ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇರ ಪ್ರಸಾರದಲ್ಲಿ ಸಂಭೋಗ: ಯುವ ದಂಪತಿ ಸಾಹಸ

By Srinath
|
Google Oneindia Kannada News

live-sex-for-porn-website-to-support-daughter
ವಾಷಿಂಗ್ಟನ್, ಅ. 17: ಇದೊಂದು ವಿಕ್ಷಿಪ್ತ, ವಿಚಿತ್ರ ಸುದ್ದಿ. ಹಣಕಾಸು ಸಂಕಷ್ಟದಲ್ಲಿರುವ ಅಪ್ಪ-ಅಮ್ಮ ತಮ್ಮ 20 ತಿಂಗಳ ಮಗಳಿಗಾಗಿ ಅಶ್ಲೀಲ ವೆಬ್‌ಸೈಟ್‌ನಲ್ಲಿ ಪ್ರಸಾರವಾಗುವ ಲೈಂಗಿಕ ವಿಡಿಯೋಗಾಗಿ ನೇರ ಪ್ರಸಾರದಲ್ಲಿ ಸಂಭೋಗ ನಡೆಸಿದ್ದಾರೆ.

ವೆಬ್ ಕ್ಯಾಮರಾ ಎದುರು ನಡೆಯುವ ಈ ಸಂಭೋಗದ ವಿಡಿಯೋವನ್ನು ಇಂಟರ್ನೆಟ್ ಬಳಕೆದಾರರು ನೇರವಾಗಿ ನೋಡಬಹುದು. ಆದರೆ ಇದನ್ನು ವೀಕ್ಷಿಸಲು ಒಂದು ನಿಮಿಷಕ್ಕೆ 7 ಡಾಲರು ಅಂದರೆ ಸುಮಾರು ಮುನ್ನೂರು ರುಪಾಯಿ ತೆರಬೇಕಾಗುತ್ತದೆ.

ಆದರೆ ಇದು ಗುಡ್ ಕಾಸ್. ಅಂದರೆ ಅನಾರೋಗ್ಯ ಪೀಡಿತ ಮಗುವಿನ ಆಸ್ಪತ್ರೆ ಖರ್ಚಿಗೆ ಈ ಹಣ ವಿನಿಯೋಗವಾಗುತ್ತದೆ ಎಂದು ಇಂತಹ ಸಂಭೋಗ ಸಾಹಸದಲ್ಲಿ ಪಾಲ್ಗೊಂಡಿದ್ದ 24 ವರ್ಷದ ಟೈಲರ್ ಮತ್ತು 21 ವರ್ಷದ ಬರ್ಕ್ಲೆ ಹೇಳಿಕೊಂಡಿದ್ದಾರೆ. ಆದರೆ ದಂಪತಿ ತಮ್ಮ ಪೂರ್ಣ ಹೆಸರು, ವಿಳಾಸಗಳನ್ನು ಬಹಿರಂಗಪಡಿಸಿಲ್ಲ.

ಮಧ್ಯರಾತ್ರಿಗೆ ಸರಿಯಾಗಿ ನಡೆಯುವ ಈ ಸಂಭೋಗ ನೇರ ಪ್ರಸಾರಕ್ಕೆ ಭಾರಿ ಬೇಡಿಕೆ ಬಂದಿದ್ದು ವಾರಕ್ಕೆ ಒಂದು ಸಾವಿರ ಡಾಲರಿಗಿಂತ ಹೆಚ್ಚು ಹಣ ಕ್ರೋಡೀಕರಿಸುವ ಅಂದಾಜಿದೆ ಎಂದು ದಂಪತಿ ತಿಳಿಸಿದ್ದಾರೆ.

'Our America with Lisa Ling' ಎಂಬ Amateur Porn ಟಿವಿ ಕಾರ್ಯಕ್ರಮದಲ್ಲಿ ಅಕ್ಟೋಬರ್ 16ರಂದು ರಾತ್ರಿ 10 ಗಂಟೆಗೆ ಈ ದಂಪತಿ ಬಗ್ಗೆ ಕಾರ್ಯಕ್ರಮ ನಡೆಸಿಕೊಟ್ಟಾಗ ವಿಷಯ ಇಡೀ ಜಗತ್ತಿಗೆ ತಿಳಿದುಬಂದಿದೆ.

English summary
A couple struggling with financial problems performs live sex sessions streamed to a pornography website to pay the bills and support their 20-month-old daughter. They have sex in front of their web camera and broadcast it to Internet users, who pay up to 7 dollars per minute to watch them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X