ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತನ ಮಗಳು ಪ್ರಿಯಾಂಕಾ ಮೆಟ್ರೋ ರೈಲು ಚಾಲಕಿ

By Mahesh
|
Google Oneindia Kannada News

ಬೆಂಗಳೂರು, ಅ.18: 20 ವರ್ಷ ವಯಸ್ಸಿನ ಪ್ರಿಯಾಂಕಾಳಿಗೆ ಸೈಕಲ್ ಕೂಡಾ ಓಡಿಸೋಕೆ ಬರೋಲ್ಲ. ಈಗ ನೋಡಿ ಮೆಟ್ರೋ ರೈಲು ಓಡಿಸ್ತಾಳೆ ಎಂದು ಪ್ರಿಯಾಂಕಾಳ ತಾಯಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಕಗ್ಗಲಿಪುರದ ರೈತನ ಮಗಳಾದ ಪ್ರಿಯಾಂಕಾ ಎನ್, ಕನಸು ನನಸಾಗಿದೆ. ಬಿಎಂಆರ್ ಸಿಎಲ್ ಮೆಟ್ರೋ ರೈಲು ಚಾಲನೆ ಮಾಡುವ ಕನಸು ಅ. 20 ರಂದು ನೆರವೇರಲಿದೆ. ಬಹುನಿರೀಕ್ಷಿತ ಮೆಟ್ರೋ ರೈಲು ಚಾಲನೆ ಮಾಡುವ ಪೈಕಿ ಪ್ರಿಯಾಂಕಾ ಕೂಡಾ ಒಬ್ಬಳಾಗಿದ್ದಾಳೆ.

ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಡಿಪ್ಲೋಮಾ ಪಡೆದ ತಕ್ಷಣವೇ ಬಿಎಂಆರ್ ಸಿಎಲ್ ಸಂಸ್ಥೆಗೆ ಬಂದು ಉದ್ಯೋಗಕ್ಕಾಗಿ ಪ್ರಿಯಾಂಕಾ ಅರ್ಜಿ ಸಲ್ಲಿಸಿದ್ದಳು. ಎಲೆಕ್ಟ್ರಿಕಲ್ ಲೈನ್ ಹಾಗೂ ಟ್ರಾಕ್ಷನ್ ವಿಷಯದಲ್ಲಿ ಇದ್ದ ಆಸಕ್ತಿ ಮುಂದೆ ಮೆಟ್ರೋ ಬಗ್ಗೆ ತಿರುಗಿತು.

ದೆಹಲಿಯಲ್ಲಿ ತರಬೇತಿ ಸಮಯದಲ್ಲಿ ಮೆಟ್ರೋ ರೈಲು ಚಾಲನೆ ಮಾಡಿದಾಗ ಸಕತ್ ಥ್ರಿಲ್ ಎನಿಸಿತು. ಸುಮಾರು ಐದೂವರೆ ತಿಂಗಳುಗಳ ಕಾಲ ತರಬೇತಿ ನೀಡಲಾಯಿತು. ಬೆಂಗಳೂರಲ್ಲಿ ನಮ್ಮೂರಲ್ಲೇ ರೈಲು ಚಾಲನೆ ಮಾಡುವ ಸುವರ್ಣ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಪ್ರಯಾಣಿಕರ ಸುರಕ್ಷತೆ, ವೇಗ ಮಿತಿ ಚಾಲನೆ ನಮ್ಮ ಆದ್ಯತೆ ಎಂದು ಪ್ರಿಯಾಂಕಾ ಹೇಳುತ್ತಾರೆ.

English summary
Kaggalipura Farmer's daughter 20 year old Priyanka N does not know how to ride a bicycle. But she will be driving Namma Metro on Thursday(Oct.20). Priyanka has done diploma in electrical and electronics engineering and she is 2010 batch driver in BMRCL.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X