ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯದೇವದಿಂದ ವಿಕ್ಟೋರಿಯಾ ಬೆಡ್ ಗೆ ಯಡ್ಡಿ ಶಿಫ್ಟ್

By Mahesh
|
Google Oneindia Kannada News

BS Yeddyurappa discharged from Jayadeva Hospital
ಬೆಂಗಳೂರು, ಅ.17: ಜೈಲು ಹಕ್ಕಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆಯಿಂದ ಮಂಗಳವಾರ ಸಂಜೆ ಡಿಸ್ಚಾರ್ಜ್ ಮಾಡಲಾಗಿದೆ. ಜಯದೇವ ಆಸ್ಪತ್ರೆಯ ಕ್ಯಾಂಟೀನ್ ಗೇಟ್ ಮೂಲಕ ಹೊರ ಬಿದ್ದ ಆಂಬ್ಯುಲೆನ್ಸ್ ವಿಕ್ಟೋರಿಯಾ ಹಿಂದಿನ ಗೇಟ್ ಕಡೆ ತಲುಪಿದೆ.

ಯಡಿಯೂರಪ್ಪ ಇರುವ ಆಂಬ್ಯುಲೆನ್ಸ್ ಕಿಟಕಿ ಪರದೆಗಳನ್ನು ಮುಚ್ಚಲಾಗಿತ್ತು. ವಾಹನವನ್ನು ಸುಮಾರು 10-20 ವಾಹನಗಳು ಹಿಂಬಾಲಿಸುತ್ತಿರುವುದು ಸಿನಿಮಾ ಚೇಸಿಂಗ್ ರೀತಿ ಕಾಣಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಹಾಲಪ್ಪ, ಕಟ್ಟಾ ಜಾಗಕ್ಕೆ ಯಡ್ಡಿ: ಈ ನಡುವೆ ಯಡಿಯೂರಪ್ಪ ಅವರು ಮತ್ತೆ ಜೈಲಿಗೆ ಹೋಗ್ತಾರಾ ಅಥವಾ ಆಸ್ಪತ್ರೆ ಯಾತ್ರೆ ಮುಂದುವರೆಸಿ, ಮಣಿಪಾಲ್, ವಿಕ್ಟೋರಿಯಾ ಎಂದು ಜೈಲುವಾಸ ತಪ್ಪಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿದೆ.

ಆದರೆ, ಯಾವ ಕಾಯಿಲೆ ಚಿಕಿತ್ಸೆಗೆ ಯಡಿಯೂರಪ್ಪ ದಾಖಲಾಗುತ್ತಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಯಡಿಯೂರಪ್ಪ ಅವರಿಗೆ ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ನೀಡಿದಂತೆ ರಾಯಲ್ ಟ್ರೀಟ್ ಮೆಂಟ್ ಸಿಗುತ್ತದೆಯೆ, ಅಥವಾ ಎರಡನೇ ಮಹಡಿಯ ಸಾಮಾನ್ಯ ಸ್ಪೆಷಲ್ ವಾರ್ಡ್ ಗೆ ಸೇರಿಸಲಾಗುತ್ತದೆಯೇ ಎಂಬುದರ ಬಗ್ಗೆ ಡಾ. ತಿಲಕ್ ಮಾಹಿತಿ ನೀಡಿಲ್ಲ.

ನಿಯಮದ ಪ್ರಕಾರ ಜಯದೇವ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆದ ನಂತರ ಪರಪ್ಪನ ಅಗ್ರಹಾರ ಜೈಲಿಗೆ ಮರಳಬೇಕಿತ್ತು. ಆದರೆ, ಯಡಿಯೂರಪ್ಪ ಅವರ ದೇಹದಲ್ಲಿನ ಸಕ್ಕರೆ ಅಂಶ ಇದ್ದಕ್ಕಿದಂತೆ ಜಾಸ್ತಿಯಾಗಿದೆ. ರಕ್ತದೊತ್ತಡ ಕೂಡಾ ನಿಯಂತ್ರಣದಲ್ಲಿಲ್ಲ.

ಸೋಮವಾರ ರಾತ್ರಿ ಹಾಗೂ ಇಂದು ಮಧ್ಯಾಹ್ನ ಕೂಡಾ ನಿಯಂತ್ರಣದಲ್ಲಿದ್ದ ಬಿಪಿ, ಶುಗರ್ ಇದ್ದಕ್ಕಿದ್ದಂತೆ ಏರುಪೇರಾದ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ದಾಖಲಿಸುವಂತೆ ಜೈಲು ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ.

English summary
Jayadeva Hospital Director Dr.CN Manjunath says jailbird former Jailbird EX CM BS Yeddyurappa has be discharged from Sri Jayadeva hospital on Tuesday (Oct18). But, Yeddyurappa finds a way to escape Parappana Agrahara jail and now shifted to Victoria Hospital for getting treatment to Diabetes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X