ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Q2: ಇನ್ಫೋಸಿಸ್ ಗೆ 1,906 ಕೋಟಿ ರು ಲಾಭ

By Mahesh
|
Google Oneindia Kannada News

Infosys Q2 net profit up
ಬೆಂಗಳೂರು, ಅ.12: ದೇಶದ ಎರಡನೆ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ಬುಧವಾರ(ಅ.12)ರಂದು ತನ್ನ ಎರಡನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ.

ಸೆ.30, 2011ಕ್ಕೆ ಕೊನೆಗೊಂಡ ತೈಮಾಸಿಕದಲ್ಲಿ ಶೇ.9.72ರಷ್ಟು ಏರಿಕೆಯೊಂದಿಗೆ 1,906 ಕೋಟಿ ರು. ಒಟ್ಟಾರೆ ನಿವ್ವಳ ಲಾಭ ಗಳಿಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 6,947 ಕೋಟಿ ರು ಗಳಿಸಿದ್ದ ಇನ್ಫೋಸಿಸ್ ಈ ವರ್ಷ 8,099 ಕೋಟಿ ರು ಗಳಿಸಿ ಮುನ್ನಡೆ ಸಾಧಿಸಿದೆ. ಒಟ್ಟಾರೆ ಶೇ 16.58 ಏರಿಕೆ ಪಡೆದಿದೆ.

ಡಿ.31 ರ ಸುಮಾರಿಗೆ ಸುಮಾರು 9,012 ಕೋಟಿ ರು ಗಳಿಸಿ year-on-year ಪ್ರಗತಿಯಲ್ಲಿ ಶೇ. 24.2 ರಿಂದ ಶೇ. 26.8 ರಷ್ಟು ಏರಿಕೆ ಕಾಣುವ ನಿರೀಕ್ಷೆಯಿದೆ ಎಂದು ಸಿಎಫ್ ಒ ವಿ ಬಾಲಕೃಷ್ಣನ್ ಹೇಳಿದ್ದಾರೆ.

ಮಧ್ಯಂತರ ಡಿವಿಡೆಂಡ್ ಆಗಿ ಪ್ರತಿ ಈಕ್ವಿಟಿ ಶೇರುಗಳನ್ನು ರು.15ರಂತೆ ಬಿಡಲು ಬೋರ್ಡ್ ನಿರ್ಧರಿಸಿದೆ. ಪ್ರಸಕ್ತ ತ್ರೈಮಾಸಿಕದಲ್ಲಿ ಇನ್ಫೋಸಿಸ್ 15,352 ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ.

ಸೆ.30, 2011ಕ್ಕೆ ಅನ್ವಯವಾಗುವಂತೆ ಒಟ್ಟಾರೆ ಉದ್ಯೋಗಿಗಳ ಸಂಖ್ಯೆ 1,41,822 ದಾಟಿದೆ. 45 ಹೊಸ ಗ್ರಾಹಕರನ್ನು ಇನ್ಫೋಸಿಸ್ ಸೆಳೆದುಕೊಂಡಿದೆ. ಬಿಎಸ್ ಇ ಸೆನ್ಸೆಕ್ಸ್ ನಲ್ಲಿ ಬೆಳಗ್ಗೆ 10.30ರ ಸುಮಾರಿಗೆ ಇನ್ಫಿ ಷೇರುಗಳು ಶೇ. 5.57 ರಷ್ಟು ಏರಿಕೆ ಕಂಡಿದೆ.

English summary
The India’s second largest software major Infosys reported 9.72 per cent growth in its consolidated net profit to Rs 1,906 crore for the second quarter ended September 30. Infosys added 15,352 employees and 45 clients during this quarter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X