಎಂದ ಅರವಿಂದ

By Mahesh
|
Google Oneindia Kannada News

Arvind Kejriwal
ಲಕ್ನೊ, ಅ.19: ಸಾರ್ವಜನಿಕ ಸಭೆಯೊಂದರಲ್ಲಿ ಯುವಕನೊಬ್ಬ ಅಣ್ಣಾ ಹಜಾರೆ ಟೀಂ ಸದಸ್ಯ ಅರವಿಂದ ಕೇಜ್ರಿವಾಲರ ಮೇಲೆ ಪಾದರಕ್ಷೆ ಎಸೆದ ಘಟನೆಯನ್ನು ಎಲ್ಲರೂ ಖಂಡಿಸಿದ್ದಾರೆ. ಆದರೆ, ಕೇಜ್ರಿವಾಲ ಅವರು ಚಪ್ಪಲಿ ಎಸೆದ ವ್ಯಕ್ತಿಯನ್ನು ಬಿಟ್ಟುಬಿಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಚಪ್ಪಲಿ ಎಸೆದವನನ್ನು ಉತ್ತರ ಪ್ರದೇಶದ ಜಲೋನ್‌ನ ಜಿತೇಂದ್ರ ಪಾಠಕ್ ಎಂದು ಗುರುತಿಸಲಾಗಿದೆ. ನನ್ನ ಕಚೇರಿಯ ಮೇಲೆ ದಾಳಿ ನಡೆಯಬಹುದು ಎಂದು ಮಾಹಿತಿ ಸಿಕ್ಕಿತ್ತು. ಮಾಧ್ಯಮ ಮಿತ್ರರು ಕೂಡಾ ದಾಳಿ ಬಗ್ಗೆ ಮಾಹಿತಿ ನೀಡಿದ್ದರು.

ಜಿತೇಂದ್ರ ಜೊತೆ ಕುಳಿತು ಮಾತನೋಡೋಣ ಏಕೆ ಈ ರೀತಿ ಕೃತ್ಯ ಎಸೆಗಿದ ಎಂಬುದನ್ನು ಅರಿಯೋಣ. ಅವನ ಸಮಸ್ಯೆಯನ್ನು ಶಾಂತಿ ರೀತಿಯಿಂದ ಪರಿಹರಿಸೋಣ.

ಚಪ್ಪಲಿ ಎಸೆತ ಎಂದು ನಾನು ಚಪ್ಪಲಿ ಎಸೆಯುವುದು ಅಥವಾ ಶಿಕ್ಷೆ ನೀಡುವುದು ಸರಿಯಾದ ಕ್ರಮವಲ್ಲ ಎಂದು ಅರವಿಂದ್ ಹೇಳಿದ್ದಾರೆ.

ಅಣ್ಣಾ ಬಳಗದ ಸದಸ್ಯ ಹಿರಿಯ ವಕೀಲ ಪ್ರಶಾಂತ್ ಭೂಷಣ್‌ರ ಮೇಲೆ ಮೂವರು ಯುವಕರು ಹಲ್ಲೆ ನಡೆಸಿದ್ದರು. ಭ್ರಷ್ಟಾಚಾರ ವಿರೋಧಿ ಆಂದೋಲನ ಹತ್ತಿಕ್ಕಲು ರಾಜಕೀಯ ಪಕ್ಷಗಳು ಈ ರೀತಿ ಕೃತ್ಯಗಳನ್ನು ಎಸೆಗುತ್ತಾರೆ.

ಹಿಸಾರ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಸೋತು ಸುಣ್ಣವಾಗಿರುವ ನೋವನ್ನು ಬೇರೆ ರೀತಿಯಲ್ಲಿ ತೋರಿಸಿಕೊಳ್ಳುವುದು ಸರಿಯಲ್ಲ ಎಂದು ಕಿರಣ್ ಬೇಡಿ ಅವರು ಪ್ರತಿಕ್ರಿಯಿಸಿದ್ದಾರೆ

English summary
Team Anna Member Arvind Kejriwal on Wednesday(OCt. 19) said, "Police must release the attacker. If he hurled the slipper, we have to sit with him and talk peacefully, we shouldn't attack him back".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X