ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡ್ವಾಣಿ ಯಾತ್ರೆಗೆ ರೈಲ್ವೇಸ್ ನಿಂದ ಬ್ರೇಕ್ !!

|
Google Oneindia Kannada News

LK Advani
ನವದೆಹಲಿ ಅ 12: ಉಕ್ಕಿನಮನುಷ್ಯ ಲಾಲ್ ಕೃಷ್ಣ ಆಡ್ವಾಣಿ ಅವರ ಜನ ಚೇತನ ಯಾತ್ರೆಗೆ ಎರಡನೇ ದಿನ ವಿಘ್ನ ಉಂಟಾಗಲಿದೆ. ಭಾರತೀಯ ರೈಲ್ವೆ ಬುಧವಾರ (ಅ 12) ಸಂಜೆ ಐದು ಗಂಟೆಗೆ ಮುಘಲ್ ಸರಾಯ್ ನಗರದಲ್ಲಿ ನಡೆಯಬೇಕಾಗಿದ್ದ ಯಾತ್ರೆಗೆ ಮತ್ತು ಸಾರ್ವಜನಿಕ ಸಭೆಗೆ ಅನುಮತಿ ನೀಡಲು ನಿರಾಕರಿಸಿದೆ.

ಉತ್ತರಪ್ರದೇಶದ ಗಂಗಾನದಿ ತಟದಲ್ಲಿರುವ ಈ ನಗರ ರೈಲ್ವೆ ಇಲಾಖೆಯ ಪ್ರಮುಖ ಜಂಕ್ಷನ್. ವಾರಣಾಸಿಯಿಂದ ಹತ್ತು ಕಿ.ಮೀ ದೂರದಲ್ಲಿರುವ ಮೊಘಲ್ ಸರಾಯಿ ನಗರ ಏಷ್ಯಾದಲ್ಲೇ ದೊಡ್ಡ ರೈಲ್ವೆ ಮಾರ್ಷಲಿಂಗ್ ಯಾರ್ಡ್. ಹೀಗಾಗಿ ನಗರದ ಹೆಚ್ಚಿನ ಪ್ರದೇಶಗಳು ರೈಲ್ವೆ ಇಲಾಖೆಯ ಸುಪರ್ದಿಯಲ್ಲಿದೆ.

ಆಡ್ವಾಣಿಯವರ ಯಾತ್ರೆಯ ಮಾರ್ಗ ಸೂಚಿ ಪ್ರಕಾರ ಬುಧವಾರ (ಅ 12) ಯಾತ್ರೆ ವಾರಣಾಸಿ ನಗರಕ್ಕೆ ಬರಲಿದ್ದು ಅಲ್ಲಿ ಆಡ್ವಾಣಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮವಿದೆ. ಉತ್ತರಪ್ರದೇಶ ಸರಕಾರದ ಮತ್ತು ಆಡ್ವಾಣಿಯವರ ಮುಂದಿನ ಹೆಜ್ಜೆಯ ಬಗ್ಗೆ ಇದುವರೆಗೆ ವರದಿಯಾಗಿಲ್ಲ.

English summary
Senior BJP leader LK Advani's Jan Chetana Yatra runs into its first hurdle on Day 2. Since Railways has refused to give him permission in for his Mughalsarai Rally, scheduled at 5PM on Wednesday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X