ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸರ ನಿಗಾದಲ್ಲಿ ಕಟ್ಟಾ ಕ್ಯಾನ್ಸರ್ ಗೆ ಚಿಕಿತ್ಸೆ

By Mahesh
|
Google Oneindia Kannada News

No bail to Katta Subramanya Naidu
ಬೆಂಗಳೂರು, ಅ.7: ಕೆಐಎಡಿಬಿ ಭೂ ಹಗರಣದಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಕ್ಯಾನ್ಸರ್ ಕಾಯಿಲೆ ಅನುಕಂಪದ ಮೇಲೆ ಜೈಲುವಾಸದಿಂದ ಮುಕ್ತಿಹೊಂದುವ ಆಸೆ ಕೊಂಚ ಈಡೇರಿದೆ.

ಖಾಸಗಿ ಆಸ್ಪತ್ರೆಯಲ್ಲಿ ಲಿಂಪೋ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯಲು ಕಟ್ಟಾಗೆ ಅನುಮತಿ ಸಿಕ್ಕಿದೆ. ಪೊಲೀಸರ ನಿಗಾದಲ್ಲಿ ಕಟ್ಟಾ ಅವರಿಗೆ ಚಿಕಿತ್ಸೆ ನೀಡುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಸೂಚಿಸಿದೆ.

ಕ್ಯಾನ್ಸರ್ ಕಥೆ: ಸಿನೀಯರ್ ಕಟ್ಟಾ ಅವರಿಗೆ ಇರುವ ರಕ್ತ ಕ್ಯಾನ್ಸರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಈ ಕಾಯಿಲೆಗೆ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯಬಹುದೆಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.

ಕಿದ್ವಾಯಿ ಮೆಮೋರಿಯಲ್ ಇನ್ಸ್‌ಟಿಟ್ಯೂಟ್ ಆಫ್ ಆಂಕಾಲಜಿ ಆಸ್ಪತ್ರೆಯ ನಿರ್ದೇಶಕರಿಂದ ಕಟ್ಟಾ ಆರೋಗ್ಯ ಸ್ಥಿತಿ ಬಗ್ಗೆ ಸವಿವರವಾದ ವರದಿಯನ್ನು ನ್ಯಾಯಮೂರ್ತಿ ಸುಧೀಂದ್ರ ರಾವ್ ಅವರು ಪಡೆದಿದ್ದರು.

ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಲೀಲಾವತಿ ಮತ್ತು ಲಂಡನ್‌ನ ರಾಯಲ್ ಫ್ರೀ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ.

ಸದ್ಯಕ್ಕೆ ಕಟ್ಟಾ ಅವರಿಗೆ ಮುಂಬೈಗೆ ಹೋಗಲು ಅನುಮತಿ ನೀಡಿ ಎಂದು ಕಟ್ಟಾ ಪರ ವಕೀಲರು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದರು. ಅದರಂತೆ ಕಟ್ಟಾ ಅವರಿಗೆ ಚಿಕಿತ್ಸೆಗೆ ಕೋರ್ಟ್ ಅನುಮತಿ ನೀಡಿದೆ.

English summary
Lokayukta Special Court has rejected bail plea made by former minister Katta Subramanya Naidu today(Oct.17). However Court allowed the tainted Katta to get treatment for his cancer in private hospital under police observation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X